ಮುಖ್ಯ ಸುದ್ದಿ
ಭೀಮಸಮುದ್ರದಲ್ಲಿ ಅದ್ದೂರಿಯಾಗಿ ಜರುಗಿದ ಹುಚ್ಚಯ್ಯನ ಉತ್ಸವ
CHITRADURGA NEWS | 30 MAY 2024
ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಗುರುವಾರ ಹುಚ್ಚಯ್ಯನ ಉತ್ಸವವು ಅದ್ದೂರಿಯಾಗಿ ಜರುಗಿತು.
ಇದನ್ನೂ ಓದಿ: ಪತ್ರಿಕೆ ವಿತರಕರ ನಡಿಗೆ ಕೋಟೆ ನಗರಿ ಕಡೆಗೆ | ಸೆಪ್ಟೆಂಬರ್ 8 ರಂದು ರಾಜ್ಯ ಸಮ್ಮೇಳನ
ಗ್ರಾಮದಲ್ಲಿ ಹುಚ್ಚಯ್ಯನ ಮೆರವಣಿಗೆ ನಡೆಯಿತು. ಹುಚ್ಚಯ್ಯನ ಮೆರವಣಿಗೆಯಲ್ಲಿ ಸುಮಾರು 70 ಜನರ ಕಲಾತಂಡ ಭಾಗವಹಿಸಿದ್ದವು, ಭಟ್ಕಳದ ಕಲಾತಂಡದವರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸುಮಾರು 8 ಗಂಟೆಯಿಂದ ಮೆರವಣಿಗೆ ಪ್ರಾರಂಭಗೊಂಡು ಮಧ್ಯಾಹ್ನ 3ರ ತನಕ ನಡೆಯಿತು, ಗ್ರಾಮದ ಜನರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹುಚ್ಚಯ್ಯನ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಶಿಕ್ಷಕರ ಧ್ವನಿಯಾದ ನಾರಾಯಣಸ್ವಾಮಿ | ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ
ಸೋಮವಾರದಿಂದ ಶ್ರೀ ಮರುಡಾಂಬಿಕಾ ದೇವಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಮಂಗಳವಾರ ದೇವಿಯ ಮೊದ್ಲುಗಿತ್ತಿ ಉತ್ಸವ ನಡೆಯಿತು. ಅಂದು ಗ್ರಾಮದ ಬೀದಿಗಳಲ್ಲಿ ದೇವಿಯ ಮೆರವಣಿಗೆ ಕಾರ್ಯಕ್ರಮ ನಡೆಯಿತು. ಬುಧವಾರ ಸಂಜೆ ಹೂವಿನ ಪಲ್ಲಕ್ಕಿ ಉತ್ಸವ ಜರುಗಿತು.
ನಾಳೆ 4 ಗಂಟೆಗೆ ತೇರು, ಶನಿವಾರ ಸಂಜೆ 6 ಗಂಟೆಗೆ ಸಿಡಿಯು, ಭಾನುವಾರ ಗಾವು ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ.