Connect with us

    ಸಿರಿಗೆರೆಯಲ್ಲಿ ಸಿನಿಮಾ ಚಿತ್ರೀಕರಣ | ಚಿತ್ರದುರ್ಗದ ಹಳ್ಳಿಮನೆಯಲ್ಲಿ ಸಿನಿ ಮಂದಿಯ ‘ಆರ್ಭಟ’

    ಮುಖ್ಯ ಸುದ್ದಿ

    ಸಿರಿಗೆರೆಯಲ್ಲಿ ಸಿನಿಮಾ ಚಿತ್ರೀಕರಣ | ಚಿತ್ರದುರ್ಗದ ಹಳ್ಳಿಮನೆಯಲ್ಲಿ ಸಿನಿ ಮಂದಿಯ ‘ಆರ್ಭಟ’

    ಚಿತ್ರದುರ್ಗನ್ಯೂಸ್..

    ಸೈಲೆನ್ಸ್… ಫ್ಲೋರ್ ಕ್ಲೀಯರ್ ಮಾಡಿ… ಲೈಟ್ ಹೋದ್ರೆ ಕಷ್ಟ ಕಣ್ರೋ… ರೋಲ್, ಕ್ಯಾಮೆರಾ, ಆಕ್ಷನ್..
    ಹೀಗೆ ಸಿನಿಮಾ ಚಿತ್ರೀಕರಣದ ಮಾತುಗಳು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿ ಕೇಳಿ ಬರುತ್ತಿವೆ.
    ಕಳೆದ 15 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಅನುಭವ ಪಡೆದಿರುವ ಪಾರ್ಥಸಾರಥಿ ನಿರ್ದೇಶನದ ಚೊಚ್ಚಲ ಸಿನಿಮಾ ‘ಆರ್ಭಟ’ ಚಿತ್ರದ ಚಿತ್ರೀಕರಣ ತಾಲ್ಲೂಕಿನ ಸಿರಿಗೆರೆಯಲ್ಲಿ ಭರದಿಂದ ಸಾಗುತ್ತಿದೆ.

    ಆಗಸ್ಟ್ 14 ರಂದು ಬೆಂಗಳೂರಿನಲ್ಲಿ ಮುಹೂರ್ತ ಮುಗಿಸಿಕೊಂಡ ಸಿನಿಮಾ ತಂಡ ಬೆಂಗಳೂರು, ಮಡಿಕೇರಿ, ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ.

    ಎರಡನೇ ಹಂತದ ಚಿತ್ರೀಕರಣ ಚಿತ್ರದುರ್ಗ ಭಾಗದಲ್ಲಿ ನಡೆಯುತ್ತಿದೆ. ಸಿನಿಮಾದ ಬಹುತೇಕ ಭಾಗ ಇದೇ ನೆಲದಲ್ಲಿ ಚಿತ್ರೀಕರಣಗೊಳ್ಳುತ್ತಿರುವುದು ವಿಶೇಷ. ನಿರ್ದೇಶನದ ಜತೆ ನಾಯಕನ ಪಾತ್ರದ ಹೊಣೆ ಹೊತ್ತಿದ್ದಾರೆ ಪಾರ್ಥಸಾರಥಿ. ನಾಯಕ ನಟನಾಗಿ ಅಭಿನಯಿಸಿರುವ ಮೂರು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ.

    ಚಿತ್ರೀಕರಣದ ನಡುವೆಯೇ ಚಿತ್ರದುರ್ಗನ್ಯೂಸ್.ಕಾಂ ಜೊತೆ ಮಾತನಾಡಿದ ನಿರ್ದೇಶಕ ಪಾರ್ಥಸಾರಥಿ, ‘ಆರ್ಭಟ ಸಿನಿಮಾ 2024ರ ಜನವರಿಯಲ್ಲಿ ತೆರೆಗೆ ಬರಲಿದೆ. ಸಿನಿಮಾದ ಕನ್ನಡ ಭಾμÉ – ನೆಲದ ಹಾಡನ್ನು ನವೆಂಬರ್‍ನಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅನ್ನದಾತರು ಅನುಭವಿಸುತ್ತಿರುವ ಸಂಕಷ್ಟ, ಹಳ್ಳಿಗಾಡಿನ ಪ್ರೇಮಿಗಳ ಒಲವು, ಕೌಟುಂಬಿಕ ಬಾಂಧವ್ಯವನ್ನು ತೆರೆಯ ಮೇಲೆ ತರಲಾಗುತ್ತಿದೆ’ ಎಂದರು.

    ‘ಸಿರಿಗೆರೆ ಮತ್ತು ಸುತ್ತಮುತ್ತಲಿನ ಜಾಗಗಳು ಕಥೆಗೆ ಪೂರಕವಾಗಿವೆ. ಆ ಕಾರಣಕ್ಕೆ ಈ ಭಾಗದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಸಿರಿಗೆರೆ, ಶಾಂತಿವನ ಮುಂತಾದ ಕಡೆ 10 ರಿಂದ 15 ದಿನ ಚಿತ್ರೀಕರಣ ನಡೆಯುತ್ತದೆ. ಈಗಾಗಲೇ ಚಿಕ್ಕೇನಹಳ್ಳಿಯಲ್ಲಿ ಎರಡು ದಿನಗಳ ಚಿತ್ರೀಕರಣ ಮುಗಿದಿದೆ. ಒಂದು ಹಾಡಿನ ಚಿತ್ರೀಕರಣ ಸಹ ನಡೆಯಲಿದೆ. ಸಿನಿಮಾಕ್ಕೆ ಹಾಡುಗಳ ಧ್ವನಿಗ್ರಹಣ ಮುಗಿದಿದೆ. ಇದೊಂದು ಹಳ್ಳಿಗರ ಕುಟುಂಬದ ಕಥೆಯಾಗಿದ್ದು, ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಕೌಟುಂಬಿಕ ಸಿನಿಮಾ ಎಂದು ಪಾರ್ಥಸಾರಥಿ ವಿವರಿಸಿದರು.

    ಸಿನಿಮಾ ಚಿತ್ರೀಕರಣವನ್ನು ಗ್ರಾಮೀಣರು ಕೂತೂಹಲದಿಂದ ವೀಕ್ಷಿಸುತ್ತಿದ್ದಾರೆ. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಹಿರಿಯ ನಟರ ಜತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top