ಮುಖ್ಯ ಸುದ್ದಿ
ಡಾ.ಬಿ.ಎಲ್.ವೇಣುಗೆ ಅನಾರೋಗ್ಯ | ಫೋರ್ಟೀಸ್ ಆಸ್ಪತ್ರೆಗೆ ದಾಖಲು, ಚೇತರಿಕೆ
CHITRADURGA NEWS | 15 MAY 2024
ಚಿತ್ರದುರ್ಗ: ಚಿತ್ರದುರ್ಗದ ಸಾಕ್ಷಿಪ್ರಜ್ಞೆಯಂತಿರುವ ಖ್ಯಾತ ಕಾದಂಬರಿಕಾರ, ಚಿತ್ರಕಥೆಗಾರ ಡಾ.ಬಿ.ಎಲ್.ವೇಣು ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಚಿತ್ರದುರ್ಗದ ಪತಂಜಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಡಾ.ಬಿ.ಎಲ್.ವೇಣು ಅವರಿಗೆ ಪತಂಜಲಿ ಆಸ್ಪತ್ರೆಯ ಡಾ.ಮುಕುಂದರಾವ್ ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಶ್ರೀ ರಾಜಾ ಉತ್ಸವಾಂಭ ಉಚ್ಚಂಗೆಲ್ಲಮ್ಮ ದೇವಿಗೆ ಬಂಗಾರದ ಮುಖಪದ್ಮ
ಪೋಟೀಸ್ ಆಸ್ಪತ್ರೆಯ ಐಸಿಯುನಲ್ಲಿಟ್ಟು ವೇಣು ಅವರಿಗೆ ಚಿಕಿತ್ಸೆ ನೀಡಿದ್ದು, ಸೋಮವಾರ ರಾತ್ರಿ ಜನರಲ್ ವಾರ್ಡ್‍ಗೆ ಶಿಫ್ಟ್ ಮಾಡಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದು, ಒಂದೆರಡು ದಿನಗಳಲ್ಲಿ ಚಿತ್ರದುರ್ಗಕ್ಕೆ ಮರಳಲಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಬಿ.ಎಲ್.ವೇಣು ತಮ್ಮ ಆತ್ಮೀಯರಿಗೆ ಫೇಸ್‍ಬುಕ್ ಮೂಲಕ ಪತ್ರ ಬರೆದು ಎಲ್ಲವನ್ನೂ ವಿವರಿಸಿದ್ದಾರೆ. ತಮ್ಮ ಆರೋಗ್ಯದ ಬಗ್ಗೆಯೂ ಕಳಕಳಿ ವ್ಯಕ್ತಪಡಿಸಿದ್ದಾರೆ. ವೇಣು ಅವರು ತಮ್ಮ ಆತ್ಮೀಯರು, ಸ್ನೇಹಿತರಿಗಾಗಿ ಬರೆದಿರುವ ಬರಹ ಕೆಳಗಿದೆ ನೋಡಿ..
ಸ್ನೇಹಿತರು, ಆತ್ಮೀಯರಿಗೆ ಬಿ.ಎಲ್.ವೇಣು ಪತ್ರ:
ಆತ್ಮೀಯರೇ..
ನಾನೀಗ ಮೊದಲ ಬಾರಿಗೆ ಇದ್ದಕ್ಕಿದ್ದಂತೆ ಅನಾರೊಗ್ಯ ಪೀಡಿತನಾಗಿ ಶುಕ್ರವಾರ ನಮ್ಮ ಡಾ.ಮುಕುಂದರಾವ್ ಅವರ ಪತಂಜಲಿ ಆಸ್ಪತ್ರೆ ಚಿತ್ರದುರ್ಗ ಸೇರಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ವಧು-ವರರ ಸಮಾವೇಶ | ಸರ್ವಧರ್ಮಿಯ ವಧು, ವರರು ಭಾಗವಹಿಸಲು ಅವಕಾಶ
ಕಾರಣ ಉಸಿರಾಟದ ತೀವ್ರ ತೊಂದರೆ. ತುಂಬಾ ಮುತುವರ್ಜಿಯಿಂದ ಡಾಕ್ಟರ್ ಅವರು ನೋಡಿಕೊಂಡರೂ ಉಸಿರಾಟದ ತೀವ್ರ ಸಮಸ್ಯೆಯಿಂದಾಗಿ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗೆ ರಾತ್ರೋರಾತ್ರಿ ಆಂಬುಲೆನ್ಸ್ ಅರೇಂಜ್ ಮಾಡಿ ಶುಭಹಾರೈಸಿ ಕಳುಹಿಸಿದರು.
ಹೋಗಿದ್ದು ಉಸಿರಾಟದ ತೊಂದರೆಗೆ.ಅದರ ಜೊತೆಗೆ ನೂರಾರು ಟೆಸ್ಟ್ ಗಳನ್ನು ಮಾಡಿಸಿ ಲಿವರ್ ತೊಂದರೆ, ಕಿಡ್ನಿ ಕ್ರಿರಿಯಾಟಿನ್ ಸಮಸ್ಯೆಯನ್ನೂ ಸೇರಿಸಿ *ಐಸಿಯು*ಗೆ ನಾಲ್ಕುದಿನ ಇಟ್ಟುಕೊಂಡು ವಿವಿಧ ಟೆಸ್ಟ್ ಗಳಾದ ಎಕ್ಸ್ ರೆ ,ಸಿ ಟಿ. ಸ್ಕ್ಯಾನ್, ಲಿವರ್ ಮತ್ತು ಕಿಡ್ನಿ ಸ್ಕ್ಯಾನ್ ನಾನಾ ನಮೂನೆಯ ಟೆಸ್ಟ್ ಗಳಾಗಿ ಅರೆ ಜೀವವಾದೆ.
ಇದನ್ನೂ ಓದಿ: ತಪ್ಪಿದ ಭಾರೀ ಅನಾಹುತ | 49 ಪ್ರಯಾಣಿಕರ ಜೀವ ಉಳಿಸಿದ ಐರಾವತ ಬಸ್ ಚಾಲಕ
ನಾಲ್ಕು ದಿನ ಐಸಿಯು ನಲ್ಲಿಟ್ಟುಕೊಂಡ ವೈದ್ಯರುಗಳು ಕಿವಿ ಮೂಗು ಬಿಟ್ಟು ಸಾಧ್ಯವಾದ ಕಡೆಯೆಲ್ಲಾ ಸೂಜಿ ಹಾಕಿ ವೆಯಿನ್ ನರ್ವ್ ಗಳನ್ನೂ ಬಿಡದೆ ಡ್ರಿಪ್ ಬಾಟಲ್ ನೇತುಹಾಕಿದರು.ಮೂಗಿನಿಂದ ಆಕ್ಸಿಜನ್ ಕೊಡುವ ಏರ್ಪಾಡು ಮಾಡಿ ಗಂಭೀರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.
ನಾಲ್ಕು ದಿನಗಳ ಕಾಲ ಹಗಲು ಯಾವುದೋ ರಾತ್ರಿಯಾವುದೋ ತಿಳಿಯದಂತೆ ಮಾಡಿ ಐಸಿಯು ನಲ್ಲಿಟ್ಟು ರಕ್ಷಿಸಿ ನಿನ್ನೆ ರಾತ್ರಿ ದಿ.13 ರಂದು ಸ್ಪೆಷಲ್ ವಾರ್ಡ್ ಗೆ ತಂದು ಹಾಕಿದ್ದಾರೆ. ಸಮಸ್ಯೆಗಳು ಸುಧಾರಿಸಿವೆ. ಇನ್ನೆರಡು ದಿನಗಳಲ್ಲಿ ಡಿಸ್ ಚಾರ್ಜ್ ಮಾಡಬಹುದು. ಬಿಲ್ ವಿಷವೇರಿದಂತೆ ಏರುತ್ತಿದೆ.
ಇದನ್ನೂ ಓದಿ: ಹಿಮಾಲಯದ ತಪ್ಪಲಲ್ಲಿ ಭಗೀರಥ ಜಯಂತಿ ಆಚರಿಸಿದ ಕನ್ನಡದ ಮಠಾಧೀಶರು
ಈ ಕ್ಷಣಕ್ಕೆ ಮೂರು ಲಕ್ಷ ಮುಟ್ಟಿದೆ.ಮುಂದೇನಾಗುತ್ತದೋ ನೋಡೋಣ. ದುರ್ಗಕ್ಕೆ ಬಂದಾಗ ಭೇಟಿಯಾಗೋಣ. ಆರೋಗ್ಯದ ಕಡೆ ಗಮನವಿಡಿ.