Connect with us

    ವಿಚಾರಣಾಧೀನ ಕೈದಿ ಸಾವು

    ಜಿಲ್ಲಾ ಕಾರಾಗೃಹ

    ಕ್ರೈಂ ಸುದ್ದಿ

    ವಿಚಾರಣಾಧೀನ ಕೈದಿ ಸಾವು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 03 APRIL 2024

    ಚಿತ್ರದುರ್ಗ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಬುಧವಾರ ನಸುಕಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

    ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ಕೆ.ಎನ್.ರಮೇಶ್ (33) ಮೃತ ಕೈದಿ. ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ, 2021ರಿಂದ ಜೈಲಿನಲ್ಲಿದ್ದ.

    ಇದನ್ನೂ ಓದಿ: ಅಡಿಕೆ ತೋಟದಲ್ಲಿ ಗಾಂಜಾ ಬೆಳೆ ಹತ್ತು ವರ್ಷ ಜೈಲು ಶಿಕ್ಷೆ

    ಬುಧವಾರ ನಸುಕಿನಲ್ಲಿ ರಮೇಶ್‍ಗೆ ಎದೆನೋವು ಕಾಣಿಸಿಕೊಂಡಿದೆ. ಕಾರಾಗೃಹ ಸಿಬ್ಬಂದಿ ತಕ್ಷಣ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಾರ್ಗ ಮಾಧ್ಯದಲ್ಲಿಯೇ ಕೈದಿ ಮೃತಪಟ್ಟಿದ್ದಾನೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top