CHITRADURGA NEWS | 26 JUNE 2024
ಚಿತ್ರದುರ್ಗ: ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ.ಬಿ.ಆರ್.ಅಂಬೇಡ್ಕರ್, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳ 2024-25ನೇ ಸಾಲಿನ 7, 8 ಮತ್ತು 9ನೇ ತರಗತಿಗಳ ಖಾಲಿ ಸ್ಥಾನಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 1 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ
ಇದನ್ನೂ ಓದಿ: ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ | ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ

ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಸಮೀಪದ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ವಸತಿ ಶಾಲೆಗಳಲ್ಲಿ ಪ್ರಸ್ತುತ ಖಾಲಿ ಇರುವ ಹಾಗೂ ಮುಂದೆ ಖಾಲಿ ಆಗಬಹುದಾದ ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಮತ್ತು ಸರ್ಕಾರದ ಮೀಸಲಾತಿ ಅನುಸಾರ ಆಯ್ಕೆಗೆ ಪರಿಗಣಿಸಲಾಗುವುದು.
ವಸತಿ ಶಾಲೆಗಳಲ್ಲಿ ಖಾಲಿ ಇರುವ ಸ್ಥಾನಗಳ ವಿವರ ಇಂತಿದೆ. 7 ತರಗತಿ ಪ್ರವೇಶಾತಿ ಖಾಲಿ ಸ್ಥಾನಗಳಲ್ಲಿ ಎಸ್‍ಸಿ-4 ಬಾಲಕಿಯರು, ಎಸ್ ಟಿ-1 ಬಾಲಕ, 4 ಬಾಲಕಿಯರು, ಪ್ರವರ್ಗ-2ಎ 1 ಬಾಲಕ ಸೇರಿದಂತೆ ಒಟ್ಟು 10 ಸ್ಥಾನಗಳು ಖಾಲಿ ಇವೆ. 8ನೇ ತರಗತಿ ಪ್ರವೇಶಾತಿ ಖಾಲಿ ಸ್ಥಾನಗಳಲ್ಲಿ ಎಸ್‍ಸಿ-5 ಬಾಲಕರು, 3 ಬಾಲಕಿಯರು, ಎಸ್.ಟಿ-5 ಬಾಲಕರು, 5 ಬಾಲಕಿಯರು, ಪ್ರವರ್ಗ1-4 ಬಾಲಕರು, 3 ಬಾಲಕಿಯರು, 2ಎ-3 ಬಾಲಕಿಯರು, 3ಬಿ 1 ಬಾಲಕ ಸೇರಿದಂತೆ ಒಟ್ಟು 29 ಸ್ಥಾನಗಳು ಖಾಲಿ ಇವೆ. 9ನೇ ತರಗತಿ ಪ್ರವೇಶಾತಿ ಖಾಲಿ ಸ್ಥಾನಗಳಲ್ಲಿ ಎಸ್.ಸಿ-2 ಬಾಲಕರು, 3 ಬಾಲಕಿಯರು, ಎಸ್.ಟಿ-7 ಬಾಲಕರು, 3 ಬಾಲಕಿಯರು, ಪ್ರವರ್ಗ1-1 ಬಾಲಕ, 1 ಬಾಲಕಿ, 2ಎ-1 ಬಾಲಕ, 3ಎ-1ಬಾಲಕ, 1ಬಾಲಕಿ, 3ಬಿ-1 ಬಾಲಕಿ ಸೇರಿದಂತೆ ಒಟ್ಟು 21 ಸ್ಥಾನಗಳು ಖಾಲಿ ಇವೆ.
ಇದನ್ನೂ ಓದಿ: ಫೈಓವರ್ ನಿರ್ಮಾಣಕ್ಕೆ ಕರುನಾಡ ವಿಜಯಸೇನೆ ಅಗ್ರಹ
ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 1 ಸಂಜೆ 5.30 ಆಗಿದ್ದು, ಪ್ರವೇಶ ಪರೀಕ್ಷೆಯು ಜುಲೈ 6ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಕ್ರೈಸ್ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
