ಮುಖ್ಯ ಸುದ್ದಿ
ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ಓಂಕಾರ | ಗೋ ಪೂಜೆ, ಧ್ವಜ ಪೂಜೆ

Published on
ಚಿತ್ರದುರ್ಗ ನ್ಯೂಸ್.ಕಾಂ
ನಗರದ ಬಿ.ಡಿ.ರಸ್ತೆಯಲ್ಲಿರುವ ಜೈನ ಧಾಮದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ಗೋ ಪೂಜೆ ಹಾಗೂ ಧ್ವಜ ಪೂಜೆ ಮೂಲಕ ಓಂಕಾರ ಹಾಕಲಾಯಿತು.
ಬೆಳಗ್ಗೆ 8.30ರಿಂದ ಆರಂಭವಾದ ಪೂಜಾ ಕೈಂಕರ್ಯಗಳು ಆರಂಭವಾಗಿ, 9.30ಕ್ಕೆ ಸಮಾಪನಗೊಂಡವು. ಇಂದಿನಿಂದ ಪೆಂಡಾಲ್ ಅಳವಡಿಸುವ ಕೆಲಸಗಳು ಸೇರಿದಂತೆ ಎಲ್ಲ ಕಾರ್ಯಗಳು ಅಧಿಕೃತವಾಗಿ ಆರಂಭವಾಗಲಿವೆ.
ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಹಿನ್ನೆಲೆ: ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಉತ್ಸವ 2006 ರಿಂದ ಪ್ರಾರಂಭವಾಯಿತು. ಆರ್‌ಎಸ್‌ಎಸ್‌ನ ಎರಡನೇ ಸರಸಂಘಚಾಲಕರಾದ ಶ್ರೀ ಗುರೂಜಿ ಜನ್ಮಶತಾಬ್ದಿ ವರ್ಷದಂದು ವಿಶ್ವಹಿಂದೂ ಪರಿಷತ್, ಬಜರಂಗ ದಳದವರು ಗಣೇಶೋತ್ಸವ ಆಚರಣೆಗೆ ತೀರ್ಮಾನಿಸಿದರು.
ನಗರದ ಅಯ್ಯಣ್ಣನ ಪೇಟೆಯಲ್ಲಿದ್ದ ಆರೆಸ್ಸೆಸ್ ಕಚೇರಿ ಶಕ್ತಿನಿಕೇತನದಲ್ಲಿ ಪಂಚಮುಖಿ ಗಣಪನನ್ನು ಪ್ರತಿಷ್ಠಾಪಿಸಿದರು. ಆನಂತರ ಇದು ತ್ಯಾಗರಾಜ ಬೀದಿಯ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ, ಡಿಎಚ್‌ಒ ಕಚೇರಿ ಮುಂಭಾಗ, ಬಳಿಕ ಸ್ಟೇಡಿಯಂ ರಸ್ತೆಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ ಕ್ಕೆ ಶಿಫ್ಟ್ ಆಯಿತು. ಈಗ ಅಂತಿಮವಾಗಿ ಬಿ.ಡಿ.ರಸ್ತೆಯ ಜೈನಧಾಮದಲ್ಲಿ ಪ್ರತಿಷ್ಠಾಪಿಸಿದ ಮಾಡಲಾಗುತ್ತಿದೆ.
ವಿಶಿಷ್ಟ ಗಣಪನ ಮೂರ್ತಿಗಳು: ಪಂಚಮುಖಿ ವಿಗ್ರಹ, ಹನುಮಂತನ ಹೆಗಲ ಮೇಲಿರುವ ಗಣಪ, ಪ್ರಸಕ್ತ ವರ್ಷ ಶಿವನ ರೂಪದಲ್ಲಿರುವ ವಿಗ್ರಹ ಹೀಗೆ ಪ್ರತಿ ವರ್ಷ ವಿಶಿಷ್ಟ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಹಿಂದೂ ಮಹಾಗಣಪನ ಶೋಭಾಯಾತ್ರೆ ಸಾಮಾಜಿಕ ಸಾಮರಸ್ಯೆಕ್ಕೆ ಎಡೆ ಮಾಡಿಕೊಟ್ಟಿದೆ. ಲಕ್ಷಾಂತರ ಜನ ಭಾಗವಹಿಸುವ ಮೂಲಕ ದೇಶದಲ್ಲಿ ಅತೀ ಹೆಚ್ಚು ಜನ ಸೇರುವ ಎರಡನೇ ಗಣೇಶೋತ್ಸವ ಎಂದೂ ಹೆಸರಾಗಿದೆ. ಎಲ್ಲ ಜಾತಿ, ಧರ್ಮಗಳ ಜನರು ಭಾಗವಹಿಸುವುದು ವಿಶೇಷ.
ಯಾದವ ಮಠದ ಕೃಷ್ಣ ಯಾದವಾನಂದ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಎಂಎಲ್ಸಿ ಕೆ.ಎಸ್.ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ಟೈಗರ್ ತಿಪ್ಪೇಸ್ವಾಮಿ, ಪ್ರಮುಖರಾದ ಶರಣ್, ಷಡಾಕ್ಷರಪ್ಪ, ರುದ್ರೇಶ್, ಸಂದೀಪ್ ಮತ್ತಿತರರಿದ್ದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)
Continue Reading
You may also like...
Related Topics:bajarangadal, Chitradurga, hindu maha ganapathi, news, VHP, ಚಿತ್ರದುರ್ಗ, ಬಜರಂಗದಳ, ವಿಎಚ್ಪಿ, ಸುದ್ದಿ, ಹಿಂದೂ ಮಹಾಗಣಪತಿ

Click to comment