ಮುಖ್ಯ ಸುದ್ದಿ
ಮೊರಾರ್ಜಿ ದೇಸಾಯಿ ವಸತಿ ಕಾಲೇಜುನಲ್ಲಿ 1st ಪಿಯುಸಿಗೆ ಉಚಿತ ಪ್ರವೇಶ | ಅರ್ಜಿ ಆಹ್ವಾನ
CHITRADURGA NEWS | 17 MAY 2024
ಚಿತ್ರದುರ್ಗ: ನೀವು ಎಸ್ಎಸ್ಎಲ್ಸಿ ಪಾಸ್ ಆಗಿದ್ದೀರಾ, ಮುಂದೆ ಯಾವ ಕೋರ್ಸಿಗೆ ಸೇರಬೇಕು ಅಂತ ಯೋಚಿಸುತಿದ್ದೀರಾ, ಇಲ್ಲಿದೆ ನೋಡಿ ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.
ಇದನ್ನೂ ಓದಿ: ಅಸ್ಥಿಪಂಜರ ಸಿಕ್ಕ ಮನೆಯಲ್ಲಿ ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳೆಷ್ಟು ಗೊತ್ತಾ
ಎಸ್ಎಸ್ಎಲ್ಸಿ 10ನೇ ತರಗತಿ ಅನ್ನು ಯಾವುದೇ ಬೋರ್ಡ್ನಿಂದ ಪಾಸ್ ಮಾಡಿದ್ದು, ಈಗ ಪ್ರಥಮ ಪಿಯುಸಿ ಗೆ ಪ್ರವೇಶ ಪಡೆಯಲು ಆಸಕ್ತರಾಗಿದ್ದರೆ. ನಿಮ್ಮ ಗ್ರಾಮದಲ್ಲಿ ಅಥವಾ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಲು ಸರ್ಕಾರಿ ಕಾಲೇಜುಗಳು ಇಲ್ಲದಿದ್ದಲ್ಲಿ, ಅಥವಾ ನೀವು ವಸತಿ ಕಾಲೇಜುಗಳಿಗೆ ಸೇರಬೇಕು, ಉಚಿತ ಪ್ರವೇಶ ಬೇಕು ಎಂದು ಬಯಸಿದ್ದಲ್ಲಿ ಇದು ಸದಾವಕಾಶ.
ಚಿತ್ರದುರ್ಗ ತಾಲೂಕಿನ ಕುಂಚಿಗನಾಳುನಲ್ಲಿರುವ ಸರ್ಕಾರಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ತರಗತಿಗೆ ಉಚಿತ ಪ್ರವೇಶಾತಿಗಾಗಿ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಹತೆ, ಅರ್ಜಿಗೆ ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಬಹುದು.
ಇದನ್ನೂ ಓದಿ: ಬ್ರೇಕಿಂಗ್ ನ್ಯೂಸ್ ಒಂದೇ ಮನೆಯಲ್ಲಿ ಐದು ಜನ ಆಸ್ತಿ ಪಂಜರ | ಸಾವಿಗೆ ಇದೇ ಕಾರಣ ನೋಡಿ
ಅರ್ಜಿ ಸಲ್ಲಿಸುವ ವಿಧಾನ:
ವಿದ್ಯಾರ್ಥಿಗಳು ಎಲ್ಲಾ ದಾಖಲೆಗಳ ಸಹಿತ ಚಿತ್ರದುರ್ಗ ತಾಲೂಕಿನ ಕುಂಚಿಗನಾಳುನಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಉಚಿತವಾಗಿ ಸಲ್ಲಿಸಬಹುದಾಗಿದೆ.
ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಜಿ ಹಾಕಲು ಅರ್ಹತೆಗಳು:
ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರಬೇಕು ಅಂದರೆ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಮತ್ತು ಸಿಖ್ ಸಮುದಾಯದವರಿಗೆ ಶೇಕಡ.75 ರಷ್ಟು ಪ್ರವೇಶ ಮೀಸಲಿರಿಸಿದೆ.
ಶೇಕಡ.25 ರಷ್ಟು ಸ್ಥಾನಗಳನ್ನು ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಪ್ರವೇಶಕ್ಕೆ ಮೀಸಲಿರಿಸಿದೆ.
ಇದನ್ನೂ ಓದಿ: ನಾರಾಯಣಸ್ವಾಮಿ ಪರವಾಗಿ ಕೆ.ಎಸ್ ನವೀನ್ ಮತಯಾಚನೆ
ವಸತಿ ಕಾಲೇಜುಗಳಲ್ಲಿ ಒದಗಿಸಲಾಗುವ ಸೌಲಭ್ಯಗಳು:
ಉಚಿತ ಶಿಕ್ಷಣ, ಪಠ್ಯಪುಸ್ತಕ, ಆಹಾರ, ಸಮವಸ್ತ್ರ, ಶುಚಿ ಸಂಭ್ರಮ ಕಿಟ್, ಲೇಖನ ಸಾಮಗ್ರಿ, ಸೇರಿದಂತೆ ಇತರೆ ಎಲ್ಲ ಉಚಿತ ಸೌಲಭ್ಯಗಳು.
ವೃತ್ತಿಪರ ಕೋರ್ಸ್ಗಳು: ನೀಟ್, ಜೆಇಇ, ಕೆಸಿಇಟಿ, ಸಿಎಲ್ಟಿ, ಸಿಎ, ಸಿಎಸ್ ಎಟಿ ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳು ನಡೆಸಲಾಗುವುದು, ಕಲಿಕಾ ಸಾಮಗ್ರಿಗಳನ್ನು ಹಾಗೂ ಇತರಿ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು.