ಮುಖ್ಯ ಸುದ್ದಿ
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಜನ್ಮ ದಿನಾಚರಣೆ | ಕೇಕ್ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು
CHITRADURGA NEWS | 25 JULY 2024
ಚಿತ್ರದುರ್ಗ: ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಇದನ್ನೂ ಓದಿ: Accident: ಲಾರಿ ಡಿಕ್ಕಿ ಹೆದ್ದಾರಿ ತಡೆಗೋಡೆ ಕುಸಿತ | ಚಾಲಕ ಮೃತ
ನಗರದಲ್ಲಿರುವ ಮಾಜಿ ಶಾಸಕರ ಮನೆಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತೆರಳಿ ಕೇಕ್ ಕತ್ತರಿಸುವ ಮೂಲಕ ಶುಭ ಹಾರೈಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮಾಜಿ ನಗರ ಅಭಿವೃದ್ಧಿ ಅಧ್ಯಕ್ಷ ಜಿಟಿ ಸುರೇಶ್, ಶಿವಣ್ಣಚಾರ್, ನವೀನ್ ಚಾಲುಕ್ಯ, ಮೋಹನ್, ನಾಗರಾಜ್ ಬೇದ್ರೆ, ಚಲವಾದಿ ತಿಪ್ಪೇಸ್ವಾಮಿ, ಶೈಲಜಾ ರೆಡ್ಡಿ, ಮಂಜುಳಮ್ಮ, ಕವಿತಾ, ಶೀಲಾ, ಶಂಭು ಪರಶುರಾಮ್ ಅಭಿನಂದಿಸಿದರು.