CHITRADURGA NEWS | 01 JULY 2025
ಚಿತ್ರದುರ್ಗ: ಭದ್ರಾ ಜಲಾಶಯದ ಬಲ ನಾಲೆಯಿಂದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕುಗಳಿಗೆ ಐಐಎಸ್‌ಸಿ (IISC) ವಿಜ್ಞಾನಿಗಳ ತಂಡ ಸಮ್ಮತಿಸಿದೆ.
ಈಗ ನೀರಾವರಿ ಇಲಾಖೆ ಇಂಜಿನಿಯರ್‌ಗಳು ಭದ್ರ ಬಲದಂಡೆ ನಾಲೆಯ ಮೂಲಕ ಬಿಆರ್‌ಪಿನಲ್ಲಿರುವ ಶುದ್ಧೀಕರಣ ಘಟಕಕ್ಕೆ ೩೦ ಕ್ಯೂಸೆಕ್ ನೀರು ತೆಗೆದುಕೊಂಡು ಹೋಗುವುದರಿಂದ ನಾಲೆಗೆ ತೊಂದರೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಇದನ್ನೂ ಓದಿ: ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ನಾಲೆಯನ್ನು ಹೊಡೆದು ಅದಕ್ಕೆ ಸಂಪರ್ಕ ಕಲ್ಪಿಸಿಕೊಂಡು ಹೊಸದುರ್ಗ ತಾಲೂಕಿನ 346 ಜನವಸತಿ ಪ್ರದೇಶ ಹಾಗೂ ತರೀಕೆರೆ ತಾಲೂಕಿನ 113 ಜನವಸತಿ ಪ್ರದೇಶಗಳಿಗೆ ನೀರು ತೆಗೆದುಕೊಂಡು ಹೋಗಲು ರೂಪಿಸಿರುವ ಕಾಮಗಾರಿ ವೈಜ್ಞಾನಿಕವಾಗಿದೆ ಎಂದು ತಜ್ಞರ ತಂಡ ಹೇಳಿದೆ.
ಇಡೀ ಕಾಮಗಾರಿ ವೈಜ್ಞಾನಿಕವಾಗಿದ್ದು, ಇದರಿಂದ ಜಲಾಶಯ ಅಥವಾ ನಾಲೆಗೆ ಯಾವುದೇ ತೊಂದರೆ ಇಲ್ಲ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISC) ತಂಡ ಉಲ್ಲೇಖ ಮಾಡಿದೆ.
ಇದನ್ನೂ ಓದಿ: ಹೊಸದುರ್ಗ ಬಂದ್ | ಶಾಸಕ ಬಿ.ಜಿ.ಗೋವಿಂದಪ್ಪ ನೇತೃತ್ವದಲ್ಲಿ ಹೋರಾಟ
ಐಐಎಸ್‌ಸಿ ವರದಿ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ನಾಲೆಯಿಂದ ಶುದ್ಧೀಕರಣ ಘಟಕಕ್ಕೆ ನೀರು ತರುವ ಕಾಮಗಾರಿ ಇಂದಿನಿಂದ ಪುನರಾರಂಭ ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತಯಾರಿ ನಡೆಸಿದೆ.
ಬಲದಂಡೆ ನಾಲೆಗೆ ಕುಡಿಯುವ ನೀರಿನ ಉದ್ದೇಶಕ್ಕೆ 30 ಕ್ಯೂಸೆಕ್ ಹರಿಸುವುದರಿಂದ ಕೊನೆಯ ಭಾಗದ ರೈತರಿಗೆ ನೀರು ಹರಿಯಲು ಯಾವುದೇ ತೊಂದರೆ ಆಗುವುದಿಲ್ಲ. ಇದಕ್ಕಿಂತ ಹೆಚ್ಚು ನೀರನ್ನು ಶುದ್ಧೀಕರಣ ಘಟಕಕ್ಕೂ ತೆಗೆದುಕೊಂಡು ಹೋಗಲು ತಾಂತ್ರಿಕವಾಗಿ ಬರುವುದಿಲ್ಲ. ಹೀಗಾಗಿ ರೈತರು ಅನಗತ್ಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಇಂಜಿನಿಯರ್‌ಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕುಡಿಯುವ ನೀರಿಗೆ ಅಡ್ಡಿ ಮಾಡುವುದು ಅಕ್ಷಮ್ಯ | ಸಂಸದ ಗೋವಿಂದ ಕಾರಜೋಳ
ಇನ್ನೂ ಜುಲೈ 15ಕ್ಕೆ ನೀರು ಹರಿಸಬೇಕು. ಅಷ್ಟರಲ್ಲಿ ಕಾಮಗಾರಿ ಮುಗಿಯಬೇಕು ಎಂದು ದಾವಣಗೆರೆಯ ಹೋರಾಟಗಾರರು ಒತ್ತಡ ಹೇರಿದ್ದರು. ಆದರೆ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ) ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್ ಪ್ರತಿಕ್ರಿಯಿಸಿದ್ದು, ಜುಲೈ 15ಕ್ಕೆ ನೀರು ಹರಿಸುವ ವಾಡಿಕೆ ಏನೂ ಇಲ್ಲ. ಮಳೆಯ ಪ್ರಮಾಣ, ಜಲಾಶಯದ ನೀರಿನ ಮಟ್ಟ ನೋಡಿಕೊಂಡು, ಐಸಿಸಿ ಸಭೆ ನಡೆಸಿ ಅಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಜುಲೈ 29 ರಂದು ಸಭೆ ನಡೆಸಿ ನಂತರ ನಾಲೆಗೆ ನೀರು ಹರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
