ಮುಖ್ಯ ಸುದ್ದಿ
ಶಾಸಕ ಎಂ.ಚಂದ್ರಪ್ಪ ಮನೆಯಲ್ಲಿ ಪೌರಕಾರ್ಮಿಕರ ಜೊತೆ ಸಹಪಂಕ್ತಿ ಭೋಜನ
CHITRADURGA NEWS | 14 JANUARY 2025
ಚಿತ್ರದುರ್ಗ: ನಗರದ ಸ್ಟೇಡಿಯಂ ರಸ್ತೆ ಪಕ್ಕದ ಪ್ರಶಾಂತ ನಗರದಲ್ಲಿರುವ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರ ಮನೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಸಹಪಂಕ್ತಿ ಭೋಜನ ನಡೆಯಿತು.
ಭೋಜನದಲ್ಲಿ ಪೌರ ಕಾರ್ಮಿಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಸರ್ವ ಸಮುದಾಯಗಳ ಜನ ಭಾಗವಹಿಸಿದ್ದರು. ಇದೇ ವೇಳೆ ಶಾಸಕ ಎಂ.ಚಂದ್ರಪ್ಪ ಮನೆಯಲ್ಲಿ ಪೌರ ಕಾರ್ಮಿಕರಿಗೆ ಹುಡಿ ತುಂಬಿ ಸತ್ಕರಿಸಿದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ ಸಿರಿಗೆರೆ ಶ್ರೀ ಅಂಗಳಕ್ಕೆ | ದಶಕಗಳಿಂದ ಕುಂಟುತ್ತಾ ಸಾಗಿರುವ ಯೋಜನೆಗೆ ಹೊಸ ಬೆಳಕು
ಈ ವೇಳೆ ಮಾತನಾಡಿದ ಡಾ.ಎಂ.ಚಂದ್ರಪ್ಪ, ಕೇಂದ್ರ ಸರ್ಕಾರದ ನಿರ್ದೇಶನದಂತೆ ಸರ್ವ ಸಮಾಜದವರ ಜೊತೆ ಸಹಪಂಕ್ತಿ ಭೋಜನ ಮಾಡಿದ್ದೇವೆ. ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ μÁ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು ಶೋಷಿತರ ಪರವಾಗಿದ್ದಾರೆ ಎಂದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಎಲ್ಲಾ ಜಾತಿ ಧರ್ಮದವರನ್ನು ಸಮಾನವಾಗಿ ಕಾಣಲಾಗುತ್ತಿದೆ. ಪ್ರತಿನಿತ್ಯವು ಚಳಿ, ಗಾಳಿ, ಮಳೆಯನ್ನು ಲೆಕ್ಕಿಸದೆ ನಗರ ಸ್ವಚ್ಚತೆಯಲ್ಲಿ ತೊಡಗುವ ಪೌರ ಕಾರ್ಮಿಕರನ್ನು ಸಂತೋಷದಿಂದ ಸತ್ಕರಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಮನೆ ಕಳ್ಳತನ, ಬೈಕ್ ಕಳ್ಳರ ಬಂಧಿಸಿದ ಭರಮಸಾಗರ ಪೊಲೀಸರು
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್, ಸಂಪತ್‍ಕುಮಾರ್, ಯುವ ಮುಖಂಡ ಎಂ.ಸಿ.ರಘುಚಂದನ್, ವಕ್ತಾರ ನಾಗರಾಜ್ ಬೇದ್ರೆ, ಅಶೋಕ್, ವಸಂತ, ಸಂಜಯ್, ಮೋಹನ್, ಪಂಚಾಕ್ಷರಿ, ಬೆನ್ನೂರು ರಾಜಣ್ಣ, ಹೊಳಲ್ಕೆರೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಸಹ ಪಂಕ್ತಿ ಭೋಜನದಲ್ಲಿ ಭಾಗವಹಿಸಿದ್ದರು.