ಮುಖ್ಯ ಸುದ್ದಿ
CONGRESS: ಶಾಸಕರು, ಸಚಿವರು ಬೀದಿಗಿಳಿದು ಪ್ರತಿಭಟಿಸುವುದು ಎಷ್ಟು ಸರಿ ?
CHITRADURGA NEWS | 19 AUGUST 2024
ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಶಾಸಕರು, ಸಚಿವರು ಬೀದಿಗಿಳಿದು ಪ್ರತಿಭಟನೆ ನಡೆಸುವುದು ಎಷ್ಟು ಸರಿ ಎಂದು ಜೆಡಿಎಸ್ (JDS) ಯುವ ಘಟಕದ ಜಿಲ್ಲಾಧ್ಯಕ್ಷ ಓ.ಪ್ರತಾಪ್ ಜೋಗಿ ಪ್ರಶ್ನಿಸಿದ್ದಾರೆ.
ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲೆಯ ಶಾಸಕರು, ಸಚಿವರು ಮುಖ್ಯಮಂತ್ರಿಗಳ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮುಡಾ ಅಕ್ರಮ | ಸಿದ್ದರಾಮಯ್ಯ ಬೆಂಬಲಕ್ಕೆ ಹಿಂದುಳಿದ ದಲಿತ ಮಠಾಧೀಶರು
ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾತ್ಯಾತೀತ ನಾಯಕ ಮತ್ತು ಪ್ರಗತಿಪರ ಚಿಂತಕ ಎಂದು ಹೆಸರು ಪಡೆದಿರುವ ಇವರ ಮೇಲೆ ಆರೋಪ ಬಂದಾಗ ಅವರ ಪರವಾಗಿ ಪ್ರತಿಭಟನೆ ಮಾಡುತ್ತಿರುವುದು ಸ್ವಾಗತರ್ಹ.
ಆದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ಒಂದು ವಾರದಿಂದ ಸುರಿಯುತ್ತಿರುವ ಮಳೆ, ಗಾಳಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆಗಳು ನೆಲಸಮವಾಗಿವೆ. ಎಷ್ಟೋ ಕುಟುಂಬಗಳು ಬೀದಿಪಾಲಾಗಿವೆ. ಇಂತಹ ಗ್ರಾಮಗಳಿಗೆ ಸೌಜನ್ಯಕ್ಕೂ ಭೇಟಿ ನೀಡದ ಶಾಸಕರು, ಸಚಿವರು ಅಧಿಕಾರ ದಾಹಕ್ಕಾಗಿ ಸಿದ್ದರಾಮಯ್ಯ ಪರವಾಗಿ ಪ್ರತಿಭಟನೆ ನಡೆಸುತ್ತಿರುವುದು ನೋವಿನ ಸಂಗತಿ ಎಂದಿದ್ದಾರೆ.
ಇದನ್ನೂ ಓದಿ: ವಾಣಿ ವಿಲಾಸ ಸಾಗರ ಜಲಾಶಯ | ಹೆಚ್ಚಾಗುತ್ತಿದೆ ಒಳಹರಿವು
ಒಬ್ಬ ಸಾಮಾನ್ಯನಿಗೆ ತೊಂದರೆಯಾಗಿ ಕುಟುಂಬ ಬೀದಿ ಪಾಲಾದಾಗ ಸಚಿವರಾಗಲಿ, ಶಾಸಕರಾಗಿಲಿ, ಕಾಂಗ್ರೆಸ್ ಮುಖಂಡರಾಗಲಿ ಪ್ರತಿಭಟನೆ ಮಾಡಿರುವ ನಿದರ್ಶನಗಳಿಲ್ಲ. ರಾಜಕಾರಣದಲ್ಲಿ ಅನೇಕ ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ಕೇವಲ ಆರೋಪ ಬಂದ ತಕ್ಷಣ ರಾಜೀನಾಮೆ ನೀಡಿ ನಂತರ ಆರೋಪದಿಂದ ಮುಕ್ತರಾದಾಗ ಮತ್ತೆ ಮಂತ್ರಿಗಳು ಮತ್ತು ಸಚಿವರುಗಳಾಗಿರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ಜಾತ್ಯಾತೀತ ನಾಯಕರಾಗಿ ಉಳಿಯಬೇಕೆಂದು ನಮ್ಮ ಆಶಯ.
ಇದನ್ನೂ ಓದಿ: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ | ಆಗಸ್ಟ್ 20 ರಿಂದ ಆರಂಭ
ಹಿಂದುಳಿದ ವರ್ಗಗಳ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ನಮ್ಮ ಒತ್ತಾಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.