ಹಿರಿಯೂರು
ಚಾನೆಲ್ ನೀರಿನಲ್ಲಿ ಶವ ಹೊತ್ತೊಯ್ದು ಅಂತ್ಯ ಸಂಸ್ಕಾರ | ರಸ್ತೆ, ಸೇತುವೆ ವ್ಯವಸ್ಥೆ ಇಲ್ಲದ ಸ್ಮಶಾನ
CHITRADURGA NEWS | 25 MAY 2024
ಹಿರಿಯೂರು: ಎದೆ ಮಟ್ಟ ಹರಿಯುವ ಚಾನೆಲ್ ನೀರಿನಲ್ಲಿ ಶವ ಹೊತ್ತು ದಾಟಿ ಸ್ಮಶಾನಕ್ಕೆ ಹೋಗಿ ಅಂತ್ಯಕ್ರಿಯೆ ನಡೆಸಿರುವ ಘಟನೆ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.
ರಿಯೂರು ತಾಲೂಕು ಹುಚ್ಚವ್ವನಹಳ್ಳಿ ಗ್ರಾಮಕ್ಕೆ ತಾಲೂಕು ಆಡಳಿತ ನೀಡಿರುವ ಸ್ಮಶಾನಕ್ಕೆ ಚಾನೆಲ್ ದಾಟಿ ಹೋಗಬೇಕಿದೆ. ಇಲ್ಲಿಗೆ ಸರಿಯಾದ ರಸ್ತೆ, ಸೇತುವೆ ಇಲ್ಲದ ಕಾರಣ ಈಗ ಹರಿಯುವ ನೀರಿನಲ್ಲಿ ಶವ ಹೊತ್ತು ಸಾಗಿದ ಘಟನೆ ಜರುಗಿದೆ.
ಇದನ್ನೂ ಓದಿ: ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ | ಮೂರು ದಿನದ ಬಳಿಕ ಮತ್ತೆ ಹಾಜರಾದ ಮಳೆರಾಯ
ಗುಯಿಲಾಳು ಟೋಲ್ ಬಳಿ ಮೇ.24 ಶುಕ್ರವಾರ ಹುಚ್ಚವ್ವನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ಎಂಬ ವ್ಯಕ್ತಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನಡೆಸಲು ಬಂಧುಗಳು, ಸಂಬಂಧಿಕರು ತಿಪ್ಪೇಸ್ವಾಮಿ ಅವರ ಮೃತ ದೇಹ ಹೊತ್ತು ಇಳಿ ಜಾರಿನ ಚಾನೆಲ್ ಇಳಿದು, ನೀರಿನಲ್ಲಿ ಸಾಗಿ ಮತ್ತೆ ಮೇಲೇರಿ ಸ್ಮಶಾನ ತಲುಪಿದ್ದಾರೆ.
ಇದನ್ನೂ ಓದಿ: ಬೆಸ್ಕಾ ಕಚೇರಿ ಸ್ಥಳಾಂತರ | ಇನ್ನೂ ವಿದ್ಯುತ್ ಬಿಲ್ ಕಟ್ಟಲು ಇಲ್ಲಿಗೆ ಬನ್ನಿ
ನೀರಿನಲ್ಲಿ ಶವ ಸಾಗಿಸುವಾಗ ವ್ಯಕ್ತಿಯೊಬ್ಬರ ಕೈಗೆ ಪೆಟ್ಟಾದ ಘಟನೆಯೂ ನಡೆದಿದೆ.
ಮಳೆ ಬಂದಾಗ ಹಾಗೂ ವಿವಿ ಸಾಗರದಿಂದ ನೀರು ಬಿಟ್ಟಾಗ ಇಲ್ಲಿ ಸಮಸ್ಯೆ ಆಗುತ್ತಿದ್ದು, ಸೇತುವೆ ಹಾಗೂ ರಸ್ತೆ ವ್ಯವಸ್ಥೆ ಕಲ್ಪಿಸದ ತಾಲೂಕು ಆಡಳಿತದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.