ಮುಖ್ಯ ಸುದ್ದಿ
‘ಮೈಚಾಂಗ್’ ಎಫೆಕ್ಟ್, ಮೈ ಚಳಿ ಬಿಟ್ಟು ಸುರಿದ ಮಳೆ | ಹೊಳಲ್ಕೆರೆ, ಹೊಸದುರ್ಗ, ನಾಯಕನಹಟ್ಟಿಯಲ್ಲಿ ಭರ್ಜರಿ ಮಳೆ

ಚಿತ್ರದುರ್ಗ ನ್ಯೂಸ್.ಕಾಂ:
ಮೈಚಾಂಗ್ ಚಂಡಮಾರುತದ ಕಾರಣಕ್ಕೆ ಜಿಲ್ಲೆಯ ವಿವಿಧೆಡೆ ಮತ್ತೊಮ್ಮೆ ಅಕಾಲಿಕವಾಗಿ ಹದವಾದ ಮಳೆ ಸುರಿದಿದೆ.
ಶನಿವಾರ ನಸುಕಿನ 2.30 ರಿಂದ 3.30ರವರೆಗೆ ಉತ್ತಮ ಮಳೆಯಾಗಿದೆ. ಈ ವರ್ಷ ಮಳೆಯಿಲ್ಲ ಎನ್ನುವ ಚಿಂತೆಯಲ್ಲಿದ್ದ ರೈತರಿಗೆ ಅಕಾಲಿಕವಾಗಿ ಸುರಿದ ಮಳೆ ತುಸು ನೆಮ್ಮದಿ ತಂದಿದೆ.
ಈಗಾಗಲೇ ತಮಿಳುನಾಡಿನ ಚೆನ್ನೈನಲ್ಲಿ ಮೈಚಾಂಗ್ ಚಂಡಮಾರುತದ ಕಾರಣಕ್ಕೆ ಸಾಕಷ್ಟು ಮಳೆ ಸುರಿದು ಭಾರೀ ಅನಾಹುತಗಳೇ ಸಂಭವಿಸಿವೆ.
ಇದನ್ನೂ ಓದಿ: ಎಸ್‍ಜೆಎಂ ವಿದ್ಯಾಪೀಠದ ಸಿಇಓ ಭರತ್‍ಕುಮಾರ್ ಸೇವೆಯಿಂದ ಬಿಡುಗಡೆ
ಇದರ ಪರಿಣಾಮವಾಗಿ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆಯಾಗುತ್ತಿದೆ. ಈ ವ್ಯಾಪ್ತಿಯಲ್ಲೇ ಇರುವ ಚಿತ್ರದುರ್ಗ ಜಿಲ್ಲೆಗೂ ಉತ್ತಮ ಮಳೆಯಾಗಿರುವುದರಿಂದ ಕಡಲೆ ಬೆಳೆಗಾರರು ಹಾಗೂ ತೋಟಗಾರಿಕೆ ಬೆಳೆಗಾರರಿಗೆ ಅನುಕೂಲವಾಗುತ್ತಿದೆ.
ಡಿಸೆಂಬರ್ 9 ರಿಂದ 12ರವರೆಗೆ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ವರದಿ ನೀಡಿದೆ. ಅದರಂತೆ ಮಳೆ ಆರಂಭವಾಗಿದ್ದು, ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆಗಳೂ ಕಾಣಿಸುತ್ತಿವೆ.
ಜಿಲ್ಲೆಯ ಎಲ್ಲೆಲ್ಲಿ ಎಷ್ಟೆಷ್ಟು ಮಳೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್:
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ 47 ಮಿಲಿಮೀಟರ್ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ. ಆನಂತರ ನಾಯಕನಹಟ್ಟಿಯಲ್ಲಿ 44 ಎಂ.ಎಂ, ಹೊಸದುರ್ಗದಲ್ಲಿ 40 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ 20.4 ಮಿ.ಮೀ, ಚಿಕ್ಕಜಾಜೂರಿನಲ್ಲಿ 6.6, ಬಿ.ದುರ್ಗದಲ್ಲಿ 4, ಹೊರಕೆರೆದೇವರಪುರದಲ್ಲಿ 22.6 ಹಾಗೂ ತಾಳ್ಯದಲ್ಲಿ 4.3 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ವಾಯ್ಸ್ ಒಂಥರಾ ಇದೆ ಅಂದವರಿಗೆ ಅಬಕಾರಿ ಆದಾಯದ ಲೆಕ್ಕ ಕೊಟ್ಟ ಗೂಳಿಹಟ್ಟಿ
ಹೊಸದುರ್ಗ ತಾಲೂಕಿನ ಬಾಗೂರಿನಲ್ಲಿ 10.3, ಮತ್ತೋಡಿನಲ್ಲಿ 11.4, ಶ್ರೀರಾಂಪುರದಲ್ಲಿ 3.2, ಮಾಡದಕೆರೆಯಲ್ಲಿ 3 ಮಿ.ಮೀ ಮಳೆ ಸುರಿದಿದೆ.
ಚಿತ್ರದುರ್ಗ ನಗರ-1 ರಲ್ಲಿ 19 ಮಿ.ಮೀ, ಚಿತ್ರದುರ್ಗ-2 ರಲ್ಲಿ 4.4, ತುರುವನೂರು 24.8 ಮಿ.ಮೀ, ಹಿರೇಗುಂಟನೂರು 1, ಐನಹಳ್ಳಿ 17.4, ಸಿರಿಗೆರೆ ವ್ಯಾಪ್ತಿಯಲ್ಲಿ 8 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆಯಲ್ಲಿ 19 ಮಿ.ಮೀ, ತಳುಕಿನಲ್ಲಿ 37 ಮಿ.ಮೀ ಮಳೆಯಾಗಿದೆ. ಉಳಿದಂತೆ ಮೊಳಕಾಲ್ಮೂರಿನಲ್ಲಿ ಮಳೆಯಾಗಿಲ್ಲ.
