Connect with us

    ಖಾಸಗಿ ಶಾಲೆ ಶುಲ್ಕದ ಏರಿಕೆಗೆ ಕಡಿವಾಣ ಹಾಕಿ | ಎಎಪಿ ಜಿಲ್ಲಾಧ್ಯಕ್ಷ ಜಗದೀಶ್

    ಸುದ್ದಿಗೋಷ್ಟಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಬಿ.ಈ.ಜಗದೀಶ್

    ಮುಖ್ಯ ಸುದ್ದಿ

    ಖಾಸಗಿ ಶಾಲೆ ಶುಲ್ಕದ ಏರಿಕೆಗೆ ಕಡಿವಾಣ ಹಾಕಿ | ಎಎಪಿ ಜಿಲ್ಲಾಧ್ಯಕ್ಷ ಜಗದೀಶ್

    CHITRADURGA NEWS | 18 MAY 2024

    ಚಿತ್ರದುರ್ಗ: ನಗರದ ಖಾಸಗಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡುತ್ತಿವೆ, ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಮ್ ಆದ್ಮಿ ಪಾರ್ಟಿಜಿಲ್ಲಾಧ್ಯಕ್ಷ ಬಿ.ಈ.ಜಗದೀಶ್ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಜಯದೇವ ಗುರುಗಳ ನೆಚ್ಚಿನ ಶಿಷ್ಯ ಜಯವಿಭವ ಸ್ವಾಮೀಜಿ | ಮುರುಘಮಠದಲ್ಲಿ ಸ್ಮರಣೋತ್ಸವ

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಡ ಹಾಗೂ ಮಧ್ಯಮ ವರ್ಗದವರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೂಡಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ, ಈ ಹಿನ್ನಲೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದರ ಮೂಲಕ ಸರಿಯಾದ ರೀತಿಯಲ್ಲಿ ಪ್ರವೇಶ ಶುಲ್ಕವನ್ನು ನಿಗಧಿ ಮಾಡಬೇಕು.

    ಇತ್ತೀಚಿನ ದಿನದಲ್ಲಿ ಎಲ್ಲಾ ಪೋಷಕರು ಸಹಾ ತಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಬೇಕೆಂದು ಇಷ್ಟ ಪಡುತ್ತಿದ್ದಾರೆ, ಆದರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಪ್ರತಿ ವರ್ಷ ತಮ್ಮ ಶಾಲೆಯ ಪ್ರವೇಶ ಶುಲ್ಕವನ್ನು 15 ರಿಂದ 20 ರಷ್ಟು ಹೆಚ್ಚಳ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಮಕ್ಕಳ ಆರೋಗ್ಯದ ಕಾಳಜಿಗೆ ಆಸ್ಪತ್ರೆ ನಿರ್ಮಿಸಿದ ಸ್ವಾಮೀಜಿ | ಜಯವಿಭವ ಶ್ರೀಗಳ ಸಾಧನೆ ಸ್ಮರಿಸಿದ ಡಾ.ಬಸವಕುಮಾರ ಸ್ವಾಮೀಜಿ

    ಸರ್ಕಾರ ನಡೆಸುತ್ತಿರುವ ಶಾಲೆಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬೇಕಿದೆ, ಇದಕ್ಕೆ ಅಗತ್ಯವಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ನೀಡಬೇಕಿದೆ. ಇದರೊಂದಿಗೆ ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಇಂತಿಷ್ಟು ಸೌಲಭ್ಯಗಳನ್ನು ಸರ್ಕಾರ ನೀಡಲು ಮುಂದಾಗಬೇಕಿದೆ. ಆಗ ಮಾತ್ರ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಬರಲು ಸಾಧ್ಯವಿದೆ.

    ಸರ್ಕಾರ ಮತ್ತು ಜಿಲ್ಲಾಡಳಿತ ಖಾಸಗಿ ಶಾಲೆಗಳ ಪ್ರವೇಶ ಶುಲ್ಕಕ್ಕೆ ಸಂಬಂಧಪಟ್ಟಂತೆ ನಿಗಧಿ ಮಾಡಲು ಸಮಿತಿಯನ್ನು ರಚನೆ ಮಾಡುವುದರ ಮೂಲಕ ಸರಿಯಾದ ರೀತಿಯಲ್ಲಿ ಮಾನದಂಡವನ್ನು ಬಳಸಿ ಶುಲ್ಕವನ್ನು ನಿಗಧಿ ಮಾಡುವಂತೆ ಅಗ್ರಹಿಸುತ್ತಿದ್ದಾರೆ.

    ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಪರವಾನಗಿ ನವೀಕರಣ | ಜನರ ಸೇವೆಗೆ ಮುಕ್ತ

    ಪತ್ರಿಕಾಗೋಷ್ಟಿಯಲ್ಲಿ ಸೈಯದ್ ಷಾ ತನ್ವಿರ್, ಆಕ್ವರ್ ಖಾನ್, ರವಿ. ವಿಜಯ, ಜಬೀವುಲ್ಲಾ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top