CHITRADURGA NEWS | 14 MARCH 2025
ಹಿರಿಯೂರು: ಇಕೋ ಕಾರು ಹಾಗೂ ಈಚರ್ ಲಾರಿ ನಡುವೆ ಸಂಭವಿಸಿದ ಭೀಕರ ಅಫಘಾತದಲ್ಲಿ ಹಿರಿಯೂರಿನ ಸಿದ್ಧರಾಜು(35) ಮೃತಪಟ್ಟಿದ್ದಾರೆ.
Also Read: ಭಕ್ತ ಸಾಗರದ ನಡುವೆ ಸಾಗಿದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ | ಆಗಸದಲ್ಲಿ ಗರುಢ ಪ್ರದಕ್ಷಿಣೆ

ಗುರುವಾರ ರಾತ್ರಿ 9.30 ರ ನಂತರ ಹಿರಿಯೂರು ಹೊರವಲಯದ ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150A ರಲ್ಲಿ ಆರ್.ಕೆ.ಪವರ್ ಬಳಿ ಅಪಘಾತ ಸಂಭವಿಸಿದೆ.
ಇಕೋ ವಾಹನ ಓವರ್ ಟೇಕ್ ಮಾಡುವಾಗ ಮುಂದೆ ಬರುತ್ತಿದ್ದ ಈಚರ್ ವಾಹನಕ್ಕೆ ಕಾರು ಡಿಕ್ಕಿಯಾಗಿದೆ ಎನ್ನಲಾಗಿದೆ.
ದುರ್ಘಟನೆಯಲ್ಲಿ ಹಿರಿಯೂರಿನ ಶುದ್ಧ ಕುಡಿಯುವ ನೀರು ವ್ಯಾಪಾರ ಮಾಡುತ್ತಿದ್ದ ಸಿದ್ಧನಾಯಕ ಸರ್ಕಲ್ ನಿವಾಸಿ ಸಿದ್ಧರಾಜು ಅಸುನೀಗಿದ್ದಾರೆ.
Also Read: ಜಿಲ್ಲೆಯ ಜನರಿಗೆ ಎಚ್ಚರಿಕೆ | ಮಿತಿಮೀರಿದ ತಾಪಮಾನ | ಈ ಸಲಹೆ ಪಾಲಿಸಿ..
ಘಟನಾ ಸ್ಥಳಕ್ಕೆ ಹಿರಿಯೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
