ಕ್ರೈಂ ಸುದ್ದಿ
Holalkere Ploice; ಜ್ಯೂಸ್ ಕುಡಿಯುವಾಗ 3.50 ಲಕ್ಷ ದೋಚಿದ್ದ ಕಳ್ಳನ ಬಂಧನ | ಹೊಳಲ್ಕೆರೆ ಪೊಲೀಸರ ಕಾರ್ಯಚರಣೆ
CHITRADURGA NEWS | 13 JULY 2024
ಚಿತ್ರದುರ್ಗ: ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಬಂದು ಸ್ಕೂಟಿಯ ಡಿಕ್ಕಿಯಲ್ಲಿಟ್ಟು, ಜ್ಯೂಸ್ ಕುಡಿಯಲು ಹೋಗಿದ್ದ ವ್ಯಕ್ತಿಯ ಗಮನ ಬೇರೆಡೆ ಸೆಳೆದು ಹಣ ಎಗರಿಸಿದ್ದ ಖತರ್‍ನಾಕ್ ಕಳ್ಳನನ್ನು ಹೊಳಲ್ಕೆರೆ ಪೊಲೀಸರು ಬಂಧಿಸಿ ಕರೆ ತಂದಿದ್ದಾರೆ.
2024 ಏಪ್ರಿಲ್ 24 ರಂದು ಹೊಳಲ್ಕೆರೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಎಸ್‍ಬಿಐ ಬ್ಯಾಂಕಿನಲ್ಲಿ ಹಣ ಬಿಡಿಸಿಕೊಂಡು ಬಂದಿದ್ದ ಕೆ.ಕ್ಯಾತಪ್ಪ, ತನ್ನ ಸ್ಕೂಟಿಯ ಡಿಕ್ಕಿಯಲ್ಲಿ ಹಣ ಇಟ್ಟು ಪಕ್ಕದಲ್ಲೇ ಜ್ಯೂಸ್ ಕುಡಿಯಲು ಹೋಗಿದ್ದಾರೆ.
ಇದನ್ನೂ ಓದಿ: ಕಳಪೆ ಆಹಾರ | ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಈ ಕ್ಷಣಕ್ಕೆ ಹೊಂಚಿ ಹಾಕಿ ನಿಂತಿದ್ದ ಕಳ್ಳರ ಗ್ಯಾಂಗ್ ಕ್ಯಾತಪ್ಪನ ಹಿಂದೆಯೇ ಹೋಗಿ ಜ್ಯೂಸ್ ಕುಡಿಯುವಾಗ ಸ್ಕೂಟಿ ಕಾಣದಂತೆ ಅಡ್ಡ ನಿಂತಿದ್ದಾರೆ. ಮತ್ತೊಬ್ಬ ಕೈಚಳಕ ತೋರಿಸಿ ಸ್ಕೂಟಿಯಲ್ಲಿದ್ದ 3.50 ಲಕ್ಷ ಹಣವನ್ನು ಕಳ್ಳತನ ಮಾಡಿದ್ದಾನೆ.
ಸದರಿ ಪ್ರಕರಣ ಬೇಧಿಸಲು ಹೊಳಲ್ಕೆರೆ ಸಿಪಿಐ ಎಂ.ಬಿ.ಚಿಕ್ಕಣ್ಣ ಹಾಗೂ ಪಿಎಸ್‍ಐ ಸುರೇಶ್ ಹಾಗೂ ಸಿಬ್ಬಂದಿಗಳ ತಂಡ ಮುಂದಾಗಿದ್ದು, ಕಳ್ಳತನ ಮಾದರಿಯ ಜಾಡು ಹಿಡಿದು ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ತಲಾಶ್ ನಡೆಸಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ನಗರಿ ತಾಲೂಕು ಓ.ಜಿ.ಕೊಪ್ಪಮ್ ಗ್ರಾಮದಲ್ಲಿ 51 ವರ್ಷದ ಕೃಷ್ಣನ್ ಪತ್ತೆಯಾಗಿದ್ದು, 3.50 ಲಕ್ಷ ರೂ. ನಗದು ಸಮೇತ ಬಂದಿಸಿ ಕರೆತಂದಿದ್ದಾರೆ.
ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಆಂಧ್ರಪ್ರದೇಶ, ಚಿತ್ತೂರು ಜಿಲ್ಲೆಯ ವೆಂಕಟೇಶಲು ಅಲಿಯಾಸ್ ಬಿಹಾರ್, ಪಿ.ಡೆಲ್ಲಿ ಹಾಗೂ ಶಿವಾ ಪತ್ತೆಗೆ ಬಲೆ ಬೀಸಿದ್ದಾರೆ.
ಎಸ್ಪಿ ಧರ್ಮೇಂದ್ರಕುಮಾರ್ ಮೀನಾ ಶ್ಲಾಘನೆ:
ಸದರಿ ಪ್ರಕರಣದಲ್ಲಿ ಹೊಳಲ್ಕೆರೆ ವೃತ್ತ ನಿರೀಕ್ಷಕ ಎಂ.ಬಿ.ಚಿಕ್ಕಣ್ಣ, ಪಿಎಸ್‍ಐ ಸುರೇಶ, ಸಿಬ್ಬಂದಿಗಳಾದ ದೇವರಾಜ, ವಸಂತಕುಮಾರ್, ಮಂಜುನಾಥ, ನಿರಂಜನ, ಬಸವರಾಜ ಆಂದ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವೆಡೆ ತಲಾಶ್ ನಡೆಸಿ ಆರೋಪಿಯನ್ನು ಪತ್ತೆ ಮಾಡಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಧರ್ಮೇಂದ್ರಕುಮಾರ್ ಮೀನಾ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಕೇಂದ್ರದಿಂದ 5300 ಕೋಟಿ ತಂದು ಸಮಗ್ರ ನೀರಾವರಿ ಯೋಜನೆ ರೂಪಿಸಲು ರೈತರ ಒತ್ತಾಯ
ಬಂಧಿತ ಆರೋಪಿ ಕೃಷ್ಣನ್ ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂ, ವೈಯಾಲಿ ಕಾವಲು ಮತ್ತು ಬಾಣಸವಾಡಿ ಪೊಲೀಸ್ ಠಾಣೆಗಳಲ್ಲೂ ದೂರುಗಳಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ.