ಲೋಕಸಮರ 2024
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಕಾಂಗ್ರೆಸ್ ಅಭ್ಯರ್ಥಿ | ಅಧಿಕೃತ ಘೋಷಣೆ ಮಾಡಿದ ಎಐಸಿಸಿ

CHITRADURGA NEWS | 21 MARCH 2024
ಚಿತ್ರದುರ್ಗ: ಕಗ್ಗಂಟಾಗಿದ್ದ ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಮಸ್ಯೆಗೆ ಎಐಸಿಸಿ ವರಿಷ್ಠರು ಮುಕ್ತಿ ನೀಡಿದ್ದು, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಟಿಕೇಟ್ ಘೋಷಣೆ ಮಾಡಿದ್ದಾರೆ.
ಕಳೆದೊಂದು ತಿಂಗಳಿಂದ ಚಿತ್ರದುರ್ಗಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ, ಸ್ಥಳೀಯರೋ, ಹೊರಗಿನವರೋ ಎನ್ನುವ ಭಾರೀ ಚರ್ಚೆಗಳು ನಡೆದಿದ್ದವು.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ ಆರೋಪ | ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ)ಗೆ ಜಾಮೀನು ಮಂಜೂರು
ಈ ನಡುವೆ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಬಿ.ಎನ್.ಚಂದ್ರಪ್ಪ ಅವರ ಹೆಸರನ್ನು ತಡೆ ಹಿಡಿಯಲಾಗಿತ್ತು.
ಈಗ ಅಂತಿಮವಾಗಿ ಧಿಟ್ಟ ನಿರ್ಧಾರದೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಬಿ.ಎನ್.ಚಂದ್ರಪ್ಪ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಈ ಮೂಲಕ ಸ್ಥಳೀಯರಿಗೆ ಟಿಕೇಟ್ ಕೊಡಿ ಎನ್ನುವ ವಾದವನ್ನು ಕಾಂಗ್ರೆಸ್ ತಳ್ಳಿ ಹಾಕಿದೆ.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್‍ಗೆ ಜೆಎಂಎಫ್‍ಸಿ ನ್ಯಾಯಾಲಯದಿಂದ ಜಾಮೀನು
ಸ್ಥಳೀಯ ಮುಖಂಡ, 2009ರಲ್ಲಿ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದ ಜೆ.ಜೆ.ಹಟ್ಟಿ ಡಾ.ತಿಪ್ಪೇಸ್ವಾಮಿ ಪ್ರಬಲ ಪೈಪೋಟಿ ಒಡ್ಡಿದ್ದರು. ಇದು ಕಾಂಗ್ರೆಸ್ ವಲಯದಲ್ಲಿ ಭಾರೀ ತಲೆನೋವಾಗಿತ್ತು.
ಇದರೊಟ್ಟಿಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಪುತ್ರ ವಿನಯ ತಿಮಮಾಪುರ ಅವರಿಗೆ ಟಿಕೇಟ್ ನೀಡಬೇಕು ಎನ್ನುವ ಪ್ರಬಲ ಒತ್ತಡ ಕೂಡಾ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಮತದಾನ ಪ್ರಮಾಣ ಶೇ.5 ರಷ್ಟು ಹೆಚ್ಚಿಸಲು ಪಣ | ಸಿಇಓ ಎಸ್.ಜೆ.ಸೋಮಶೇಖರ್
ರಾಜ್ಯದಲ್ಲಿ ಒಂದು ಕ್ಷೇತ್ರದಲ್ಲಾದರೂ ಭೋವಿ ಸಮುದಾಯಕ್ಕೆ ಟಿಕೇಟ್ ನೀಡಬೇಕು. ಚಿತ್ರದುರ್ಗದಲ್ಲಿ ಪ್ರಬಲ ಆಕಾಂಕ್ಷಿ ಆಗಿರುವ ಡಾ.ವೈ.ರಾಮಪ್ಪ ಅವರಿಗೆ ಟಿಕೇಟ್ ಕೊಡಿ ಎಂದು ಭೋವಿ ಸಮುದಾಯದ ಸಚಿವರು, ಮಠಾಧೀಶರು ಕಾಂಗ್ರೆಸ್ ವರಿಷ್ಟರ ಮೇಲೆ ಒತ್ತಡ ಹೇರಿದ್ದರು.
ಈ ಎಲ್ಲಾ ಗೊಂದಲಗಳ ನಡುವೆ ಮೂರನೇ ಬಾರಿಗೆ ಟಿಕೇಟ್ ಪಡೆಯುವಲ್ಲಿ ಬಿ.ಎನ್.ಚಂದ್ರಪ್ಪ ಯಶಸ್ವಿಯಾಗಿದ್ದು, ಇನ್ನೂ ಚುನಾವಣಾ ಅಖಾಡದಲ್ಲಿ ಸೆಣಸಾಡಬೇಕಿದೆ.
ಇದನ್ನೂ ಓದಿ: ಮತದಾನ ಪ್ರಮಾಣ ಶೇ.5 ರಷ್ಟು ಹೆಚ್ಚಿಸಲು ಪಣ | ಸಿಇಓ ಎಸ್.ಜೆ.ಸೋಮಶೇಖರ್
2014ರಲ್ಲಿ ಮೋದಿ ಅಲೆಯಲ್ಲಿ ಬಿಜೆಪಿ ಅಭ್ಯರ್ಥಿ ಜನಾರ್ಧನಸ್ವಾಮಿ ವಿರುದ್ಧ ಗೆದ್ದಿದ್ದ ಬಿ.ಎನ್.ಚಂದ್ರಪ್ಪ, 2019ರಲ್ಲಿ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ವಿರುದ್ಧ 80 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಈಗ ಮೂರನೇ ಬಾರಿಗೆ ಅವರಿಗೆ ಟಿಕೇಟ್ ಸಿಕ್ಕಿದ್ದು, ದುರ್ಗದ ಕೋಟೆಗೆ ಅಧಿಪತಿಯಾಗಲಿದ್ದಾರಾ ಕಾದು ನೋಡಬೇಕಿದೆ.
