Connect with us

    Hindu MahaGanapathi shobhayatra; ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಸಜ್ಜಾದ ಕೋಟೆನಾಡು | ಸ್ವರ್ಗದಂತಿರುವ ದುರ್ಗ ನೋಡಿ 

    ಮುಖ್ಯ ಸುದ್ದಿ

    Hindu MahaGanapathi shobhayatra; ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಸಜ್ಜಾದ ಕೋಟೆನಾಡು | ಸ್ವರ್ಗದಂತಿರುವ ದುರ್ಗ ನೋಡಿ 

    CHITRADURGA NEWS | 27 SEPTEMBER 2024

    ಚಿತ್ರದುರ್ಗ: ನಾಳೆ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ(Hindu MahaGanapathi shobhayatra) ಸಜ್ಜಾದ ಕೋಟೆನಾಡು, ನಗರದ ವಿವಿಧ ವೃತ್ತಗಳು ಒಂದೊಂದು ಅಲಂಕಾರದಲ್ಲಿ ಸಜ್ಜಾಗಿ ನಿಂತಿವೆ.

    ಕ್ಲಿಕ್ ಮಾಡಿ ಓದಿ: VA ಪ್ರವೇಶ ಪರೀಕ್ಷೆ | ಜಿಲ್ಲೆಯಲ್ಲಿ 46 ಪರೀಕ್ಷಾ ಕೇಂದ್ರ | 17798 ಅಭ್ಯರ್ಥಿಗಳು

    ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಈಗಾಗಲೇ ನಗರದಲ್ಲಿ ಅಲಂಕಾರ ನಡೆದಿದ್ದು, ಮುಖ್ಯ ರಸ್ತೆಯ ಎಲ್ಲ ಕಟ್ಟಡಗಳ ಮೇಲೆ ಕೇಸರಿ ಧ್ವಜಗಳು ಹಾರಾಡುತ್ತಿವೆ. ಕೇಸರಿ ಬಂಟಿಂಗ್ಸ್ ಕೂಡಾ ಹೊಸತನ ಮೂಡಿಸಿವೆ.

    ಮದಕರಿ ವೃತ್ತ

    ಮದಕರಿ ವೃತ್ತ

    ಇದೆಲ್ಲಕ್ಕಿಂತ ಸುಂದರವಾಗಿ ನಗರದ ವೃತ್ತಗಳನ್ನು ಅಲಂಕಾರ ಮಾಡಲಾಗಿದೆ. ಚಿತ್ರದುರ್ಗದ ಪ್ರಮುಖ ಆಕರ್ಷಣೆಯಾಗಿರುವ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಬೃಹದಾಕಾರದ ಬೆಟ್ಟ, ಶಿವಲಿಂಗ ತಲೆಯೆತ್ತಿ ನಿಂತಿದೆ. ಮದಕರಿ ನಾಯಕರ ಪ್ರತಿಮೆಯ ಹಿಂದೆ ಬೃಹತ್ ಬೆಟ್ಟದ ಆಕೃತಿ ತಯಾರಿಸಿ ಅದರ ತುದಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದು, ವಿಶೇಷ ಆಕರ್ಷಣೆಯಾಗಿದೆ.

    ಇದಾದ ನಂತರ ಸಿಗುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಾಷ್ಟ್ರಲಾಂಚನದಲ್ಲಿರುವ ನಾಲ್ಕು ಸಿಂಹಗಳ ಆಕೃತಿ ಹಾಗೂ ಮಂಟಪವನ್ನು ನಿರ್ಮಿಸಲಾಗಿದೆ.

    ಅಂಬೇಡ್ಕರ್ ವೃತ್ತ

    ಅಂಬೇಡ್ಕರ್ ವೃತ್ತ

    ಕ್ಲಿಕ್ ಮಾಡಿ ಓದಿ: Sanehalli; ಸಾಣೇಹಳ್ಳಿ ರಾಷ್ಟ್ರೀಯ ನಾಟಕೊತ್ಸವಕ್ಕೆ ದಿನಾಂಕ ನಿಗಧಿ

    ವಾಸವಿ ವೃತ್ತ

    ವಾಸವಿ ವೃತ್ತ

    ಪಕ್ಕದ ಓಂ ವೃತ್ತದಲ್ಲಿ ವಾಸವಿ ಮಾತೆಯನ್ನು ಪ್ರತಿಷ್ಠಾಪಿಸಿ ವಿಶೇಷ ಮಂಟಪ ಹಾಗೂ ಬೆಳಕಿನ ಅಲಂಕಾರ ಮಾಡಲಾಗಿದೆ.

    ಒನಕೆ ಓಬವ್ವ ವೃತ್ತ

    ಒನಕೆ ಓಬವ್ವ ವೃತ್ತ

    ಒನಕೆ ಓಬವ್ವ ವೃತ್ತದಲ್ಲಿ ಓಬವ್ವನ ಹಿನ್ನೆಲೆಯಲ್ಲಿ ಕೋಟೆ ಅಲಂಕಾರ, ದ್ವಾರ ಬಾಗಿಲು ನಿರ್ಮಿಸಲಾಗಿದೆ. ಇಲ್ಲಿ ಒನಕೆ ಓಬವ್ವ ಹೈದರಾಲಿಯ ಸೈನಿಕರನ್ನು ಬಡಿಯುವ ದೃಶ್ಯಕ್ಕೆ ಹೋಲಿಕೆ ಆಗುವಂತಹ ಅಲಂಕಾರ ಮಾಡಿದ್ದು, ಆಕರ್ಷಣೀಯವಾಗಿದೆ.

    ಗಾಂಧಿ ವೃತ್ತ

    ಗಾಂಧಿ ವೃತ್ತ

    ಪ್ರವಾಸಿ ಮಂದಿರದ ಮುಂದೆ ಇರುವ ಮಹಾವೀರ ವೃತ್ತ ಇನ್ನೂ ನಿರ್ಮಾಣ ಹಂತದಲ್ಲಿದ್ದು, ಇಲ್ಲಿಯೂ ವಿಶೇಷವಾದ ಅಲಂಕಾರ ಮಾಡಲಾಗಿದೆ. ವಿದ್ಯುತ್ ದೀಪ, ಚಕ್ರ, ದೊಡ್ಡ ಗಂಟೆಗಳು ಇಲ್ಲಿನ ಆಕರ್ಷಣೆಯಾಗಿವೆ.

    ಕನಕ ವೃತ್ತ

    ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಲ್ಲಿ ಕನಕ ದಾಸರ ಪ್ರತಿಮೆಯ ಹಿಂಭಾಗದಲ್ಲಿ ಅರಮನೆ ಹೋಲುವ ಅಲಂಕಾರ ಮಾಡಿದ್ದು, ಬ್ಯಾಗ್ರೌಂಡ್ ಅತ್ಯುತ್ತಮವಾಗಿದೆ. ಕನಕದಾಸರ ಅಕ್ಕಪಕ್ಕದಲ್ಲಿ ಶಂಖ ಹಾಗೂ ಚಕ್ರ, ನವಿಲಿನ ಅಲಂಕಾರವಿದೆ.

    ಕ್ಲಿಕ್ ಮಾಡಿ ಓದಿ: Temples; ದೇವಸ್ಥಾನಗಳ ನಿರ್ವಹಣೆ ಭಕ್ತರಿಗೆ ಬಿಡಿ | ಸರ್ಕಾರಕ್ಕೆ VHP ಆಗ್ರಹ

    ಸಂಗೊಳ್ಳಿ ರಾಯಣ್ಣ ವೃತ್ತ

    ಸಂಗೊಳ್ಳಿ ರಾಯಣ್ಣ ವೃತ್ತ

    ಹೋಳಲ್ಕೆರೆ ರಸ್ತೆಯ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೂ ಸಹಾ ಅಲಂಕಾರವನ್ನು ಮಾಡಲಾಗಿದೆ. ಇಲ್ಲಿ ರಾಯಣ್ಣನ ಹಿಂದೆಗಡೆಯಲ್ಲಿ ಅರಮನೆಯ ಚಿತ್ರದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಕ್ಕ-ಪಕ್ಕದಲ್ಲಿ ಕಂಬಗಳನ್ನು ಇರಿಸಲಾಗಿದೆ. ಮೇಲಗಡೆಯಲ್ಲಿ ವಿಶೇಷವಾದ ಅಲಂಕಾರವನ್ನ ಸಹಾ ಮಾಡಲಾಗಿದೆ. ಸುತ್ತಲೂ ಸಹಾ ಅಡ್ಡ ಗೋಡೆಯನ್ನು ನಿರ್ಮಿಸಲಾಗಿದೆ.

    ಜೈನ್ ವೃತ್ತ

    ಜೈನ್ ವೃತ್ತ

    ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿರುವ ಬಿ.ಡಿ.ರಸ್ತೆಯ ಜೈನಧಾಮದಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತ ಹಾಗೂ ದಾವಣಗೆರೆ ರಸ್ತೆಯಲ್ಲಿ ಸುಮಾರು ಮರ‍್ನಾಲ್ಕು ಕಿ.ಮೀಗಳ ದೂರದವರೆಗೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top