Connect with us

    Ganesha murthy: ಗಣೇಶ ಮೂರ್ತಿ ವಿಸರ್ಜನೆ | ನಗರಸಭೆಯಿಂದ ತೊಟ್ಟಿಗಳ ವ್ಯವಸ್ಥೆ | ಇಲ್ಲಿದೆ ನೋಡಿ ಪಟ್ಟಿ

    ganesha

    ಮುಖ್ಯ ಸುದ್ದಿ

    Ganesha murthy: ಗಣೇಶ ಮೂರ್ತಿ ವಿಸರ್ಜನೆ | ನಗರಸಭೆಯಿಂದ ತೊಟ್ಟಿಗಳ ವ್ಯವಸ್ಥೆ | ಇಲ್ಲಿದೆ ನೋಡಿ ಪಟ್ಟಿ

    CHITRADURGA NEWS | 07 SEPTEMBER 2024
    ಚಿತ್ರದುರ್ಗ: ಗಣೇಶ ಮೂರ್ತಿ ವಿಸರ್ಜನೆಗೆ ನಗರಸಭೆಯಿಂದ ನಗರದಲ್ಲಿ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ.

    ನಗರದ ಒನಕೆ ಓಬವ್ವ ಕ್ರೀಡಾಂಗಣ ಬಳಿ, ಐಯುಡಿಪಿ ಬಡಾವಣೆ ರಾಜ್‌ ಕುಮಾರ್‌ ಪಾರ್ಕ್‌ ಹತ್ತಿರ, ಕೋಟೆ ರಸ್ತೆಯ ಏಕನಾಥೇಶ್ವರಿ ಪಾದಗುಡಿ ಮುಂಭಾಗ, ಜೆಸಿಆರ್‌ ಬಡಾವಣೆಯ ಗಣೇಶ ದೇವಸ್ಥಾನದ ಹತ್ತಿರ, ಸಿಹಿ ನೀರು ಹೊಂಡ ಆವರಣ, ಪತಂಜಲಿ ಆಸ್ಪತ್ರೆಯ ಪಕ್ಕ, ಕೆಳಗೋಟೆಯ ಚನ್ನಕೇಶವ ದೇವಸ್ಥಾನದ ಹತ್ತಿರ, ತುರುವನೂರು ರಸ್ತೆಯ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಮುಂಭಾಗ, ಗೋಪಾಲಪುರ ನೀರಿನ ಟ್ಯಾಂಕ್‌ ಹತ್ತಿರ, ಗುಮಾಸ್ತರ ಕಾಲೋನಿ ರೈತ ಭವನದ ಹತ್ತಿರ, ಜೋಗಿಮಟ್ಟಿ ರಸ್ತೆಯ ತಿಪ್ಪಿನಘಟ್ಟಮ್ಮ ದೇವಸ್ಥಾನದ ಹತ್ತಿರದ ಪಾರ್ಕ್‌ ಹಾಗೂ ಚಂದ್ರವಳ್ಳಿ ಕೆರೆ ಹತ್ತಿರ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ವ್ಯವಸ್ಥೆ ಮಾಡಲಾಗಿದೆ.

    ಕ್ಲಿಕ್ ಮಾಡಿ ಓದಿ: ಪಿಡಿಒ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆದೇಶ | ಹಣ ದುರುಪಯೋಗ ಆರೋಪ

    ಮೂರ್ತಿಗಳನ್ನು ಪೂಜಿಸಿದ ನಂತರ ಹೊಂಡ, ಕೆರೆ ಭಾವಿಗಳಲ್ಲಿ ವಿಸರ್ಜಿಸಬಾರದು. ಇದರಿಂದ ಜಲ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಉಂಟಾಗಿ ಜೀವ ರಾಶಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಪರಿಸರಕ್ಕೆ ಧಕ್ಕೆಯಾಗದಂತೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ನಗರಸಭೆಯ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ಸದ್ಬಳಕೆ ಮಾಡಿಕೊಂಡು ಮೂರ್ತಿ ವಿಸರ್ಜಿಸುವಂತೆ ಪೌರಾಯುಕ್ತೆ ಎಂ.ರೇಣುಕಾ ನಾಗರೀಕರಲ್ಲಿ ಮನವಿ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top