ಮುಖ್ಯ ಸುದ್ದಿ
ಜಿಲ್ಲಾಸ್ಪತ್ರೆಯಲ್ಲಿ ಕಡ್ಡಾಯವಾಗಿ ರಸೀದಿ ಪಡೆಯಿರಿ | ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮನವಿ

CHITRADURGA NEWS | 16 JANUARY 2025
ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ಎ.ಬಿ-ಎ.ಆರ್.ಕೆ ಅಡಿಯಲ್ಲಿ ನೋಂದಣಿಯಾದ ಅರ್ಹ ಫಲಾನುಭವಿಗಳಿಗೆ ಎಲ್ಲಾ ರಕ್ತ ಪರೀಕ್ಷೆಗಳು, ಸಿ.ಟಿ.ಸ್ಕ್ಯಾನ್, ಎಕ್ಸ-ರೇ, ಸ್ಕ್ಯಾನಿಂಗ್, ಆರ್ಥೋಇಂಪ್ಲಾಂಟಗಳು, ಔಷಧಿಗಳು ಮತ್ತು ಮಾತ್ರೆಗಳು ಉಚಿತವಾಗಿ ನೀಡಲಾಗುತ್ತದೆ.
Also Read: ನಟ ದರ್ಶನ್ ಕಡೆಯಿಂದ ನಯಾಪೈಸೆ ಪಡೆದಿಲ್ಲ | ರೇಣುಕಸ್ವಾಮಿ ಕುಟುಂಬ

ಒಂದು ವೇಳೆ ಎ.ಬಿ.-ಎ.ಆರ್.ಕೆ ಅಡಿಯಲ್ಲಿ ನೋಂದಣಿಯಾಗದ ರೋಗಿಗಳು ನಿಗದಿತ ಶುಲ್ಕವನ್ನು ಪಾವತಿಸಿ ಕಡ್ಡಾಯವಾಗಿ ರಸೀದಿಯನ್ನು ಕೇಳಿ ಪಡೆಯುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮನವಿ ಮಾಡಿದ್ದಾರೆ.
ರೋಗಿಗಳು ಆಸ್ಪತ್ರೆಗೆ ಬರುವಾಗ ತಮ್ಮ ಆಧಾರ್ ಕಾರ್ಡ, ರೇಷನ್ ಕಾರ್ಡ್‍ಗಳ ನಕಲು ಪ್ರತಿಗಳನ್ನು ತರುವುದು ಹಾಗೂ ಒಳ ರೋಗಿಗಳಾಗಿ ದಾಖಲಾಗುವ ಸಂದರ್ಭದಲ್ಲಿ ತಪ್ಪದೇ ಎ.ಬಿ.-ಎ.ಆರ್.ಕೆ ಕೊಠಡಿಗಳಲ್ಲಿ ಎಂಟ್ರಿ ಮಾಡಿಸಬೇಕು, ಆದರೆ ರೋಗಿಗಳು ಇತ್ತಿಚಿನ ದಿನಗಳಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ನಂತರ ಬಂದು ರೆಫರಲ್ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಒತ್ತಡವನ್ನು ಹಾಕುತ್ತಿರುತ್ತಾರೆ. ರೋಗಿಗಳು ಮೊದಲು ಸಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು.
ಒಂದು ವೇಳೆ ಸದರಿ ಚಿಕಿತ್ಸೆ ಲಭ್ಯವಿಲ್ಲದಿದ್ದಾಗ ಎ.ಬಿ.-ಎ.ಆರ್.ಕೆ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ಮಾಡಿಕೊಡಲಾಗುತ್ತದೆ.
Also Read: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರು ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡಬಾರದು.
ಯಾರದರೂ ಹಣ ಕೇಳಿದ್ದಲ್ಲಿ ಹಾಗೂ ಯಾವುದೇ ದೂರುಗಳು ಇದ್ದಲ್ಲಿ ಮೊಬೈಲ್ ಸಂಖ್ಯೆ 9448943163 ಗಮನಕ್ಕೆ ತರುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
