ಮುಖ್ಯ ಸುದ್ದಿ
ನಿಧನವಾರ್ತೆ | ಎಚ್.ಹನುಮಂತಪ್ಪ ಪುತ್ರ ಜಿ.ಎಚ್. ಮನು ನಿಧನ
ಚಿತ್ರದುರ್ಗ ನ್ಯೂಸ್.ಕಾಂ: ಕಾಂಗ್ರೆಸ್ ಹಿರಿಯ ನಾಯಕ ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಅವರ ಪುತ್ರ ಬೆಂಗಳೂರಿನಲ್ಲಿ ನೆಲೆಸಿದ್ದ ಜಿ.ಎಚ್.ಮನು(54) ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ.
ಮೃತರು, ಪತ್ನಿ ಪಲ್ಲವಿ, ತಂದೆ ಎಚ್.ಹನುಮಂತಪ್ಪ, ಹಿರಿಯಣ್ಣ ಕಾಂಗ್ರೆಸ್ ಮುಖಂಡ ಜಿ.ಎಚ್.ಮೋಹನ್ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ದಾವಣಗೆರೆಯ ಹರಿಹರ ರಸ್ತೆಯಲ್ಲಿರುವ ಶನೇಶ್ವರ ದೇವಸ್ಥಾನ ಬಳಿಯ ವೈಕುಂಠ ಶಾಂತಿಧಾಮದಲ್ಲಿ ಇಂದು(ಶನಿವಾರ) ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.