Connect with us

Leopard Death; ಚಿರತೆ ಸಾವಿನ ಬಗ್ಗೆ ಅನುಮಾನ | ಕರುನಾಡ ವಿಜಯಸೇನೆಯಿಂದ ತನಿಖೆಗೆ ಆಗ್ರಹ 

ಕರುನಾಡ  ವಿಜಯಸೇನೆ ಕಾರ್ಯಕರ್ತರು ವಲಯ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು

ಮುಖ್ಯ ಸುದ್ದಿ

Leopard Death; ಚಿರತೆ ಸಾವಿನ ಬಗ್ಗೆ ಅನುಮಾನ | ಕರುನಾಡ ವಿಜಯಸೇನೆಯಿಂದ ತನಿಖೆಗೆ ಆಗ್ರಹ 

CHITRADURGA NEWS | 14 AUGUST 2024

ಚಿತ್ರದುರ್ಗ: ನಗರದ ಹೊರವಲಯದ ತಮಟಕಲ್ಲು ರಸ್ತೆ, ಹೊಸ ಬೈಪಾಸ್‍ನಲ್ಲಿ ಅಪಘಾತಕ್ಕೀಡಾಗಿ ಚಿರತೆ(Leopard) ಸಾವನ್ನಪ್ಪಿದೆ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗಿದೆ, ಆದರೆ ಇದು ಅಕ್ರಮ ಗಣಿಗಾರಿಕೆ, ಕಲ್ಲು ಬ್ಲಾಸ್ಟಿಂಗ್‍ನಿಂದ ಮೃತಪಟ್ಟಿದೆ ಎಂಬ ಅನುಮಾನವಿದ್ದು, ಸೂಕ್ತ ತನಿಖೆ ನಡೆಸುವಂತೆ ಕರುನಾಡ ವಿಜಯಸೇನೆ ಅಗ್ರಹಿಸಿದರು.

ಕ್ಲಿಕ್ ಮಾಡಿ ಓದಿ: Rain Report: ಬೆಳಗಿನ ಜಾವದ ಮಳೆಗೆ ಬೆಚ್ಚಿದ ದುರ್ಗ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ ?

ನಗರದ ಅರಣ್ಯ ಇಲಾಖೆ ಎದುರು ಕರುನಾಡ ವಿಜಯಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ವಲಯ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

ಬೈಪಾಸ್ ರಸ್ತೆಯಲ್ಲಿ 2 ರಿಂದ 3 ಚಿರತೆ ಅಪಘಾತಗಳಿಂದ ಸಾವನ್ನಪಿವೆ. ಇಲ್ಲಿ ನಡೆಯುವ ಕಲ್ಲು ಬ್ಲಾಸ್ಟಿಂಗ್‍ಗೆ ಹೆದರಿ ಓಡುವ ಚಿರತೆಗಳು ಹೆದ್ದಾರಿಯಲ್ಲಿ ವಾಹನಗಳಿಗೆ ಸಿಲುಕಿ ಸಾವನ್ನಪ್ಪಬಹುದು.

ಈಗ ಸತ್ತಿರುವ ಚಿರತೆ ಅಪಘಾತದಿಂದಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸೂಕ್ತ ತನಿಖೆ ನಡೆಸಿ ವನ್ಯ ಜೀವಿಗಳ ಪ್ರಾಣ ಉಳಿಸಬೇಕು. ಅಕ್ರಮ ಗಣಿಗಾರಿಕೆ ವಿರುದ್ದ ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ನೋವಿನ ಸಂಗತಿ. ಕೂಡಲೆ ಗಣಿಗಾರಿಕೆ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಅಗ್ರಹಿಸಿದರು.

ಕ್ಲಿಕ್ ಮಾಡಿ ಓದಿ: Har Ghar Tiranga: ಹರ್‌ ಘರ್‌ ತಿರಂಗಾ ಅಭಿಯಾನ | ಗಮನ ಸೆಳೆದ ತಿರಂಗಾ ಯಾತ್ರೆ

ಬಂಡಿಪುರ, ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಯಾವುದೇ ವಾಹನಗಳು ಸಂಚರಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರೀತಿಯಲ್ಲಿ ಈ ಭಾಗದಲ್ಲೂ ಸಹ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿ ವಿದ್ಯುತ್ ದೀಪದ ವ್ಯವಸ್ಥೆ ಹಾಗೂ ಸುತ್ತಮುತ್ತಲು ಸಿ.ಸಿ.ಕ್ಯಾಮರಾ ಅಳವಡಿಸುವಂತೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.

ಪತ್ರಿಭಟನೆಯಲ್ಲಿ ಕ.ವಿ.ಸೇ. ಮಹಿಳಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ಜಗದೀಶ್, ರಾಜ್ಯ ಸಮಿತಿ ಸದಸ್ಯ ನಿಸಾರ್‍ಅಹಮದ್, ಉಪಾಧ್ಯಕ್ಷ ಮುಜಾಹಿದ್, ನಗರಾಧ್ಯಕ್ಷ ಅವಿನಾಶ್, ನಾಗರಾಜ್ ಮುತ್ತು, ನಾಗೇಶ್, ರಾಜಣ್ಣ, ಮಧುಸೂದನ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಖಿಲೇಶ್ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version