ಲೋಕಸಮರ 2024
ಮತಗಟ್ಟೆ ಕೇಂದ್ರದಲ್ಲಿ ಈ ತಪ್ಪು ಮಾಡಬೇಡಿ | ಅನುಚಿತ ವರ್ತನೆಗೆ ಬ್ರೇಕ್
CHITRADURGA NEWS | 24 APRIL 2024
ಚಿತ್ರದುರ್ಗ: ಚುನಾವಣೆ ಮತದಾನದ ದಿನ ಮತಗಟ್ಟೆ ಕೇಂದ್ರಕ್ಕೆ ಮತದಾನ ಮಾಡಲು ತೆರಳುವ ಮತದಾರರು ಈ ತಪ್ಪು ಮಾಡಿ, ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಬೇಡಿ.
ಪ್ರತಿಯೊಬ್ಬ ಮತದಾರನು ಭಾರತದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಥವಾ ವೋಟರ್ ಹೆಲ್ಪ್ ಲೈನ್‌ನಲ್ಲಿ ಲಭ್ಯವಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು, ಮತಗಟ್ಟೆಯ ಸಂಖ್ಯೆ ಇರುವುದನ್ನು ಮೊದಲು ಖಚಿತ ಪಡಿಸಿಕೊಳ್ಳಬೇಕು.
ಕ್ಲಿಕ್ ಮಾಡಿ ಓದಿ: ವೋಟರ್ ಕಾರ್ಡ್ ಇಲ್ಲ ಅಂದ್ರು ವೋಟ್ ಮಾಡಿ | ಈ ದಾಖಲೆ ಇರಲಿ
ಮತದಾರನು ಭಾವಚಿತ್ರವಿರುವ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗವು ಸೂಚಿಸಿರುವ ಇತರೆ 12 ದಾಖಲೆಗಳಲ್ಲಿ ಯಾವುದಾದರೊಂದು ಗುರುತಿನ ಚೀಟಿಯನ್ನು ಸಿದ್ದವಾಗಿಟ್ಟುಕೊಂಡಿರಬೇಕು. ಮತದಾನ ಮಾಡಲು ಬಂದಾಗ ಅನುಚಿತವಾಗಿ ವರ್ತಿಸದೇ ಸರದಿ ಸಾಲಿನಲ್ಲಿ ನಿಂತು ಸೌಮ್ಯಯುತವಾಗಿ ಮತದಾನ ಮಾಡಬೇಕು.
ಮತಗಟ್ಟೆ ಕೇಂದ್ರಗಳಿಗೆ ಯಾವೊಬ್ಬ ಮತದಾರನು ಕೂಡ ಮೊಬೈಲ್, ಡಿಜಿಟಲ್ ಪೆನ್ ಕ್ಯಾಮೆರಾ, ಆಯುಧ, ಶಸ್ತ್ರಾಸ್ತ್ರ, ನೀರಿನ ಬಾಟಲ್ ಅಥವಾ ಯಾವುದೇ ರೀತಿಯ ದ್ರಾವಣ, ಆಹಾರ ಸಾಮಾಗ್ರಿ, ಸ್ಫೋಟಕ ಮತ್ತಿತರ ವಸ್ತುಗಳನ್ನು ಮತಗಟ್ಟೆ ಕೇಂದ್ರಕ್ಕೆ ತರುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿದೆ.
ಕ್ಲಿಕ್ ಮಾಡಿ ಓದಿ: ಘಟಾನುಘಟಿಗಳ ನಡುವೆ ಜಿದ್ದಾಜಿದ್ದಿಗೆ ಸಾಕ್ಷಿ ಕೋಟೆನಾಡು | ಚಿತ್ರದುರ್ಗ ಲೋಕಸಭೆಯ ಸಮಗ್ರ ಮಾಹಿತಿ
ಮತದಾರನು ಗುರುತಿನ ಚೀಟಿ ಪಡೆದು ಅಧಿಕಾರಿಯ ಬಳಿ ಬೆರಳಿಗೆ ಹಾಕಿದ ಶಾಹಿಯನ್ನು ಪರಿಶೀಲಿಸಿಕೊಂಡು ಮತಯಂತ್ರದ ಬಳಿ ತೆರಳಿ ನಿಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರು, ಚಿಹ್ನೆ ಪರಿಶೀಲಿಸಿಕೊಂಡು, ನಿಮ್ಮ ಆಯ್ಕೆಯ ಅಭ್ಯರ್ಥಿಯ ಕ್ರಮಸಂಖ್ಯೆ ಬಟನ್ ಒತ್ತುವ ಮೂಲಕ ಮತ ಚಲಾಯಿಸಬಹುದು. ಒಂದು ವೇಳೆ ಅಭ್ಯರ್ಥಿಗಳು ಯಾರು ಇಷ್ಟವಾಗದಿದ್ದಲ್ಲಿ ನೋಟಾ ಬಟನ್ ಬಳಸಿ ಮತಚಲಾಯಿಸಬಹುದು.
ಕ್ಲಿಕ್ ಮಾಡಿ ಓದಿ: ಮತಗಟ್ಟೆ ಸಿಬ್ಬಂದಿಗೆ ವಾಹನ | ಮಿಸ್ ಆದ್ರೆ ಕಾಲ್ ಮಾಡಿ
ಮತ ಚಲಾಯಿಸಿದ ನಂತರ ಬೀಪ್ ಸೌಂಡ್ ಕೇಳಿ ಬರುವುದನ್ನು ಖಚಿತ ಪಡಿಸಿಕೊಂಡ ನಂತರ ಮತ ಖಾತ್ರಿ ಯಂತ್ರದಲ್ಲಿ ಮತ ಚಲಾಯಿಸಿದ ಅಭ್ಯರ್ಥಿಯ ಕ್ರಮಸಂಖ್ಯೆ, ಚಿಹ್ನೆ, ಗುರುತನ್ನು ಪರಿಶೀಲಿಸುವ ಮೂಲಕ ಮತದಾನ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.