ಮುಖ್ಯ ಸುದ್ದಿ
SUSPENDED; ಜಿಲ್ಲಾ ಆಸ್ಪತ್ರೆ ವೈದ್ಯ ಡಾ. ಸಾಲಿ ಮಂಜಪ್ಪ ಅಮಾನತು
CHITRADURGA NEWS | 29 JULY 2024
ಚಿತ್ರದುರ್ಗ: ರೋಗಿಯೊಬ್ಬರ ಆಪರೇಷನ್‌ಗೆ ಹಣದ ಬೇಡಿಕೆ ಇಟ್ಟು, ಹಣ ಪಡೆಯುತ್ತಿರುವ ವೀಡಿಯೋ ವೈರಲ್ ಆಗಿರುವ ಪ್ರಕರಣದಲ್ಲಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಸಾಲಿ ಮಂಜಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಡಿ.ರಂದೀಪ್ ಈ ಆದೇಶ ಹೊರಡಿಸಿದ್ದು, ಕರ್ನಾಟಕ ಲೋಕಾಯುಕ್ತ ಕಾಯ್ದೆ ಅನ್ವಯ ಭ್ರಷ್ಟಾಚಾರದಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ ಡಾ.ಸಾಲಿ ಮಂಜಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಕ್ರಮ | ಎಫ್‌ಐಆರ್ ದಾಖಲಿಸಿ
ಅಮಾನತಿನ ಅವಧಿಯಲ್ಲಿ ಜೀವನಾಂಶ ಭತ್ಯಗೆ ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಜುಲೈ 5 ರಂದು ಚಂದ್ರಶೇಖರ್ ಎಂಬುವರು ಚಿಕಿತ್ಸೆಯ ಸಲುವಾಗಿ ಜಿಲ್ಲಾ ಆಸ್ಪತ್ರೆಗೆ ಬಂದಿದ್ದು, ಕರ್ತವ್ಯದಲ್ಲಿದ್ದ ವೈದ್ಯರಾದ ಡಾ.ಸಾಲಿ ಮಂಜಪ್ಪ, ಪರೀಕ್ಷಿಸಿದ ನಂತರ ಶಸ್ತçಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲು ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: ವಿವಿ ಸಾಗರ ತಲುಪಿದ ನೀರು | ಮದಗದ, ಅಯ್ಯಣ್ಣನ ಕೆರೆ ಕೋಡಿ | ವೇದಾವತಿ ನದಿಗೆ ಜೀವಕಳೆ
ಜು.6 ರಂದು ಶಸ್ತçಚಿಕಿತ್ಸೆಗೆ ರೋಗಿಯನ್ನು ಕರೆದುಕೊಂಡು ಹೋದಾಗ, ರೋಗಿಯ ಸಂಬAಧಿಕರ ಜೊತೆಗೆ ಸಂಭಾಷಣೆ ನಡೆಸಿ ಹಣ ಪಡೆದಿರುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು.
ಮೇಲ್ನೋಟಕ್ಕೆ ಕರ್ತವ್ಯಲೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಜಿಲ್ಲಾ ಶಸ್ತçಚಿಕಿತ್ಸಕರು ಜು.22ರಂದು ಕಾರಣ ಕೇಳಿ ನೋಟೀಸ್ ನೀಡಿದ್ದರು. ಡಾ.ಸಾಲಿ ಮಂಜಪ್ಪ ಅವರಿಂದ ವಿವರಣೆ ಪಡೆದು ಸಲ್ಲಿಸಿದ್ದರು.