Connect with us

    ವರ್ಷದ ಭವಿಷ್ಯ | ಧನಸ್ಸು ರಾಶಿ – 2025 

    DHANASU

    Dina Bhavishya

    ವರ್ಷದ ಭವಿಷ್ಯ | ಧನಸ್ಸು ರಾಶಿ – 2025 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 01 JANUARY 2025

    ಧನಸ್ಸು ರಾಶಿ: ನಿರುದ್ಯೋಗಿಗಳು ತಮ್ಮ ಉದ್ಯೋಗ ಪ್ರಯತ್ನದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ನೌಕರರಿಗೆ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗಿರುತ್ತದೆ. ಆರೋಗ್ಯ ವಿಷಯಗಳಲ್ಲಿ ಜಾಗರೂಕರಾಗಿರಿ. ವಿದ್ಯಾರ್ಥಿಗಳಿಗೆ ಈ ವರ್ಷ ಮಿಶ್ರ ಫಲಿತಾಂಶವಿದೆ. ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕು. ಮಹಿಳೆಯರಿಗೆ ಕುಟುಂಬದಲ್ಲಿ ವಿವಾದಗಳು ಮತ್ತು ಜಗಳದ ವಾತಾವರಣವಿರುತ್ತದೆ. ವ್ಯಾಪಾರಸ್ಥರು ವ್ಯವಹಾರದಲ್ಲಿ ಮಿಶ್ರ ಫಲಿತಾಂಶಗಳನ್ನು ಹೊಂದಿರುತ್ತಾರೆ ಮತ್ತು ಕುಟುಂಬ ತೊಂದರೆಗಳನ್ನು ಹೊಂದಿರುತ್ತೀರಿ. ಕುಟುಂಬ ಸದಸ್ಯರೊಂದಿಗೆ ಜಾಗರೂಕರಾಗಿರಿ. ಇತರರೊಂದಿಗೆ ಮಾತನಾಡುವಾಗ ಎಚ್ಚರದಿಂದಿರುವುದು ಉತ್ತಮ. ಎಲ್ಲ ವರ್ಗಗಳಿಗೂ ಒತ್ತಡ ಹೆಚ್ಚಾಗುತ್ತದೆ. ಕೃಷಿ ಕ್ಷೇತ್ರದಲ್ಲಿರುವವರಿಗೆ ಉತ್ತಮ ಫಲಿತಾಂಶ ಇರುತ್ತದೆ.

    ಜನವರಿ 

    ಈ ತಿಂಗಳು ಅನುಕೂಲಕರವಾಗಿರುತ್ತದೆ. ಕೈಗೊಂಡ ಕೆಲಸಗಳು ಕೂಡಿ ಬರುತ್ತವೆ. ಬಂಧುಮಿತ್ರರೊಂದಿಗೆ ವಿವಾಹ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹೊಸ ವಾಹನ ಯೋಗವಿದೆ. ಇತರರೊಂದಿಗೆ ಮಾತನಾಡುವಾಗ ಸೌಜನ್ಯದಿಂದ ವರ್ತಿಸುವುದು ಉತ್ತಮ.

    ಫೆಬ್ರವರಿ 

    ಈ ತಿಂಗಳು ಅನುಕೂಲಕರವಾಗಿರುವುದಿಲ್ಲ. ಗೌರವ ,ಪ್ರತಿಷ್ಟೆ ವಿಷಯದಲ್ಲಿ ಕೊರತೆ ಇರುತ್ತದೆ. ಜ್ವರದಂತಹ ಅನಾರೋಗ್ಯ ಸಮಸ್ಯೆಗಳಿರುತ್ತವೆ. ಕೆಲವು ವ್ಯವಹಾರಗಳು ಮಾನಸಿಕ ಆತಂಕವನ್ನು ಉಂಟುಮಾಡುತ್ತವೆ. ವ್ಯರ್ಥ ಖರ್ಚುಗಳ ಬಗ್ಗೆ ಮರುಪರಿಶೀಲನೆ ಮಾಡುವುದು ಉತ್ತಮ.

    ಮಾರ್ಚ್

    ಈ ತಿಂಗಳು ಅನುಕೂಲಕರವಾಗಿರುವುದಿಲ್ಲ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಮನೆಯಲ್ಲಿ ಹಠಾತ್ ಬದಲಾವಣೆಗಳು ಉಂಟಾಗುತ್ತವೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ. ಒಂದು ವ್ಯವಹಾರದಲ್ಲಿ ಕುಟುಂಬ ಸದಸ್ಯರೊಂದಿಗೆ ಅನಿರೀಕ್ಷಿತ ವಿವಾದದ ಸೂಚನೆಗಳಿವೆ.

    ಏಪ್ರಿಲ್

    ಈ ತಿಂಗಳು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಮಕ್ಕಳ ವಿದ್ಯಾ ವಿಷಯಗಳು ನಿರಾಶಾದಾಯಕವಾಗಿರುತ್ತವೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬಾಲ್ಯದ ಗೆಳೆಯರೊಂದಿಗೆ ದೂರ ಪ್ರಯಾಣದ ಸೂಚನೆಗಳಿವೆ. ವಿವಾದಗಳಿಂದ ದೂರವಿರುವುದು ಉತ್ತಮ.

    ಮೇ

    ಈ ತಿಂಗಳು ಅನುಕೂಲಕರವಾಗಿರುತ್ತದೆ. ಹೊಸ ವಾಹನ ಖರೀದಿಸುತ್ತೀರಿ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಅಧಿಕಾರಿಗಳ ನೆರವಿನಿಂದ ಬಡ್ತಿ ಹೆಚ್ಚಾಗುತ್ತದೆ. ದೈವರಾಧನೆ ಮಾಡುವುದು ಒಳ್ಳೆಯದು. ದೂರದ ಪ್ರಯಾಣದ ಸೂಚನೆಗಳಿವೆ.

    ಜೂನ್

    ಈ ತಿಂಗಳು ಅನುಕೂಲಕರವಾಗಿರುವುದಿಲ್ಲ. ಪ್ರಮುಖ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತವೆ. ಮಾನಸಿಕ ಚಿಂತೆಗಳು ಸ್ವಲ್ಪಮಟ್ಟಿಗೆ ನೋವುಂಟುಮಾಡುತ್ತವೆ. ಕುಟುಂಬ ಸದಸ್ಯರೊಂದಿಗೆ ಭಿನ್ನಭಿಪ್ರಾಯಗಳಿರುತ್ತವೆ ಪ್ರಯಾಣ ಮಾಡುವಾಗ ಜಾಗರೂಕರಾಗಿರಬೇಕು. ಶುಭ ಕಾರ್ಯ ಸಂಬಂಧಿತ ಖರ್ಚುಗಳು ಹೆಚ್ಚಾಗುತ್ತವೆ.

    ಜುಲೈ 

    ಈ ತಿಂಗಳು ಅನುಕೂಲಕರವಾಗಿರುತ್ತದೆ. ಭೂ ಖರೀದಿಯ ಪ್ರಯತ್ನಗಳನ್ನು ವೇಗಗೊಳಿಸುತ್ತೀರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತವೆ. ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ.

    ಆಗಸ್ಟ್ 

    ಈ ತಿಂಗಳು ಅನುಕೂಲಕರವಾಗಿರುವುದಿಲ್ಲ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳ ಬಗ್ಗೆ ಜಾಗರೂಕರಾಗಿರಿ. ಶತ್ರು ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಿರಿಕಿರಿ ಉಂಟುಮಾಡುತ್ತವೆ. ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತವೆ.

    ಸೆಪ್ಟೆಂಬರ್

    ಈ ತಿಂಗಳು ಮಿಶ್ರ ಫಲಿತಾಂಶಗಳಿರುತ್ತವೆ. ವ್ಯರ್ಥ ಪ್ರಯಾಣವನ್ನು ಮಾಡಬೇಕಾಗುತ್ತದೆ. ಕುಟುಂಬದ ಸದಸ್ಯರೊಂದಿಗೆ ವಿನಾಕಾರಣ ವಿವಾದಗಳಿರುತ್ತವೆ. ಜ್ವರ , ಅನಾರೋಗ್ಯ ಸಮಸ್ಯೆಗಳಿರುತ್ತವೆ. ತಿಂಗಳ ಕೊನೆಯಲ್ಲಿ ಧನ ಆಧಾಯ ಹೆಚ್ಚಾಗುತ್ತದೆ. ಶುಭ ಕಾರ್ಯಗಳನ್ನು ನಿರ್ವಹಿಸುತ್ತೀರಿ.

    ಅಕ್ಟೋಬರ್

    ಈ ತಿಂಗಳು ಅನುಕೂಲಕರವಾಗಿರುತ್ತದೆ. ಉತ್ಸಾಹದಿಂದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಮಾನಸಿಕ ನೆಮ್ಮದಿ ಸಿಗುತ್ತದೆ. ಖರ್ಚಿನ ವಿಚಾರದಲ್ಲಿ ಆತುರ ಒಳ್ಳೆಯದಲ್ಲ. ಕೆಲವು ಹೊಸ ಪರಿಚಯಗಳು ಕೂಡಿ ಬರುತ್ತವೆ. ಕುಟುಂಬದ ಹಿರಿಯರೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸಲಾಗುತ್ತದೆ.

    ನವೆಂಬರ್

    ಈ ತಿಂಗಳು ಮಿಶ್ರ ಫಲಿತಾಂಶಗಳಿರುತ್ತವೆ. ದೇವಸ್ಥಾನಕ್ಕೆ ಭೇಟಿ ನೀಡುತ್ತೀರಿ. ಆದಾಯ ಅಭಿವೃದ್ಧಿ ಉಂಟಾಗುತ್ತದೆ. ಶತ್ರುಗಳು ಸಹ ಸ್ನೇಹಿತರಾಗಿ ಪರಸ್ಪರ ಸಹಾಯ ಮಾಡುತ್ತಾರೆ. ವಿವಾದಗಳಿಂದ ದೂರವಿರುವುದು ಉತ್ತಮ. ವೃತ್ತಿಪರ ಉದ್ಯೋಗಗಳು ಒತ್ತಡದಿಂದ ಕೂಡಿರುತ್ತವೆ.

    ಡಿಸೆಂಬರ್ 

    ಈ ತಿಂಗಳು ಅನುಕೂಲಕರವಾಗಿರುವುದಿಲ್ಲ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಸಣ್ಣಪುಟ್ಟ ವಿಷಯಗಳಿಗೆ ಆತುರದಿಂದ ವಿವಾದಗಳಿರುತ್ತವೆ. ಗೌರವದ ವಿಷಯದಲ್ಲಿ ಸ್ವಲ್ಪ ಮಟ್ಟಿನ ಕ್ಷೀಣತೆ ಇರುತ್ತದೆ. ಮಕ್ಕಳ ಶೈಕ್ಷಣಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು.

    ಶನೇಶ್ವರನಿಗೆ ಎಣ್ಣೆ ಅಭಿಷೇಕ ಮಾಡುವುದು ಒಳ್ಳೆಯದು. ಶನಿ ಸ್ತೋತ್ರವನ್ನು ನಿಯಮಿತವಾಗಿ ಪಠಿಸಬೇಕು. 1 ¼ ಕೆಜಿ ಕಪ್ಪು ಎಳ್ಳನ್ನು ದಾನ ಮಾಡಿ. ಗುರು ಶಿವನ ದೇವಸ್ಥಾನದಲ್ಲಿ ಏಕಾದಶ ರುದ್ರಾಭಿಷೇಕವನ್ನು ಮಾಡಬೇಕು. ನಿತ್ಯವೂ ಪಂಚಾಂಕ್ಷರಿ ಜಪ ಮಾಡಬೇಕು.

    Click to comment

    Leave a Reply

    Your email address will not be published. Required fields are marked *

    More in Dina Bhavishya

    To Top