ಮುಖ್ಯ ಸುದ್ದಿ
ದನ, ಎಮ್ಮೆಗಳಿಗೆ ಉಚಿತ ಲಸಿಕೆ

CHITRADURGA NEWS | 28 MARCH 2024
ಚಿತ್ರದುರ್ಗ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 5ನೇ ಸುತ್ತಿನ ಕಾಲು ಬಾಯಿ ಲಸಿಕಾ ಅಭಿಯಾನವನ್ನು ಏಪ್ರಿಲ್ 01 ರಿಂದ 30 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ದನ, ಎಮ್ಮೆ ಮತ್ತು ಕರುಗಳಿಗೆ ಉಚಿತವಾಗಿ ಕಾಲುಬಾಯಿ ಲಸಿಕೆ ಹಾಕಲಾಗುವುದು.
ಇದನ್ನೂ ಓದಿ : ಸಚಿವ ಶಿವರಾಜ ತಂಗಡಗಿ ವಿರುದ್ಧ ಕ್ರಮಕ್ಕೆ ಬಿಜೆಪಿ ಯುವ ಮೋರ್ಚಾ ಆಗ್ರಹ
ಕಾಲುಬಾಯಿ ಲಸಿಕಾ ಕಾರ್ಯಕ್ರಮಕ್ಕಾಗಿ ಜಿಲ್ಲೆಯಲ್ಲಿ 3390 ಬ್ಲಾಕ್‍ಗಳಲ್ಲಿ 237 ಲಸಿಕೆದಾರರನ್ನು ರಚಿಸಲಾಗಿದ್ದು, ನಿರಂತರವಾಗಿ 30 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 991 ಗ್ರಾಮಗಳಲ್ಲಿ 338907 ಜಾನುವಾರುಗಳಿಗೆ ನಿಗಧಿತ ದಿನಗಳಂದು ಲಸಿಕಾದಾರರು ಪ್ರತಿ ಗ್ರಾಮದ ಮನೆಮನೆಗೆ ಭೇಟಿ ನೀಡಿ ಉಚಿತವಾಗಿ ಕಾಲುಬಾಯಿ ಲಸಿಕೆಯನ್ನು ಹಾಕಲಿದ್ದಾರೆ.
ಇದನ್ನೂ ಓದಿ: 61 ಲಕ್ಷ ರೂ. ಗಳಿಗೆ ಮುಕ್ತಿ ಭಾವುಟ ಹರಾಜು
ಜಾನುವಾರುಗಳಿಗೆ ತುರ್ತು ಚಿಕಿತ್ಸೆಗಾಗಿ 1962 ಸಹಾಯವಾಣಿಯು ಚಾಲ್ತಿಯಲ್ಲಿದ್ದು, ಇದರ ಪ್ರಯೋಜನ ಪಡೆಯಬಹುದು. ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಇಂದಿರಾಬಾಯಿ ತಿಳಿಸಿದ್ದಾರೆ.
