ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ | ಕುರಿ, ಕೋಳಿ ಮತ್ತು ಹಸು ಸಾಕಾಣಿಕೆ ತರಬೇತಿಗೆ ನೇರ ಅಹ್ವಾನ

ಕುರಿ, ಕೋಳಿ ಮತ್ತು ಹಸು

CHITRADURGA NEWS | 17 JUNE 2025

ಚಿತ್ರದುರ್ಗ: ಚಿತ್ರದುರ್ಗ ರುಡ್‍ಸೆಟ್ ಸಂಸ್ಥೆಯಲ್ಲಿ ನಿರುದ್ಯೋಗಿ ಗ್ರಾಮೀಣ ಭಾಗದ ಯುವಕ-ಯುವತಿಯರಿಗಾಗಿ ಸ್ವ ಉದ್ಯೋಗ ಮಾಡಲು ಕುರಿ, ಕೋಳಿ ಮತ್ತು ಹಸು ಸಾಕಾಣಿಕೆ ತರಬೇತಿಯನ್ನು ಇದೇ ಜೂನ್ 20 ರಿಂದ ಪ್ರಾರಂಭಿಸಲಾಗುವುದು. ಆಸಕ್ತರು ನೇರವಾಗಿ ತರಬೇತಿಗೆ ಹಾಜರಾಗಲು ತಿಳಿಸಲಾಗಿದೆ.

Also Read: ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನ

ಕುರಿ, ಕೋಳಿ ಮತ್ತು ಹಸು ಸಾಕಾಣಿಕೆ ಕುರಿತು ಇದೇ ಜೂನ್ 20 ರಿಂದ ತರಬೇತಿ ಪ್ರಾರಂಭವಾಗಲಿದ್ದು, 13 ದಿನಗಳ ಕಾಲ ತರಬೇತಿ ನೀಡಲಾಗುವುದು. ಅಭ್ಯರ್ಥಿಗಳು 19 ರಿಂದ 45 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು. ಕನ್ನಡ ಓದಲು ಬರೆಯಲು ಬಲ್ಲವರಾಗಿರಬೇಕು.

ತರಬೇತಿಗೆ ಸಂಬಂಧಿಸಿದಂತೆ ಪ್ರಾಥಮಿಕ ಜ್ಞಾನ ಹೊಂದಿರಬೇಕು. ಉದ್ಯೋಗವನ್ನು ಮಾಡಬೇಕು ಎಂಬ ಆಸಕ್ತಿ ಹೊಂದಿರಬೇಕು. ಈ ತರಬೇತಿಗೆ ಸಂಬಂಧಪಟ್ಟ ಕೌಶಲ್ಯ ತರಬೇತಿ ಪ್ರಾಥಮಿಕ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ತರಬೇತಿಯು ಊಟ ಮತ್ತು ವಸತಿ ಸಹಿತವಾಗಿ ಸಂಪೂರ್ಣ ಉಚಿತವಾಗಿರುತ್ತದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಮೊಬೈಲ್ ನಂಬರ್‍ವುಳ್ಳ ಸ್ವವಿಳಾಸದ ಅರ್ಜಿಯೊಂದಿಗೆ 4 ಪಾಸ್‍ಪೋರ್ಟ್ ಸೈಜ್‍ಫೋಟೋಗಳು, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಜೆರಾಕ್ಸ್ ಎರಡು ಪ್ರತಿಗಳೊಂದಿಗೆ ರುಡ್‍ಸೆಟ್ ಸಂಸ್ಥೆಗೆ ನೇರವಾಗಿ ಬಂದು ತರಬೇತಿಗೆ ಹಾಜರಾಗಲು ತಿಳಿಸಲಾಗಿದೆ.

Also Read: ಜೇನು ಕೃಷಿಯನ್ನು ಸಮಗ್ರ ಕೃಷಿಯನ್ನಾಗಿ ಅಳವಡಿಸಿಕೊಳ್ಳಿ | ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ

ಹೆಚ್ಚಿನ ಮಾಹಿತಿಗಾಗಿ 8618282445, 9481778047, 9019299901, 8660627785 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version