ಮುಖ್ಯ ಸುದ್ದಿ
ವೈದ್ಯರ ಸಮ್ಮೇಳನಕ್ಕೆ ಜಿಲ್ಲಾ ಆಸ್ಪತ್ರೆ ವೈದ್ಯರ ನೊಂದಣಿ
CHITRADURGA NEWS | 21 DECEMBER 2024
ಚಿತ್ರದುರ್ಗ: 2025 ಫೆಬ್ರವರಿ 22 ರಂದು ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ವೈದ್ಯಾಧಿಕಾರಿಗಳ ಸಮ್ಮೇಳನದ ಹಿನ್ನೆಲೆಯಲ್ಲಿ ಸಮ್ಮೇಳನ ಪ್ರತಿನಿಧಿಗಳು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ಇಲ್ಲಿನ ವೈದ್ಯರನ್ನು ಆಹ್ವಾನ ಮಾಡಿದರು.
ಇದನ್ನೂ ಓದಿ: 129.15 ಅಡಿ ತಲುಪಿದೆ ವಿವಿ ಸಾಗರ ಜಲಾಶಯ ಮಟ್ಟ
ಅನುಭಾವ-25 ಶರಣ ನಾಡಲ್ಲೊಂದು ವೈದ್ಯ ಸಂಗಮ ಎಂಬ ಶಿರ್ಷಿಕೆಯಡಿ ವಿಜಯಪುರದ ವೈದ್ಯರ ಸಂಘದಿಂದ ಈ ಸಮ್ಮೇಳನ ಆಯೋಜಿಸಲಾಗಿದೆ.
ಇಲ್ಲಿನ ನಗರದ ಸ್ಟೇಷನ್ ರೋಡ್‍ನ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗದ ವೈದ್ಯರ ನೊಂದಣಿ ಕಾರ್ಯ ಮಾಡಲಾಯಿತು.
ಇದನ್ನೂ ಓದಿ: ಟೈಯರ್ ಬ್ಲಾಸ್ಟ್ | ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್ | ಪ್ರಯಾಣಿಕರು ಬಚಾವ್
ಈ ವೇಳೆ ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್, ವೈದ್ಯರಾದ ಡಾ.ಪ್ರಕಾಶ್, ಡಾ.ದೇವರಾಜ್, ಡಾ.ವಿಜಯ್ ಕುಮಾರ್, ವಿಜಯಪುರದ ಡಾ.ಆಕಿಬ್, ಡಾ.ಸಂಗಮೇಶ್, ಡಾ.ಮಂಜುನಾಥ್ ಇದ್ದರು.