ಮುಖ್ಯ ಸುದ್ದಿ
ಸೂರ್ಯಕಾಂತಿ ಬೆಳೆ ಇಳುವರಿ ಹೆಚ್ಚಿಸಬೇಕೆ.. ಇಲ್ಲಿದೆ ಸಲಹೆ
CHITRADURGA NEWS | 30 JULY 2024
ಚಿತ್ರದುರ್ಗ: ಸೂರ್ಯಕಾಂತಿ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಎಕೆರೆಗೆ 3 ರಿಂದ 4 ಜೇನುಪೆಟ್ಟಿಗೆಯನ್ನು ಇಡಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ ರೈತರಿಗೆ ಸಲಹೆ ನೀಡಿದರು.
ಕ್ಲಿಕ್ ಮಾಡಿ ಓದಿ: Vani Vilasa Sagar: ವಾಣಿ ವಿಲಾಸ ಸಾಗರಕ್ಕೆ ಭದ್ರಾ ನೀರು | ಶುರುವಾಯ್ತು ಕೌಂಟ್ಡೌನ್
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೋಮವಾರ ಹೈದಾರಬಾದ್ನ ಭಾರತೀಯ ಎಣ್ಣೇ ಕಾಳು ಬೆಳೆೆಗಳ ಸಂಶೋಧನಾ ಕೇಂದ್ರ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಖಿಲ ಭಾರತೀಯ ಸುಸಂಘಟಿತ ಸೂರ್ಯಕಾಂತಿ ವಿಭಾಗ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ“ ಸೂರ್ಯಕಾಂತಿ ಮತ್ತು ಹರಳು ಬೆಳೆಯ ಸುಧಾರಿತ ಬೇಸಾಯ ತಾಂತ್ರಿಕತೆಗಳ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶೇಂಗಾ ನಂತರ ಸೂರ್ಯಕಾಂತಿ ಬೆಳೆ 3500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಪ್ರಸಕ್ತ ಮೊಗ್ಗು, ಹೂ ಮತ್ತು ಕಾಳು ಕಟ್ಟುವ ಹಂತದಲ್ಲಿದೆ. ಕರ್ನಾಟಕವು ದೇಶದ ಶೇ. 48 ಭಾಗ ಸೂರ್ಯಕಾಂತಿ ಉತ್ಪಾದನೆ ಮಾಡುತ್ತಿದ್ದು, ಅಗ್ರ ಸ್ಥಾನದಲ್ಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸೂರ್ಯಕಾಂತಿ ಬೆಳೆಯ ವಿಸ್ತೀರ್ಣ ಕ್ಷೀಣಿಸುತ್ತಿದ್ದು ಹಾಗೂ ಸೂರ್ಯಕಾಂತಿ ಎಣ್ಣೆಯ ಹೆಚ್ಚಿನ ಬೇಡಿಕೆಯಿಂದ ಈ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಿಸವುದು ಅವಶ್ಯಕವಾಗಿದ್ದು, ಕೇಂದ್ರ ಸರ್ಕಾರ ಪ್ರಸಕ್ತ ಹಂಗಾಮಿಗೆ ಸೂರ್ಯಕಾಂತಿ ಬೆಳೆಯ ಕನಿಷ್ಟ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ಗೆ ರೂ. 7280/- ಅನ್ನು ನಿಗದಿಪಡಿಸಿದೆ ಎಂದು ಹೇಳಿದರು.
ಇದೇ ರೀತಿ ಜಿಲ್ಲೆಯಲ್ಲಿ ಹರಳು ಬೆಳೆ 650 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಬೆಳೆಯು ಬೆಳವಣಿಗೆ ಹಂತದಲ್ಲಿದ್ದು ಇದನ್ನು ಮಿಶ್ರಬೆಳೆಯಾಗಿ (5 ಸಾಲು ಶೇಂಗಾ ಬೆಳೆ ನಂತರ 1 ಸಾಲು ಹರಳು) ಅಥವಾ ಏಕಬೆಳೆಯಾಗಿ ಅಥವಾ ಬದುಗಳ ಮೇಲೆ ಬೆಳೆಯಬಹುದಾಗಿದೆ.
ಕ್ಲಿಕ್ ಮಾಡಿ ಓದಿ: Bear attack: ಹತ್ತು ವರ್ಷದ ಬಳಿಕ ವ್ಯಕ್ತಿ ಮೇಲೆ ಕರಡಿ ದಾಳಿ | ಕೆರೆಯಂಗಳದಲ್ಲಿ ಘಟನೆ
ಈ ನಿಟ್ಟಿನಲ್ಲಿ ಈ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರದ ರಾಷ್ಟ್ರೀಯ ಖಾದ್ಯ ತೈಲ ಎಣ್ಣೇ ಕಾಳು ಅಭಿಯಾನದಡಿ ಕೃಷಿ ಇಲಾಖೆಯಿಂದ ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆಯ ನೂತನ ಅಲ್ಪಾವಧಿ ತಳಿಯಾದ ಕೆಬಿಎಸ್,ಹೆಚ್. -78 ಮತ್ತು ಹರಳು ಬೆಳೆಯ ಸಂಕರಣ ತಳಿಗಳಾದ ಐಸಿಹೆಚ್-5, ಐಸಿಹೆಚ್-66ಗಳನ್ನು ಕ್ರಮವಾಗಿ 250 ಮತ್ತು 500 ಹೆಕ್ಟೇರ್ ಪ್ರದೇಶದಲ್ಲಿ ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಪ್ರಾತ್ಯಕ್ಷಿಗಳನ್ನು ಹಮ್ಮಿಕೊಂಡಿದ್ದು, ರೈತಭಾಂದವರು ಸದುಪಯೋಗ ಪಡೆದುಕೊಳ್ಳಬೇಕು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸೂರ್ಯಕಾಂತಿ ತಳಿ ಅಭಿವೃದ್ಧಿ ವಿಜ್ಞಾನಿ ಡಾ. ಎಸ್.ಡಿ ನೆಹರು ಅವರು ಸೂರ್ಯಕಾಂತಿ ಬೆಳೆಯಲ್ಲಿ ಬಿಡುಗಡೆಯಾದ ಅಧಿಕ ಇಳುವರಿ ನೀಡುವ ಅಲ್ಪಾವಧಿ ತಳಿಗಳಾದ ಕೆಬಿ.ಎಸ್,ಹೆಚ್-78 ಮತ್ತು ಕೆಬಿಎಸ್,ಹೆಚ್. -90 ತಳಿಗಳ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.
ಕೃಷಿ ವಿಶ್ವವಿದ್ಯಾಲಯ ಬೇಸಾಯಶಾಸ್ತ್ರಜ್ಞ ಡಾ. ಕೆ.ಎಸ್ ಸೋಮಶೇಖರ್ ಮಾತನಾಡಿ, ಬೆಂಗಳೂರಿನಿಂದ ಹೊಸದಾಗಿ ಬಿಡುಗಡೆಯಾದ ಕೆಬಿಎಸ್,ಹೆಚ್. -90 ತಳಿಯ ಪ್ರಾತ್ಯಕ್ಷಿಕೆಯನ್ನು ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಕೈಗೊಳ್ಳಲಾಗಿದೆ.
ಕ್ಲಿಕ್ ಮಾಡಿ ಓದಿ: Ration rice seized: ಪಡಿತರ ಅಕ್ಕಿ ಅಕ್ರಮ ಸಾಗಣೆ | ನಾಲ್ವರ ವಿರುದ್ಧ ದೂರು ದಾಖಲು
ಸೂರ್ಯಕಾಂತಿ ಬೆಳೆಯನ್ನು ನೀರು ಬಸಿದು ಹೋಗುವಂತಹ ಎಲ್ಲಾ ತರಹದ ಫಲವತ್ತಾದ ಮಣ್ಣಿನಲ್ಲಿ ವರ್ಷದ 3 ಹಂಗಾಮುಗಳಲ್ಲಿಯೂ ಬೆಳೆಯಬಹುದಾಗಿದ್ದು, ಈ ಮೇಲಿನ ತಳಿಗಳು ಅಲ್ಪಾವಧಿ ತಳಿಗಳಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಮಣ್ಣು ಪರೀಕ್ಷೆಆಧಾರಿತ ಶಿಫಾರಿತ ರಸಗೊಬ್ಬರ ಬಳಕೆ, ಹೂ ಅರಳುವ ಸಮಯದಲ್ಲಿ ಬೋರಾಕ್ಸ್ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪರಣೆಯಿAದ ಕಾಳು ಕಟ್ಟುವಿಕೆ ಹೆಚ್ಚಾಗುವ ಜೊತೆಗೆ, ಕಾಳಿನ ತೂಕ, ಎಣ್ಣೆಯ ಅಂಶ ಮತ್ತು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.
ಮೊಳಕೆಯೊಡೆದ 10-12 ದಿವಸದೊಳಗೆ ಪ್ರತಿಗುಣಿಯಲ್ಲಿ ಆರೋಗ್ಯವಂತ ಒಂದು ಗಿಡವನ್ನು ಬಿಟ್ಟು ಉಳಿದವುಗಳನ್ನು ತೆಗೆಯುವುದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಹಾಗೂ ಈ ಬೆಳೆಯಲ್ಲಿ ಎಲ್ಲಾ ಬೇಸಾಯ ಕ್ರಮಗಳನ್ನು ಬಿತ್ತನೆ ಮಾಡಿದ 30-35 ದಿನದೊಳಗೆ ಸಮಯಕ್ಕೆ ಸರಿಯಾಗಿ ಮಾಡಬೇಕು ಎಂದರು.
ಮೊಳಕೆಯೊಡೆಯುವ, ಮೊಗ್ಗಿನ, ಹೂವಿನ ಹಂತಗಳಲ್ಲಿ ಮತ್ತು ಕಾಳು ಕಟ್ಟುವ ಸಮಯದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಂಡರೆ ಉತ್ತಮ ಇಳುವರಿ ಪಡೆಯಬಹುದು.
ಕೆವಿಕೆ ಬಬ್ಬೂರು ಮುಖ್ಯಸ್ಥ ಡಾ. ಓ.ಕುಮಾರ್ ಅವರು ಶೇಂಗಾ ಬೆಳೆಯ ಬೇಸಾಯ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕ್ಲಿಕ್ ಮಾಡಿ ಓದಿ: Upper Bhadra Project : ಭದ್ರಾ ಮೇಲ್ದಂಡೆ ಬಗ್ಗೆ ಧ್ವನಿ ಎತ್ತಿದೆ ಎಚ್.ಡಿ.ದೇವೇಗೌಡ | ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಆಗ್ರಹ
ಸಸ್ಯರೋಗ ಶಾಸ್ತ್ರಜ್ಞರಾದ ಡಾ.ಸಿ.ಪಿ ಮಂಜುಳ ಅವರು ಬೀಜೋಪಚಾರದ ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತಾ, ಸೂರ್ಯಕಾಂತಿ ಬೆಳೆಯಲ್ಲಿ ನಂಜುರೋಗ ಹರಡುವ ಥ್ರಿಪ್ಸ್ ಬಾಧೆಯ ಹಾವಳಿ ತಡೆಯಲು ಇಮಿಡಾ ಕ್ಲೋಪ್ರಿಡ್ 70 ಡಬ್ಲೂ.ಎಸ್ @ 5ಗ್ರಾಂ ಪ್ರತಿ ಬೀಜಕ್ಕೆ ಬಿಜೋಪಚಾರ ಹಾಗೂ ಕೇದಿಗೆ ರೋಗ ನಿರ್ವಹಣೆಗೆ ಮೆಟಲಾಕ್ಸಿಲ್ 35 ಎಸ್ ಡಿ @ 6ಗ್ರಾಂ ಪ್ರತಿ ಬೀಜಕ್ಕೆ ಬಿಜೋಪಚಾರ ಅತೀ ಅವಶ್ಯಕತೆ ಎಂದರು.
ಬಿತ್ತನೆಯಾಗಿ 15-20 ದಿನ ಹಾಗೂ 1 ತಿಂಗಳ ಅಂತರದಲ್ಲಿ ಇಮೀಡಾಕ್ಲೋಪ್ರಿಡ್ 17.8% ಎಸ್ಎಲ್ @ 0.5 ಮಿಲೀ/ಲೀ ಪ್ರಮಾಣದಲ್ಲಿ ಸಿಂಪರಣೆಯಿAದ ನಂಜಾಣುರೋಗ ಹರಡುವರಸಹೀರುವ ಕೀಟಗಳನ್ನು ನಿರ್ವಹಣೆ ಮಾಡಬಹುದು. ಹರಳು ಬೆಳೆಯು ಹೂ-ಕಾಯಿ ಹಂತದಲ್ಲಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆ ಇದ್ದಾಗ ಗೊಂಚಲು ಕರಗುವ ಶೀಲೀಂದ್ರ ರೋಗ (ಬಾಟ್ರೈಟಿಸ್) ನಿರ್ವಹಣೆಗೆ ಕಾರ್ಬನ್ ಡೈಜಿಮ್ @ 1 ಗ್ರಾಂ/ಲೀ ನೀರಿಗೆ ಹಾಕಿ ಸಿಂಪಡಿಸುವುದು ಎಂದು ಹೇಳಿದರು.
ಡಾ. ರುದ್ರಮುನಿ ಮಾತನಾಡಿ, ಹರಳಿನಲ್ಲಿ ಎಲೆಯ ಕೆಳೆಗೆ ಗುಂಪಾಗಿರುವ ತಂಬಾಕಿನ ಹುಳುವಿನ ತತ್ತಿ/ಮರಿಹುಳು ಮತ್ತು ಸೂರ್ಯಕಾಂತಿಯಲ್ಲಿ ಕಂಬಳಿ ಹುಳುಗಳ ತತ್ತಿ/ಮರಿಹುಳಗಳಿರುವ ಎಲೆಗಳನ್ನು ಕಿತ್ತು ನಾಶಪಡಿಸಬೇಕು. ಹರಳು ಬೆಳೆಯಲ್ಲಿ ಕೊಂಡಲಿ ಹುಳುವಿನ ನಿರ್ವಹಣೆಗೆ ಅಸಿಫೇಟ್ 75 ಎಸ್ ಪಿ @ 1.5 ಗ್ರಾಂ/ಲೀ, ಕಾಯಿ/ಗೊಂಚಲು ಕೊರೆಯುವ ಹುಳಕ್ಕೆ ಪ್ರೋಫೆನೋಫಾಸ್ 50 ಇಸಿ @ 2 ಮಿಲೀ/ಲೀ ನೀರಿಗೆ ಹಾಗಿ ಸಿಂಪಡಿಸಬೇಕು ಎಂದರು.
ಕ್ಲಿಕ್ ಮಾಡಿ ಓದಿ: Vanivilasa sagara; ಮೈದುಂಬಿದ ವೇದಾವತಿ | ವಿವಿ ಸಾಗರಕ್ಕೆ ಬರೋಬ್ಬರಿ 4737 ಕ್ಯೂಸೆಕ್ ನೀರು
ತರಬೇತಿ ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎನ್. ಪಿ ಶಿವಶಂಕರ್ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದ ಆಸಕ್ತ 60 ಜನ ರೈತವಬಾಂದವರು ಹಾಜರಿದ್ದರು.