ಮುಖ್ಯ ಸುದ್ದಿ
MOLAKALMURU: ಬರದ ನಾಡಿನಲ್ಲಿ ಭರ್ಜರಿ ಮಳೆ | ರಂಗಯ್ಯನದುರ್ಗ ಜಲಾಶಯ ಭರ್ತಿ
CHITRADURGA NEWS | 11 OCTOBER 2024
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಅತೀ ಕಡಿಮೆ ಮಳೆ ಬೀಳುವ ಪ್ರದೇಶವೆಂದೇ ಹೆಸರಾಗಿರುವ ಮಳೆ ನೆರಳಿನ ಪ್ರದೇಶ ಮೊಳಕಾಲ್ಮೂರು ತಾಲೂಕಿನಲ್ಲಿ ವರುಣ ದೇವನ ಕೃಪೆಯಿಂದ ಭರ್ಜರಿ ಮಳೆಯಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಈ ಭಾಗದ ರೈತರು ಸಂತಸಗೊಂಡಿದ್ದಾರೆ. ಬಾಡಿ ಹೋಗುತ್ತಿದ್ದ ಶೇಂಗಾ ಬೆಳೆಗೆ ಜೀವಕಳೆ ಬಂದಿದೆ.
ಇದನ್ನೂ ಓದಿ: ಒಳಮೀಸಲು ಜಾರಿಗೆ ಪಟ್ಟು | ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಮಾವೇಶ
ಮಳೆ ಹಾಗೂ ಹಳ್ಳದ ನೀರಿನ ಆಸರೆಯಲ್ಲೇ ನಿರ್ಮಾಣವಾಗಿರುವ ಇಲ್ಲಿನ ಚಿನ್ನಹಗರಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣವಾಗಿರುವ ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿರುವುದು ಮೊಳಕಾಲ್ಮೂರು ತಾಲೂಕಿನ ಜನರ ಖುಷಿ ಹೆಚ್ಚಿಸಿದೆ.
ರಂಗಯ್ಯನದುರ್ಗ ಜಲಾಶಯದ ವೀಡಿಯೋ ಲಿಂಕ್ ಇಲ್ಲಿದೆ..
https://www.facebook.com/share/v/nN6AGjiZT3BwWUd7/
ಹಾಲ ನೊರೆಯಂತೆ ಜಲಾಶಯದ ಗೇಟ್‌ಗಳಲ್ಲಿ ನೀರು ಹರಿದು ಹೊರಗೆ ಹೋಗುತ್ತಿರುವ ದೃಶ್ಯ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿದೆ.
ಇದನ್ನೂ ಓದಿ: ನಟ ಹುಲಿ ಕಾರ್ತಿಕ್‌ಗೆ ಇಮ್ಮಡಿ ಶ್ರೀ ಅಭಯ | ಬಡವರ ಮಕ್ಕಳು ಬೆಳೆಯಬೇಕು ಎಂದ ಶ್ರೀಗಳು
ದಸರಾ ಹಬ್ಬದ ಮುನ್ನಾ ದಿನ ಅಂದರೆ ಅ.9 ರಾತ್ರಿ ಸುಮಾರು 100 ಮಿ.ಮೀ ಮಳೆ ಸುರಿದಿದ್ದು, ಮೊಳಕಾಲ್ಮೂರು ತಾಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿದಿವೆ.
ಇದರಿಂದಾಗಿ ರಂಗಯ್ಯನದುರ್ಗ ಜಲಾಶಯಕ್ಕೆ ಜೀವಕಳೆ ಬಂದಿದೆ. ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಹೊರಗೆ ಹರಿಯುತ್ತಿದೆ.
ರಂಗಯ್ಯನದುರ್ಗ ಜಲಾಶಯ ಕುರಿತ ಮಾಹಿತಿ:
ಮೊಳಕಾಲ್ಮೂರು ತಾಲೂಕಿನಲ್ಲಿ 1975ರಲ್ಲಿ ನಿರ್ಮಾಣವಾಗಿರುವ ರಂಗಯ್ಯನದುರ್ಗ ಜಲಾಶಯದಲ್ಲಿ 0.5 TMC (ಅರ್ಧ ಟಿಎಂಸಿ) ನೀರು ಸಂಗ್ರಹಿಸಬಹುದು.
ಇದನ್ನೂ ಓದಿ: ಅಡಿಕೆ ಧಾರನೆ | ಅಕ್ಟೋಬರ್ ೧೦ | ಯಾವ ಅಡಿಕೆಗೆ ಎಷ್ಟು ರೇಟ್
33 ಅಡಿ ಎತ್ತರವಿರುವ ಈ ಜಲಾಶಯ 900 ಮೀಟರ್ ಉದ್ದವಿದೆ. ಇದರಿಂದ 6350 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಹೊಂದಿದೆ.
ಚಳ್ಳಕೆರೆ ತಾಲೂಕಿನಲ್ಲೂ ವ್ಯಾಪಕ ಮಳೆ:
ಅ.9 ರಾತ್ರಿ ಚಳ್ಳಕೆರೆ, ಮೊಳಕಾಲ್ಮೂರಿನಲ್ಲಿ ಸಾಕಷ್ಟು ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಹಲವು ಕೆರೆಗಳು ಕೋಡಿ ಬಿದ್ದಿವೆ.
ಚಳ್ಳಕೆರೆ ತಾಲೂಕಿನ ರೇಖಲಗೆರೆ ಕೆರೆ ಕೋಡಿ ಬಿದ್ದಿದೆ. ರಾಮಸಾಗರ ಹಳ್ಳ ಸಂಪೂರ್ಣ ಭರ್ತಿಯಾಗಿದ್ದು, ತುಂಬಿ ಹರಿಯುತ್ತಿದೆ. ರೇಖಲಗೆರೆ ಫೀಡರ್ ಚಾನೆಲ್ ಮೂಲಕ ಸಾಕಷ್ಟು ನೀರು ಹರಿದು ಬರುತ್ತಿದೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್‌ನ್ಯೂಸ್ | ಅ.೨೦ ರಂದು ಬೃಹತ್ ಉದ್ಯೋಗ ಮೇಳ
ಇನ್ನೂ ರಾತ್ರಿ ಸುರಿದ ಮಳೆಗೆ ವರವು ಗ್ರಾಮದ ಕೆರೆಯೂ ಕೋಡಿ ಬಿದ್ದಿದ್ದು, ಈ ಭಾಗದ ರೈತರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ಒಟ್ಟಾರೆ, ವ್ಯಾಪಕ ಮಳೆಯಿಂದಾಗಿ ವರವು ಕೆರೆ, ರೇಖಲಗೆರೆ ಕೆರೆ, ಚಿನ್ನಹಗರಿ ಹಳ್ಳಗಳು ಭರ್ತಿಯಾಗಿವೆ.