ಹೊಳಲ್ಕೆರೆ
ನೀರಾವರಿ ಇಲಾಖೆ ಎದುರು ರೈತನ ಏಕಾಂಗಿ ಧರಣಿ | ಕಳಪೆ ಕಾಮಗಾರಿಗಳ ತನಿಖೆಗೆ ಆಗ್ರಹ
CHITRADURGA NEWS | 27 JUNE 2024
ಹೊಳಲ್ಕೆರೆ : ತಾಲೂಕಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಕೆರೆ ಹಾಗೂ ಚೆಕ್ ಡ್ಯಾಮ್ ಗಳಲ್ಲಿ ಕಳಪೆ ಕಾಮಗಾರಿ ಆಗಿದ್ದು, ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರೈತ ರೇವಣ್ಣ ಉಪವಾಸ ಸತ್ಯಾಗ್ರಹ ನಡೆಸಿ ಅಗ್ರಹಿಸಿದರು.
ಇದನ್ನೂ ಓದಿ: ಈ ವರ್ಷವೂ ಚಿತ್ರದುರ್ಗಕ್ಕೆ ಭದ್ರೆ ಹರಿಯುವುದು ಅನುಮಾನ | ಅಬ್ಬಿನಹೊಳಲು ಬಳಿ ಶೇ.9 ರಷ್ಟು ಮಾತ್ರ ಕಾಮಗಾರಿ
ನಗರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಕಚೇರಿ ಎದುರು ಗುರುವಾರ ತಾಳಿಕಟ್ಟೆ ಗ್ರಾಮದ ರೈತ ರೇವಣ್ಣ ಉಪವಾಸ ಸತ್ಯಾಗ್ರಹ ನಡೆಸಿದರು.
ಶಾಸಕರು ಕೆರೆ ಮತ್ತು ಚೆಕ್ ಡ್ಯಾಂ ಗಳ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿ ಇಲಾಖೆಯ AEE ಮತ್ತು JE ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಹೊಳಲ್ಕೆರೆ ತಾಲೂಕು, ರಾಮಗಿರಿ ಹೋಬಳಿ, ತಾಳಿಕಟ್ಟೆ ಮತ್ತು ಟಿ. ವಡೇರಹಳ್ಳಿ ಗ್ರಾಮದ ಮ್ಯಾಸನ ಕಟ್ಟೆ ಅಭಿವೃದ್ಧಿ ಕಾಮಗಾರಿ ಅಪೂರ್ಣಗೊಂಡಿದ್ದು, ಈ ಕಾಮಗಾರಿಯ ಅಳತೆ ಪುಸ್ತಕ ಬರೆದು ಹಣ ಪಾವತಿ ಪಡೆಯುವ ಉದ್ದೇಶದಿಂದ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ.
ಇದನ್ನೂ ಓದಿ: ನಿರ್ಮಿತಿ ಕೇಂದ್ರದ ಹಗರಣ | ಸಿಒಡಿ ತನಿಖೆಗೆ ವಹಿಸಿ | ಸಚಿವ ಡಿ.ಸುಧಾಕರ್
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಹೊಳಲ್ಕೆರೆ ತಾಲೂಕಿನ ಎಲ್ಲಾ ಗ್ರಾಮಗಳ ಕೆರೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಎಸ್ಟಿಮೇಟ್ ನಲ್ಲಿ ಅಳವಡಿಸಿದ ಸಾಮಗ್ರಿಗಳು ಗ್ರಾನೆಟ್, ಕಲ್ಲು,ಕಾಡುಗಲ್ಲು, ಗ್ರಾವಲ್, ಸಿಮೆಂಟ್ ಜೆಲ್ಲಿಕಲ್ಲು ಕಬ್ಬಿಣ ಕಳಪೆಯಾಗಿವೆ.
ಇಲಾಖೆಯಿಂದ ಎಲ್ಲಾ ಸಾಮಗ್ರಿಗಳನ್ನು ಗುಣಮಟ್ಟ ಪರೀಕ್ಷೆ ಮಾಡಿ, ತನಿಖೆ ಮಾಡಬೇಕು, ಹೊಳಲ್ಕೆರೆ ತಾಲೂಕು ನಾದ್ಯಂತ ಕಾಮಗಾರಿಗಳಿಗೆ ನಿಗದಿಪಡಿಸಿದ ಹಣಕ್ಕೆ ತಕ್ಕಂತೆ ಕೆಲಸ ಆಗಿದೆಯೋ ಇಲ್ಲವೋ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.