ಮುಖ್ಯ ಸುದ್ದಿ
ಮೊಬೈಲ್ ಗೀಳಿನಿಂದ ಹೊರ ಬನ್ನಿ | ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ
CHITRADURGA NEWS | 20 JUNE 2024
ಚಿತ್ರದುರ್ಗ: ಮೊಬೈಲ್ ಗೀಳು ಆರೋಗ್ಯಕ್ಕೆ, ಪ್ರತಿಭೆಗೆ ಹಾನಿಕರಕ. ಆದ್ದರಿಂದ ಇದರಿಂದ ಹೊರ ಬಂದು ಗುರಿಯತ್ತ ಮುನ್ನುಗ್ಗಿ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ. ಕುಮಾರಸ್ವಾಮಿ ತಿಳಿಸಿದರು.
ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಮಟ್ಟದ ಹೌಸ್‍ಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ದೃಷ್ಠಿಯಿಂದ ಹಾಗೂ ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಹೌಸ್‌ಗಳನ್ನು ರಚಿಸಿರುವುದು ಉತ್ತಮ ಕಾರ್ಯಕ್ಕೆ. ವಿದ್ಯಾರ್ಥಿಗಳು ಹೌಸ್‌ಗಳ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದರು.
ಕ್ಲಿಕ್ ಮಾಡಿ ಓದಿ: ಮುಚ್ಚುವ ಹಂತದ ಸರ್ಕಾರಿ ಶಾಲೆ ಉಳಿಸಿದ್ದೇನೆ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
‘ಶಿಸ್ತಿನಿಂದ ಇದ್ದರೆ ನಿಮ್ಮ ಗುರಿ ಸಾಧಿಸಲು ಅವಕಾಶವಾಗುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಚೆನ್ನಾಗಿ ನಿಭಾಯಿಸಿ’ ಎಂದು ತಿಳಿಸಿದರು.
ಸಂಸ್ಥೆ ಕಾರ್ಯದರ್ಶಿ ಬಿ.ವಿಜಯ್ ಕುಮಾರ್ ಹೌಸ್‌ಗಳನ್ನು ಉದ್ಘಾಟಿಸಿ, ’ಪದ್ಮಶ್ರೀ, ಪದ್ಮ ವಿಭೂಷಣ, ಪದ್ಮಭೂಷಣ, ಭಾರತ ರತ್ನ ಎಂಬ ಹೆಸರಿನಲ್ಲಿ ನಾಲ್ಕು ಹೌಸ್ ರಚಿಸಲಾಗಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಹೌಸ್‌ಗಳು ಮಹತ್ವದ ಪಾತ್ರವಹಿಸಲಿವೆ’ ಎಂದರು.
ಕ್ಲಿಕ್ ಮಾಡಿ ಓದಿ: ತಕ್ಷಣದಿಂದ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಿಸಿ | ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ
ಸಂಸ್ಥೆಯ ನಿರ್ದೇಶಕರಾದ ಎಸ್.ಎಂ.ಪೃಥ್ವೀಶ್, ಸುನೀತಾ ವಿಜಯ್ ಕುಮಾರ್, ಮುಖ್ಯ ಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ, ಐಸಿಎಸ್‌ಸಿ ಪ್ರಾಂಶುಪಾಲ ಪಿ.ಬಸವರಾಜಯ್ಯ, ಉಪ ಪ್ರಾಂಶುಪಾಲ ಬಿ.ಅವಿನಾಶ್ ಇದ್ದರು. ವಿದ್ಯಾರ್ಥಿಗಳಾದ ಸನಿಹಾ, ಸಿಂಚನ ನಿರೂಪಿಸಿದರು, ಜುಹಾ ಸಾರಾ ಸ್ವಾಗತಿಸಿದರು, ವರ್ಷಿತಾ ವಂದಿಸಿದರು.