ಮುಖ್ಯ ಸುದ್ದಿ
ಚಿತ್ರದುರ್ಗದ ದಶಕಗಳ ಸಮಸ್ಯೆಗೆ ಕೊನೆಗೂ ಇತಿಶ್ರೀ | ದಾವಣಗೆರೆ ರಸ್ತೆಯ ರೈಲ್ವೇ ಗೇಟ್ ಬಳಿ ಫ್ಲೈಓವರ್ | ಸಂಸದ ಗೋವಿಂದ ಕಾರಜೋಳ

CHITRADURGA NEWS | 15 FEBRUARY 2025
ಚಿತ್ರದುರ್ಗ: ದಶಕಗಳಿಂದ ಸಮಸ್ಯೆಗೆ ಕಾರಣವಾಗಿದ್ದ, ಪ್ರತಿ ರೈಲು ಬಂದಾಗಲೂ ಜನ ಹಿಡಿಶಾಪ ಹಾಕುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಗುವ ಸಮಯ ಹತ್ತಿರವಾಗಿದೆ.
ತುರುವನೂರಿನಲ್ಲಿ ರಚಿಸಿರುವ ವಿಶ್ವದಾಖಲೆಯ ಹನುಮಾನ್ ರೇಖಾಚಿತ್ರದ ವೀಡಿಯೋ

ಚಿತ್ರದುರ್ಗದ KSRTC ಬಸ್ ನಿಲ್ದಾಣದ ಕಡೆಯಿಂದ ದಾವಣಗೆರೆ ಕಡೆಗೆ ಹೊರಟಾಗ ರೈಲ್ವೇ ಗೇಟ್ ಮುಚ್ಚುವ ಧಾವಂತ ಎಲ್ಲರನ್ನೂ ಕಾಡುತ್ತಿತ್ತು.
ದಾವಣಗೆರೆ ಕಡೆಯಿಂದ ಬಂದವರು ಇನ್ನೇನು ಗೇಟ್ ದಾಟಿದ್ದರೆ ಮನೆ ಸೇರುತ್ತಿದ್ದೆವು ಅಂದುಕೊಳ್ಳುತ್ತಿರುವಾಗಲೇ ಬಸ್ ನಿಲ್ಲಿಸಿ 20 ನಿಮಿಷ ಕಾಯುವ ಸ್ಥಿತಿ.
ಇದನ್ನೂ ಓದಿ: ಚಿತ್ರಹಳ್ಳಿ ಪೊಲೀಸರ ಕಾರ್ಯಾಚರಣೆ | ಐವರ ಬಂಧನ | 5 ಲಕ್ಷ ರೂ. ಮೌಲ್ಯದ ಶ್ರೀಗಂಧ ವಶ
ಸಂಸದ ಗೋವಿಂದ ಕಾರಜೋಳ ಪತ್ರಿಕಾ ಗೋಷ್ಠಿಯಲ್ಲಿ ಈ ಸಂಬಂಧ ಶುಭ ಸುದ್ದಿ ಪ್ರಕಟಿಸಿದ್ದು, ರೈಲ್ವೇ ಗೇಟ್ ಬಳಿ ಫ್ಲೈಓವರ್ ನಿರ್ಮಿಸಲು ರೈಲ್ವೇ ಇಲಾಖೆ ಅನುದಾನ ಮಂಜೂರು ಮಾಡಿರುವುದಾಗಿ ತಿಳಿಸಿದ್ದಾರೆ.
ಇದರೊಟ್ಟಿಗೆ ಚಿಕ್ಕಜಾಜೂರು ಹಾಗೂ ಹಳಿಯೂರು ಬಳಿಯೂ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೇ ಇಲಾಖೆ ಒಟ್ಟು 164 ಕೋಟಿ ಅನುದಾನ ಕೊಟ್ಟಿದೆ.
ಈ ಹಿಂದೆ ಚಿತ್ರದುರ್ಗ ದಾವಣಗೆರೆ ರಸ್ತೆಯಲ್ಲಿರುವ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ 50;50 ಅನುಪಾತದಲ್ಲಿ ಅನುದಾನ ಒದಗಿಸಬೇಕು. ರಾಜ್ಯ ಸರ್ಕಾರ ಭೂ ಸ್ವಾಧೀನ ಮಾಡಿಕೊಡಬೇಕು ಎಂದು ಮಾತುಕತೆ ನಡೆದಿತ್ತು.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ |ಇಂದಿನ ಹತ್ತಿ ರೇಟ್ ಎಷ್ಟಿದೆ?
ಆದರೆ, ರಾಜ್ಯ ಸರ್ಕಾರದಿಂದ ಈ ಸಂಬಂಧ ವಿಳಂಬ ಧೋರಣೆ ಮುಂದುವರೆದ ಕಾರಣಕ್ಕೆ ಸಂಸದ ಗೋವಿಂದ ಕಾರಜೋಳ ಇಲ್ಲಿ ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಕೇಂದ್ರ ರೈಲ್ವೇ ಸಚಿವರ ಗಮನಕ್ಕೆ ತಂದು ಪೂರ್ಣ ಪ್ರಮಾಣದ ಅನುದಾನವನ್ನು ರೈಲ್ವೇ ಇಲಾಖೆಯಿಂದಲೇ ಬಿಡುಗಡೆ ಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಸದ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಿಷ್ಟು:
ನಗರದ ದಾವಣಗೆರೆ ರಸ್ತೆಯಲ್ಲಿ ರೈಲ್ವೇ ನಿಲ್ದಾಣದ ಸಮೀಪದ ರಸ್ತೆಯಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ 78.66 ಕೋಟಿ ರೂ. ಚಿಕ್ಕಜಾಜೂರು ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ 51.72 ಕೋಟಿ ರೂ, ಚಿಕ್ಕಜಾಜೂರು-ಚಿತ್ರದುರ್ಗ ಮಧ್ಯೆ ಹಳಿಯೂರು ಬಳಿ ಮೇಲ್ಸೇತುವೆಗೆ 33.65 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ತೆಂಗು ಬೆಳೆಗೆ ಕಪ್ಪು ತಲೆ ಹುಳು ಬಾಧೆ | ರೈತರಿಗೆ ಜಾಗೃತಿ ಮೂಡಿಸಿ, ಹತೋಟಿಗೆ ತನ್ನಿ | ಎನ್.ಆರ್.ಮಹೇಶ್ವರಪ್ಪ
ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಈ ಹಿಂದೆ ರೈಲ್ವೇ ಇಲಾಖೆ ಹಾಗೂ ರಾಜ್ಯ ಸರ್ಕಾರ ತಲಾ 50:50 ಅನುಪಾತದಲ್ಲಿ ನಿರ್ಮಾಣಕ್ಕೆ ಒಪ್ಪಿಕೊಳ್ಳಲಾಗಿತ್ತು.
ಆದರೆ, ರಾಜ್ಯ ಸರ್ಕಾರದ ವಿಳಂಬದ ಕಾರಣಕ್ಕೆ ರೈಲ್ವೇ ಇಲಾಖೆಯೇ ಪೂರ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, 4 ರೈಲ್ವೇ ಲೈನ್, ಎರಡೂ ಕಡೆ ತಲಾ 5.5 ಅಡಿ ಪಾದಾಚಾರಿ ರಸ್ತೆ ನಿರ್ಮಾಣವಾಗಲಿದೆ.
ನಾಲ್ಕು ಪಥದ ಮೇಲ್ಸೇತುವೆ ಕಾಮಗಾರಿ ಇದಾಗಿದ್ದು, ಒಟ್ಟು 78.66 ಕೋಟಿ ವೆಚ್ಚವಾಗಲಿದೆ. ಇದರಿಂದ ಈ ರಸ್ತೆಯಲ್ಲಿ ಪ್ರತಿ ರೈಲು ಸಂಚರಿಸುವಾಗಿ ಜನರಿಗೆ ಆಗುತ್ತಿದ್ದ ತೊಂದರೆಗೆ ಇಲಾಖೆ ಪರಿಹಾರ ಕಲ್ಪಿಸಿದಂತಾಗಿದೆ ಎಂದರು.
ಇದನ್ನೂ ಓದಿ: ನರೇಗಾ ತಾಂತ್ರಿಕಾ ಸಹಾಯಕ ಕೆಲಸದಿಂದ ವಜಾ
ಈಗಾಗಲೇ, ಉಪ ಮುಖ್ಯ ಅಭಿಯಂತರರು, ರಸ್ತೆ ಮೇಲು ಸೇತುವೆಗಳು, ನೈರುತ್ಯ ಹುಬ್ಬಳ್ಳಿ, ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಈ ಮೂರು ರೈಲ್ವೆ ಗೇಟುಗಳನ್ನು-ಶಾಶ್ವತವಾಗಿ ಮುಚ್ಚಿ, ಸೇತುವೆ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಸಂಚಾರಕ್ಕೆ ಬದಲಿ ಮಾರ್ಗ ವ್ಯವಸ್ಥೆ ಮಾಡಿಕೊಡುವಂತೆ ಪತ್ರ ಬರೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಖಜಾಂಚಿ ಮಾದುರಿ ಗಿರೀಶ್, ಮುಖಂಡರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಲೋಕೇಶ್, ನಾಗರಾಜ್, ತಿಪ್ಪೇಸ್ವಾಮಿ, ಕುಮಾರ್ ಇತರರಿದ್ದರು.
