ಮುಖ್ಯ ಸುದ್ದಿ
ಗಿರಿಜನ ಉಪ ಯೋಜನೆಯಡಿ SME ಘಟಕಗಳ ಸ್ಥಾಪನೆ | ಅರ್ಜಿ ಆಹ್ವಾನ
CHITRADURGA NEWS | 14 NOVEMBER 2024
ಚಿತ್ರದುರ್ಗ: ವಿಶೇಷ ಘಟಕ ಯೋಜನೆಯಡಿ ಮತ್ತು ಗಿರಿಜನ ಉಪ ಯೋಜನೆಯಡಿ SME ಘಟಕಗಳ ಸ್ಥಾಪನೆಗೆ ಅರ್ಜಿ ಅಹ್ವಾನಿಸಲಾಗಿದೆ.
ಕ್ಲಿಕ್ ಮಾಡಿ ಓದಿ: ಅಡಿಕೆ ವ್ಯಾಪಾರಿ ಆತ್ಮಹತ್ಯೆ | ಡೆತ್ ನೋಟ್ ಪತ್ತೆ
ಘಟಕಗಳನ್ನು ಸ್ಥಾಪಿಸಲು ಆಸಕ್ತಿ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳು ಡಿಸೆಂಬರ್ 15ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ವಿಶೇಷ ಘಟಕ, ಗಿರಿಜನ ಉಪ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿ ಸಣ್ಣ (ಎಸ್.ಎಂ.ಇ) ಘಟಕಗಳ ಸ್ಥಾಪನೆಗೆ ಶೇ.75 ರಷ್ಟು ಸಹಾಯಧನ, ಗರಿಷ್ಠ ರೂ.2.00ಕೋಟಿವರಗೆ ಸಹಾಯಧನ ನೀಡುವ ಯೋಜನೆಯಡಿ 2024-25ನೇ ಸಾಲಿಗೆ ವಿಶೇಷ ಘಟಕ ಯೋಜನೆಯಡಿ 3 ಮತ್ತು ಗಿರಿಜನ ಉಪ ಯೋಜನೆಯಡಿ 2 ಸೇರಿದಂತೆ ಒಟ್ಟು 5 ಎಸ್.ಎಂ.ಇ ಘಟಕಗಳನ್ನು ಸ್ಥಾಪಿಸಲು ಗುರಿ ನಿಗದಿಪಡಿಸಲಾಗಿದೆ.
ಕ್ಲಿಕ್ ಮಾಡಿ ಓದಿ: ಸಿರಿಧಾನ್ಯಗಳಿಗೆ ಸೂಕ್ತ ವೇದಿಕೆಗೆ ಪ್ರಯತ್ನ | ಜಿ.ಪಂ ಸಿಇಓ ಸೋಮಶೇಖರ್ ಭರವಸೆ
ಹೆಚ್ಚಿನ ಮಾಹಿತಿಗಾಗಿ ನಗರದ ಬಿ.ಡಿ.ರೋಡ್, ಭಾಗ್ಯ ಕಾಂಪ್ಲೆಕ್ಸ್ನಲ್ಲಿನ ಕೈಮಗ್ಗ ಮತು ಜವಳಿ ಇಲಾಖೆ ಉಪನಿರ್ದೇಶಕ ಕಚೇರಿ ದೂರವಾಣಿ ಸಂಖ್ಯೆ 08194-221426 ಗೆ ಸಂರ್ಕಿಸಲು ಪ್ರಕಟಣೆ ತಿಳಿಸಿದೆ.