Connect with us

ಜ್ಞಾನಭಾರತಿ ವಿದ್ಯಾಮಂದಿರದ ಸುವರ್ಣ ಮಹೋತ್ಸವ | ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

Jnana Bharathi School

ಮುಖ್ಯ ಸುದ್ದಿ

ಜ್ಞಾನಭಾರತಿ ವಿದ್ಯಾಮಂದಿರದ ಸುವರ್ಣ ಮಹೋತ್ಸವ | ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

CHITRADURGA NEWS | 30 JANUARY 2025

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಜ್ಞಾನ ಭಾರತಿ ವಿದ್ಯಾಮಂದಿರದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಫೆಬ್ರವರಿ 2 ಭಾನುವಾರ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ.ರಾಜೀವ ಲೋಚನ ತಿಳಿಸಿದ್ದಾರೆ.

ವ್ಯಕ್ತಿ ನಿರ್ಮಾಣದ ಕನಸು ಹೊತ್ತು, 1973 ರಲ್ಲಿ ರಾಷ್ಟ್ರೋತ್ಥಾನ ಪರಿಷತ್ ಚಿತ್ರದುರ್ಗದಲ್ಲಿ ಜ್ಞಾನ ಭಾರತಿ ವಿದ್ಯಾಮಂದಿರ ನಿರ್ಮಾಣ ಮಾಡಿದ್ದು, ಈಗ 50 ವರ್ಷ ಪೂರೈಸಿ, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಗಳಿಗೆ ಐಜಿಪಿ ರವಿಕಾಂತೇಗೌಡ ಎಚ್ಚರಿಕೆ | ಸಾಲ ವಸೂಲಿಗೆ ಬಲವಂತ ಮಾಡಿದ್ರೆ ಕ್ರಮ

ಈ ಹಿನ್ನೆಲೆಯಲ್ಲಿ ಜ್ಞಾನ ಭಾರತಿ ವಿದ್ಯಾಮಂದಿರದ ಆವರಣದಲ್ಲಿ ಸುವರ್ಣ ಮಹೋತ್ಸವ ಹಾಗೂ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ಎಚ್.ಜಿ.ದತ್ತಾತ್ರೇಯ(ದತ್ತಣ್ಣ) ಭಾಗವಹಿಸಲಿದ್ದು, ರಾಷ್ಟ್ರೋತ್ಥಾನ ಪರಿಷತ್ ರಾಜ್ಯ ಪಠ್ಯಕ್ರಮದ ಸಂಚಾಲಕ ಬಸವನಗೌಡ ಭಾಗವಹಿಸುವರು. ಜನಸೇವಾ ಟ್ರಸ್ಟ್ ಗೌರವ ಕಾರ್ಯದರ್ಶಿ ನಿರ್ಮಲ್ ಕುಮಾರ್ ವಿದ್ಯಾರ್ಥಿಗಳ ಸಮಾವೇಶದ ಸಮಾರೋಪ ಭಾಷಣ ಮಾಡಲಿದ್ದಾರೆ.

ಇದನ್ನೂ ಓದಿ: ರಸ್ತೆಗಾಗಿ ಹಿಂದಕ್ಕೆ ಸರಿಯುತ್ತಿದೆ ಮೂರಂತಸ್ತಿನ ಕಟ್ಟಡ | ಹೈಡ್ರಾಲಿಕ್ ಜಾಕ್ ಮೂಲಕ ಕಟ್ಟಡ ಶಿಫ್ಟ್

ಕಾರ್ಯಕ್ರಮಕ್ಕೆ ಸಂಸ್ಥೆಯಲ್ಲಿ ಹಿಂದಿನಿಂದ ಕಾರ್ಯನಿರ್ವಹಿಸಿದ ಅಧ್ಯಾಪಕರು, ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version