ಮೊಳಕಾಳ್ಮೂರು
Gaurasamudra Maramma Devi: ಗೌರಸಮುದ್ರ ಮಾರಮ್ಮದೇವಿ ಮರಿ ಪರಿಷೆ | ಲಕ್ಷಾಂತರ ಭಕ್ತರ ಆಗಮನದ ನಿರೀಕ್ಷೆ
CHITRADURGA NEWS | 01 OCTOBER 2024
ಚಿತ್ರದುರ್ಗ: ವಾಡಿಕೆಯಂತೆ ಮೊಳಕಾಲ್ಮುರು ಸಮೀಪದ ಗೌರಸಮುದ್ರದ ತುಂಬಲು ಪ್ರದೇಶದಲ್ಲಿ ಅ.1(ಮಂಗಳವಾರ) ಐತಿಹಾಸಿಕ ಮಾರಮ್ಮದೇವಿ ಮರಿ ಪರಿಷೆ ನಡೆಯಲಿದೆ.
ಪ್ರತಿವರ್ಷ ಚೌತಿ ಅಮವಾಸ್ಯೆ ನಂತರ ಬರುವ ಮಂಗಳವಾರದಂದು ದೇವಿಯ ದೊಡ್ಡ ಪರಿಷೆ ನಡೆಯುತ್ತದೆ. ಮರಿ ಷರಿಷೆಯಲ್ಲೂ ರಾಜ್ಯದ ವಿವಿಧ ಜಿಲ್ಲೆ ಮತ್ತು ನೆರೆಯ ಆಂಧ್ರಪ್ರದೇಶದಿಂದ 1.50 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.
ದೇವಿ ಮೂಲ ವಿಗ್ರಹವನ್ನು ಮರಿಪರಿಷೆಯಲ್ಲಿ ತುಂಬಲು ಸ್ಥಳಕ್ಕೆ ಕರೆದುಕೊಂಡು ಬಾರದ ಕಾರಣ ಗ್ರಾಮದಲ್ಲಿರುವ ಮಾರಮ್ಮ ದೇವಸ್ಥಾನಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ಬೇವಿನಸೀರೆ ಹರಕೆ, ಬಾಯಿಗೆ ಬೀಗ, ದವಸ ಧಾನ್ಯ ಅರ್ಪಣೆ ಸೇರಿದಂತೆ ವಿವಿಧ ಹಕರೆಗಳು ಸಲ್ಲಿಕೆಯಾಗಲಿವೆ.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 01 ಅಕ್ಟೋಬರ್ | ಆರ್ಥಿಕ ಪ್ರಗತಿ , ಸಕಾಲದಲ್ಲಿ ಕೆಲಸಗಳು ಪೂರ್ಣ, ಶುಭ ಕಾರ್ಯ
ಈ ಪರಿಷೆ ನಂತರ ಬರುವ ಐದನೇ ಮಂಗಳವಾರ ಮರಿ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲಿಯ ತನಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಊರು ಮಾರಮ್ಮದೇವಿ ಜಾತ್ರೆ ನಡೆಸಲಾಗುತ್ತದೆ. ಮರಿಪರಿಷೆ ಜತೆಗೆ ಗೌರಸಮುದ್ರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲೂ ಊರು ಮಾರಮ್ಮದೇವಿ ಆಚರಣೆ ನಡೆಯಲಿದೆ.