Connect with us

ರೈತರ ಧರಣಿ | ತಾತ್ಕಾಲಿಕ ಸ್ಥಗಿತ | ಕಾರ್ಯಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ

ನಗರದ ಜಿ.ಪಂ. ಮುಂಭಾಗದಲ್ಲಿ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಹಾಗೂ ರೈತರು 

ಮುಖ್ಯ ಸುದ್ದಿ

ರೈತರ ಧರಣಿ | ತಾತ್ಕಾಲಿಕ ಸ್ಥಗಿತ | ಕಾರ್ಯಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ

CHITRADURGA NEWS | 08 MARCH 2024

ಚಿತ್ರದುರ್ಗ : ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ 5300 ಕೋಟಿ ರೂಗಳನ್ನು ಬಿಡುಗಡೆಗೊಳಿಸುವಂತೆ ಕಳೆದ 33 ದಿನಗಳಿಂದ ಜಿಲ್ಲಾ ಪಂಚಾಯತ್ ಎದುರು ನಡೆಸುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ತಿಳಿಸಿದರು.

ಇದನ್ನೂ ಓದಿ: ಡಿಸಿಎಂ ಅಂದ್ರೆ ಡಮ್ಮಿ ಸಿಎಂ | ಯತೀಂದ್ರ ಶ್ಯಾಡೋ ಸಿಎಂ | ಪ್ರಿಯಾಂಕ ಖರ್ಗೆ ಸೂಪರ್ ಸಿಎಂ | ಗೋವಾ ಸಿಎಂ ಏನೆಲ್ಲಾ ಹೇಳಿದ್ರು ಗೊತ್ತಾ

ನಗರದ ಜಿ.ಪಂ. ಮುಂಭಾಗದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1974 ರಲ್ಲಿದ್ದಂತ ಬರಗಾಲ ಈಗ ಮತ್ತೆ ಎದುರಾಗಿದೆ, ಭದ್ರ ಮೇಲ್ದಂಡೆ ವಿಚಾರವಾಗಿ ಸರ್ಕಾರದ ಗಮನ ಸೆಳೆಯುತ್ತಲೇ ಬರುತ್ತಿದ್ದೇವೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜವಾಬ್ದಾರಿಯಿಂದ ನಡೆದುಕೊಂಡಿದ್ದರೆ ಇಷ್ಟೊತ್ತಿಗೆ ಜಿಲ್ಲೆಗೆ ನೀರು ಹರಿಯುತ್ತಿತ್ತು, ಕೆರೆಗಳು ತುಂಬಿರುತ್ತಿದ್ದವು ನೀರಾವರಿ, ಯೋಜನೆಯನ್ನು ಪೂರ್ಣಗೊಳಿಸುವಂತೆ ಕೇಂದ್ರ ಸಚಿವ ನಾರಾಯಣ ಸ್ವಾಮಿಗೆ ಮನವಿ ಕೊಟ್ಟಿದ್ದೇವೆ.

ಇದನ್ನೂ ಓದಿ: ರೋಗಿಗಳಿಗೆ ಸಿಹಿ ಸುದ್ದಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ಆಡಳಿತಾತ್ಮಕ ಹಾಗೂ ಕಾನೂನು ಸಮಸ್ಯೆಗಳನ್ನು ಬಗೆಹರಿಸಿ ಮಳೆಗಾಲ ಮುಗಿಯುವುದರೊಳಗೆ ನೀರಾವರಿ ಯೋಜನೆಯನ್ನು ಮುಗಿಸಬೇಕು, ಚುನಾವಣೆ ಘೋಷಣೆಯಾದ ಒಂದು ವಾರದ ವರೆಗೆ ನೋಡುತ್ತೇವೆ, ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸದಿದ್ದರೆ, ಈ ಬಾರಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಜಿಲ್ಲೆಯಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 159 ರೂ. ಹೆಚ್ಚಳ

ಇಲ್ಲಿವರೆಗೂ ನಮ್ಮ ಧರಣಿಗೆ ರೂ. 2,18,900 ಹಣ ಬಂದಿದೆ, ಇದರಲ್ಲಿ ರೂ.1,84,547 ಖರ್ಚಾಗಿದೆ, ರೂ. 34,353 ಉಳಿದಿರುವುದನ್ನು ಮುಂದಿನ ಹೋರಾಟಕ್ಕೆ ಬಳಸುತ್ತೇವೆ. 14 ಪ್ಯಾಕೆಟ್ ಅಕ್ಕಿ ಕೂಡ ಮಿಕ್ಕಿದೆ, ಕೆಲವರು ಅವಲಕ್ಕಿ, ಎಣ್ಣೆ ಕೊಟ್ಟಿದ್ದಾರೆ. ನಮಗೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಡಿ.ಎಸ್ ಹಳ್ಳಿ, ರೈತ ಮುಖಂಡರುಗಳಾದ ಆರ್. ಬಿ. ನಿಜಲಿಂಗಪ್ಪ, ಅಪರಿಸನಹಳ್ಳಿ ಬಸವರಾಜಪ್ಪ, ಮಂಜುನಾಥ್, ರಾಜಶೇಖರ್, ಸತೀಶ್, ಮಲ್ಲೇಶ್, ತಿಪ್ಪೇಸ್ವಾಮಿ, ನಿರಂಜನ್ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version