ಮುಖ್ಯ ಸುದ್ದಿ
Chitradurga: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ರಚನೆ | ಚಿತ್ರದುರ್ಗದ ಇಬ್ಬರು ಸಮಿತಿಗೆ ಆಯ್ಕೆ

Published on
CHITRADURGA NEWS |06 OCTOBER 2024
ಚಿತ್ರದುರ್ಗ: 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರ ಆಯ್ಕೆ ಸಲಹಾ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ ರಚಿಸಿರುವ ಈ ಸಮಿತಿಯಲ್ಲಿ ಚಿತ್ರದುರ್ಗದ (chitradurga)ಇಬ್ಬರು ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ಧಾರಣೆ
ಸಮಿತಿಯ ಅಧ್ಯಕ್ಷರಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು ಇದ್ದರೆ, ಚಿತ್ರದುರ್ಗ ಮೂಲದ ಜಿ.ಶರಣಪ್ಪ ಹಾಗೂ ರಂಗಭೂಮಿ ಕಲಾವಿದ ಪಿ.ತಿಪ್ಪೇಸ್ವಾಮಿ ಈ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ.
ಉಳಿದಂತೆ ರವಿಚಂದ್ರನ್, ಹಂಸಲೇಖ, ನಾಗೇಶ ಹೆಗಡೆ, ಸಿದ್ಧರಾಜು, ಡಾ.ಸಿ.ಎಸ್.ದ್ವಾರಕನಾಥ್, ರಂಜಾನ್ ದರ್ಗಾ, ಹಿರೇಮಗಳೂರು ಕಣ್ಣನ್ ಸೇರಿದಂತೆ ನಾಡಿನ ಸಾಹಿತಿಗಳು, ಗಣ್ಯರು, ವಿವಿಧ ರಂಗಗಳ ಪ್ರಮುಖರು, ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರುಗಳು ಪದನಿಮಿತ್ತ ಸದಸ್ಯರಾಗಿದ್ದಾರೆ.
Continue Reading
Related Topics:Chitradurga, Chitradurga news, Chitradurga Updates, Government of Karnataka, Kannada News, Kannada Rajyotsava, Rajyotsava Award, Selection Committee, ಆಯ್ಕೆ ಸಮಿತಿ, ಕನ್ನಡ ರಾಜ್ಯೋತ್ಸವ, ಕನ್ನಡ ಸುದ್ದಿ, ಕರ್ನಾಟಕ ಸರ್ಕಾರ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ರಾಜ್ಯೋತ್ಸವ ಪ್ರಶಸ್ತಿ

Click to comment