ಮುಖ್ಯ ಸುದ್ದಿ
ದುರ್ಗಾದೇವಿ 68ನೇ ಜಾತ್ರಾ ಮಹೋತ್ಸವ | ಹೊರಬೀಡು
CHITRADURGA NEWS | 24 JANUARY 2025
ಚಿತ್ರದುರ್ಗ: ನಗರದ ಐಯ್ಯಣ್ಣಪೇಟೆಯಲ್ಲಿನ ದರ್ಜಿ ಕಾಲೋನಿಯ ಶ್ರೀ ದುರ್ಗಾದೇವಿಯ ದೇವಸ್ಥಾನದ ವತಿಯಿಂದ 68ನೇ ವರ್ಷದ ಹೊರಬೀಡು ಜಾತ್ರಾ ಮಹೋತ್ಸವವನ್ನು ಜ.28 ರವರೆಗೆ ಹಮ್ಮಿಕೊಳ್ಳಲಾಗಿದೆ.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಜ.23 ರಂದು ಶ್ರೀ ದುರ್ಗಾದೇವಿಗೆ ಗಂಗಾ ಪೂಜೆ ಜರುಗಿತು, ಇಂದು ಕಂಕಣ ಧಾರಣೆ ಮಾಡಿದ ನಂತರ ಭಕ್ತರ ಮನೆಗೆ ಭೇಟಿ ನೀಡಿ ಭಂಢಾರವನ್ನು ಹಂಚಲಾಯಿತು.
ಅಮ್ಮನವರ ಮೆರವಣಿಗೆ ಭಾವಸಾರ ಕ್ಷತ್ರಿಯ ಕಲ್ಯಾಣ ಮಂಟಪದಿಂದ ಪ್ರಾರಂಭವಾಗಿ ಚಿಕ್ಕಪೇಟೆ, ಆನೆಬಾಗಿಲು ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಬಿ.ಡಿ.ರಸ್ತೆ ವಾಸವಿ ಮಹಲ್ ರಸ್ತೆ, ಪ್ರಸನ್ನ ಟಾಕೀಸ್ ರಸ್ತೆ, ಗೋಪಾಲಪುರ ರಸ್ತೆಯ ಮೂಲಕ ದರ್ಜಿ ಕಾಲೋನಿಯಲ್ಲಿನ ದುರ್ಗಾದೇವಿ ದೇವಸ್ಥಾನ ತಲುಪಿತು.
ಇಂದು ನಗರದ ಭಾವಸಾರ ಕಲ್ಯಾಣ ಮಂಟಪದಲ್ಲಿ ದುರ್ಗಾದೇವಿಯನ್ನು ವಿವಿಧ ರೀತಿಯ ಹೂಗಳಿಂದ ಅಲಂಕಾರವನ್ನು ಮಾಡುವುದರ ಮೂಲಕ ಬೆಳ್ಳಿಯ ಮುಖ ಪದ್ಮವನ್ನು ಇರಿಸಿ, ತಲೆಯ ಮೇಲೆ ನಾಗರ ಹಾವಿನ ಹೆಡೆಯನ್ನು ನಿರ್ಮಾಣ ಮಾಡಿ, ಬೆಳ್ಳಿ ಕೈಗಳಿಂದ ಭಕ್ತಾರನ್ನು ಆರ್ಶೀವಾದ ಮಾಡುವ ರಿತೀಯಲ್ಲಿ ಅಲಂಕಾರ ಮಾಡಲಾಗಿತ್ತು.
Also Read: ಆಹ್ವಾನ ಪತ್ರಿಕೆಯಲ್ಲಿ ಶ್ರೀ ಜಯದೇವ ಮುರುಘರಾಜೇಂದ್ರ ಕ್ರಿಡಾಂಗಣವೆಂದೇ ನಮೂದಿಸಿ
ಜ.26 ರಂದು ದೇವಸ್ಥಾನದ ಆವರಣದಲ್ಲಿ ಅಮ್ಮನವರಿಗೆ ಸಂಜೆ ಉಯ್ಯಾಲೆ ಉತ್ಸವ, ಜ.28 ರಂದು ಚಂದ್ರವಳ್ಳಿಗೆ ಹೊರಬೀಡು ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಈ ಸಂದರ್ಭದಲ್ಲಿ ಭಾವಸಾರ ಕ್ಷತೀಯ ಸಮಾಜದ ಅಧ್ಯಕ್ಷ ಆರ್.ಕೆ.ಶ್ಯಾಂ, ಪ್ರಧಾನ ಕಾರ್ಯದರ್ಶಿ ಕೆ.ಇ.ಬಿ.ನಾಗರಾಜ್, ಖಂಜಾಚಿ ರಾಜೇಶ್ ಬೇದ್ರೇ, ಶ್ರೀನಾಥ್, ಶ್ರೀಧರ್, ಪರಶುರಾಮ್, ಮಮತ, ನಾಗರಾಜ್, ನಾಗರಾಜ್ ಬೇದ್ರೇ ಸೇರಿದಂತೆ ಇತರರು ಭಾಗವಹಿಸಿದ್ದರು.