ಮುಖ್ಯ ಸುದ್ದಿ
ಯಾದಗಿರಿಯ PSI ಪರಶುರಾಮ್ ಸಾವು | CBI ತನಿಖೆಗೆ ವಹಿಸುವಂತೆ ಕರುನಾಡ ವಿಜಯಸೇನೆಯಿಂದ ಒತ್ತಾಯ
CHITRADURGA NEWS | 03 AUGUST 2024
ಚಿತ್ರದುರ್ಗ: ಯಾದಗಿರಿಯ ಪಿ.ಎಸ್.ಐ. ಪರಶುರಾಮ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದನ್ನು ಸಿ.ಬಿ.ಐ ತನಿಖೆಗೆ ವಹಿಸುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.
ಕ್ಲಿಕ್ ಮಾಡಿ ಓದಿ: VV Sagara: ವಿವಿ ಸಾಗರ | ಇಂದಿನ ಜಲಾಶಯದ ನೀರಿನ ಮಟ್ಟ ಎಷ್ಟಿದೆ
ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ಯಾದಗಿರಿ ಪೊಲೀಸ್ ಠಾಣೆಯಲ್ಲಿಯೇ ಮುಂದುವರೆಯಬೇಕಾದರೆ ಮೂವತ್ತು ಲಕ್ಷ ರೂ.ಗಳನ್ನು ನೀಡುವಂತೆ ಪದೆ ಪದೆ ನನ್ನ ಪತಿ ಪರಶುರಾಮ್‍ಗೆ ಹಿಂಸಿಸುತ್ತಿದ್ದರೆಂದು ಪತ್ನಿ ಶ್ವೇತಾ ರಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.
ಕೇವಲ 7 ತಿಂಗಳಲ್ಲಿ ಪರಶುರಾಮ್‍ರನ್ನು ಸಿ.ಇ.ಎನ್.ಪೊಲೀಸ್ ಠಾಣೆಗೆ ವರ್ಗಾಯಿಸಿ ಯಾದಗಿರಿಯಲ್ಲಿಯೇ ಮುಂದುವರೆಯಬೇಕಾದರೆ ಹಣ ನೀಡುವಂತೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ಹಣಕ್ಕೆ ಪೀಡಿಸುತ್ತಿದ್ದುದನ್ನು ನೋಡಿದರೆ ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ, PSI ಪರುಶುರಾಮ್‍ರವರ ಅನುಮಾನಾಸ್ಪದ ಸಾವನ್ನು ಸಿ.ಬಿ.ಐ ಗೆ ವಹಿಸಿದರೆ ನಿಜಾಂಶ ಬಯಲಿಗೆ ಬರಲಿದೆ ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.
ಕ್ಲಿಕ್ ಮಾಡಿ ಓದಿ: Dhruva Sarja: ಅಭಿಮಾನಿಗೆ ಸಮಾಧಾನ ಮಾಡಿದ ಧ್ರುವ ಸರ್ಜಾ | ಸೆಲ್ಫಿ ಕ್ಲಿಕ್..ಕ್ಲಿಕ್
ಈ ವೇಳೆ ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ನಿಸಾರ್, ನಾಗರಾಜ್, ಅಖಿಲೇಶ್, ಪ್ರದೀಪ್ ಇದ್ದರು.