ಮುಖ್ಯ ಸುದ್ದಿ
ಹನುಮಲಿ ಷಣ್ಮುಖಪ್ಪ ಅವರಿಗೆ ಎಂಎಲ್ಸಿ ಸ್ಥಾನ ಕೊಡಿ | ಸಭೆ ನಡೆಸಿ ವರಿಷ್ಟರ ಬಳಿ ತೆರಳಲು ಸಿದ್ಧರಾದ ಅಭಿಮಾನಿಗಳು
CHITRADURGA NEWS | 18 MARCH 2024
ಚಿತ್ರದುರ್ಗ: ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಲು ಒತ್ತಾಯಿಸಿ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಲು ಷಣ್ಮುಖಪ್ಪ ಅಭಿಮಾನಿಗಳು ಸಭೆ ನಡೆಸಿದ್ದಾರೆ.
ಇದನ್ನೂ ಓದಿ: ಗಾಂಧಿ ಜಯಂತಿಗೆ ಹೊಳಲ್ಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು
ಚಿತ್ರದುರ್ಗದ ಮಹಡಿ ಶಿವಮೂರ್ತಿ ಮನೆಯಲ್ಲಿ ಭಾನುವಾರ ಈ ಸಂಬಂಧ ಸಭೆ ನಡೆದಿದೆ.
ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಫಲಪೇಕ್ಷೆ ಇಲ್ಲದೆ ಶ್ರಮ ಹಾಕಿ ಪಕ್ಷದ ಸಂಘಟನೆಯನ್ನು ಮಾಡಿದ್ದಾರೆ, ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಅವರಿಗೆ ಏನನ್ನಾದರೂ ಹುದ್ದೆಯನ್ನು ನೀಡಬೇಕಿತ್ತು, ಈ ಬಾರಿಯೂ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ, ಈ ಸಲನಾದರೂ ಅವರಿಗೆ ರಾಜ್ಯ ಮಟ್ಟದ ಹುದ್ದೆಯನ್ನು ನೀಡುವಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಒತ್ತಾಯವನ್ನು ಮಾಡಬೇಕಿದೆ ಎಂದು ಷಣ್ಮುಖಪ್ಪ ಅಭಿಮಾನಿಗಳು ಸಭೆಯಲ್ಲಿ ತೀರ್ಮಾನಿಸಿದರು.
ಕೆಡಿಪಿ ಸದಸ್ಯರಾದ ಕೆ.ಸಿ ನಾಗರಾಜ್ ಮಾತನಾಡಿ, ಷಣ್ಮುಖಪ್ಪ ಅವರಿಗೆ ಸರ್ಕಾರದಲ್ಲಿ ಉತ್ತಮವಾದ ಸ್ಥಾನ ಸಿಗಬೇಕು, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಅವರಿಗೆ ಮನವಿ ಸಲ್ಲಿಸಬೇಕಿದೆ, ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮವನ್ನು ಹಾಕಿದ್ದಾರೆ ಅವರಿಗೆ ಸೂಕ್ತ ಸ್ಥಾನ ನೀಡಬೇಕು ಎಂದರು.
ಇದನ್ನೂ ಓದಿ: ಮಹನೀಯರ ಜಯಂತಿ ಸರಳ ಆಚರಣೆ
ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ಮಾತನಾಡಿ, ಷಣ್ಮುಖಪ್ಪ ಅವರು 2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸೋತಿದ್ದಾರೆ, ಆದರೂ ಸಹ ಪಕ್ಷವನ್ನು ಸಂಘಟನೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ, ಈ ಮುಂಚೆಯೂ ಪಕ್ಷ ಗುರುತಿಸಿ ಸ್ಥಾನವನ್ನು ನೀಡಬೇಕಿತ್ತು, ನಮ್ಮ ಸರ್ಕಾರ ಇದೆ ಇವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಇಲ್ಲವೇ ರಾಜ್ಯಮಟ್ಟದ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: ಮೀನುಗಾರಿಕೆ ಸಲಕರಣೆ ಕಿಟ್‍ಗೆ ಅರ್ಜಿ
ಡಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಎನ್ ಮೈಲಾರಪ್ಪ ಮಾತನಾಡಿ, ಹನುಮಲಿ ಷಣ್ಮುಖಪ್ಪ ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮ ತನು,ಮನ, ಧನವನ್ನು ಸಹ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರೇ ಮುಂದೆ ನಿಂತು ಕಾಂಗ್ರೆಸ್ ಪಕ್ಷವನ್ನು ಚಿತ್ರದುರ್ಗದಲ್ಲಿ ಹಲವಾರು ವರ್ಷಗಳಿಂದ ಸೋತಿದ್ದ ಪಕ್ಷವನ್ನು ಗೆಲ್ಲಿಸಿದ್ದಾರೆ. ಇಂಥವರನ್ನು ಗುರುತಿಸಿ ಪಕ್ಷ ಅಧಿಕಾರಕ್ಕೆ ಬಂದಾಗ ಅವರಿಗೆ ಸೂಕ್ತವಾದ ಸ್ಥಾನವನ್ನು ನೀಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಅಪಘಾತ ಪರಿಹಾರ | ಅಸಂಘಟಿತ ಕಾರ್ಮಿಕರಿಂದ ಅರ್ಜಿ
ಸಭೆಯಲ್ಲಿ ಮಹಡಿ ಶಿವಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಸುರೇಶ್, ಲಕ್ಷ್ಮಿಕಾಂತ್, ಖಾಸಿಂ ಅಲಿ, ತಿಪ್ಪೇಸ್ವಾಮಿ, ನರಸಿಂಹರಾಜು, ಪರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.