ಮುಖ್ಯ ಸುದ್ದಿ
ಅಸ್ಥಿಪಂಜರ ಸಿಕ್ಕ ಮನೆಯಲ್ಲಿ ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳೆಷ್ಟು ಗೊತ್ತಾ
CHITRADURGA NEWS | 16 MAY 2024
ಚಿತ್ರದುರ್ಗ: ಒಂದೇ ಮನೆಯಲ್ಲಿ ಐದು ಜನ ಮೃತಪಟ್ಟರು ಐದು ವರ್ಷವಾದರೂ ಬೆಳಕಿಗೆ ಬಾರದೆ, ಅಸ್ಥಿಪಂಜರವಾಗಿ ಪತ್ತೆಯಾದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಈ ಪ್ರಕರಣದ ತನಿಖೆ ಪೊಲೀಸರಿಗೆ ನಿಜಕ್ಕೂ ತಲೆನೋವಾಗಿತ್ತು. ಅಸ್ಥಿಪಂಜರಗಳು ಪತ್ತೆಯಾದ ಮನೆ ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ ಅವರಿಗೆ ಸೇರಿದ್ದರು, ಈ ಅಸ್ಥಿಪಂಜರಗಳು ಅವರದ್ದೇ ಎನ್ನುವ ಅನುಮಾನ ವ್ಯಕ್ತವಾಗಿತ್ತು.
ಇದನ್ನೂ ಓದಿ: ಐದು ಜನರ ಅಸ್ಥಿಪಂಜರ ಪ್ರಕರಣ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಹೇಳಿದ್ದೇನು
ನಿವೃತ್ತ ಇಂಜಿನಿಯರ್ ಜಗನ್ನಾಥ್ ರೆಡ್ಡಿ, ಪತ್ನಿ ಪ್ರೇಮಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ ಆರೋಗ್ಯ ಸ್ಥಿತಿ, ಸಂಬಂಧಿಕರಿಂದ ದೂರವಿರುವುದು, ಮನೆಯ ಅಕ್ಕಪಕ್ಕದವರ ಒಡನಾಟ ಇತ್ಯಾದಿಗಳನ್ನು ಗಮನಿಸಿ ಇದು ಅದೇ ಕುಟುಂಬ ಎಂಬ ತೀರ್ಮಾನಕ್ಕೆ ಬರಲಾಗಿತ್ತು.
ಪೊಲೀಸ್, ಪೋಸ್ಟ್ ಮಾರ್ಟಮ್, ಎಫ್‍ಎಸ್‍ಎಲ್ ವರದಿಗಳು ನಿಖರ ದಾಖಲೆಗಾಗಿ ಹುಡುಕಾಟ ನಡೆಸಿದ್ದವು.
2023 ಡಿಸೆಂಬರ್ 28 ರಾತ್ರಿ 10 ಗಂಟೆ ವೇಳೆಗೆ ಜೈಲು ರಸ್ತೆಯ ಒಂದೇ ಮನೆಯಲ್ಲಿ ಐವರ ಅಸ್ಥಿಪಂಜರ ಇರುವ ಸುದ್ದಿ ಸ್ಪೋಟವಾಗಿತ್ತು. ಆನಂತರ ಪೊಲೀಸರು ಮನೆಯ ಸುತ್ತಲೂ ಬಂದೋಬಸ್ತ್ ಮಾಡಿಕೊಂಡು ಸೀನ್ ಆಫ್ ಕ್ರೈಮ್ ದಾಖಲಿಸಲು ಹರಸಾಹಸ ಮಾಡಿದ್ದರು.
ಇದನ್ನೂ ಓದಿ: BREAKING NEWS ಒಂದೇ ಮನೆಯಲ್ಲಿ ಐದು ಜನರ ಅಸ್ತಿಪಂಜರ | ಸಾವಿಗೆ ಇದೇ ಕಾರಣ ನೋಡಿ
ಇಡೀ ಮನೆ ಅಸ್ತವ್ಯಸ್ತವಾಗಿತ್ತು. ಸರಿಯಾದ ಸಾಕ್ಷ್ಯಗಳೇ ಸಿಗುವುದು ಕಷ್ಟವಾಗಿತ್ತು. ಐದು ಜನ ಸುತ್ತ ಐದು ವರ್ಷಗಳೇ ಕಳೆದಿದ್ದವು.
ಡಿಸೆಂಬರ್ 28 ರಾತ್ರಿಯಿಂದ ಸುಮಾರು 15 ದಿನಗಳ ಕಾಲ, ಆನಂತರವೂ ಆಗಾಗ ಪೊಲೀಸರು, ಎಫ್‍ಎಸ್‍ಎಲ್ ತಜ್ಞರು ಈ ಮನೆಗೆ ಬಂದು ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹ ಮಾಡುತ್ತಲೇ ಇದ್ದರು.
ಇದನ್ನೂ ಓದಿ: BEAKING NEWS ಪಾಳುಬಿದ್ದ ಮನೆಯಲ್ಲಿ ಅಸ್ತಿಪಂಜರ ಮಾದರಿಯಲ್ಲಿ ಶವ ಪತ್ತೆ | ಬೆಚ್ಚಿ ಬಿದ್ದ ಸಾರ್ವಜನಿಕರು
ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಘಟನೆಯ ಪೂರ್ಣ ವಿವರ ಬಿಚ್ಚಿಟ್ಟಿದ್ದು, ತನಿಖೆ ವೇಳೆ ಬರೋಬ್ಬರಿ 71 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು ಎಂದು ವಿವರಿಸಿದ್ದಾರೆ.
ಮೃತರ ಅಸ್ಥಿಪಂಜರಗಳಲ್ಲಿ ನಿದ್ರೆ ಮಾತ್ರೆಯ ಅಂಶ ಪತ್ತೆಯಾದರೆ, ಮನೆಯ ಅಡುಗೆ ಮನೆಯಲ್ಲಿದ್ದ ಎರಡು ಪಾತ್ರೆಗಳಲ್ಲಿ ಸೈನೈಡ್ ಅಂಶ ಪತ್ತೆಯಾಗಿದೆ. ಈ ಕುರಿತ ತನಿಖೆ ಇನ್ನೂ ಮುಂದುವರೆದಿದೆ.