Connect with us

ಗೂಡ್ಸ್ ಟೆಂಪೊ – ಲಾರಿ ನಡುವೆ ಡಿಕ್ಕಿ ಇಬ್ಬರ ದುರ್ಮರಣ

ಗೂಡ್ಸ್ ಟೆಂಪೊ - ಲಾರಿ ನಡುವೆ ಡಿಕ್ಕಿ ಇಬ್ಬರ ದುರ್ಮರಣ

ಕ್ರೈಂ ಸುದ್ದಿ

ಗೂಡ್ಸ್ ಟೆಂಪೊ – ಲಾರಿ ನಡುವೆ ಡಿಕ್ಕಿ ಇಬ್ಬರ ದುರ್ಮರಣ

CHITRADURGA NEWS | 01 JUNE 2024

ಹಿರಿಯೂರು: ಕುರಿ ತುಂಬಿಕೊಂಡು ಹೋಗುತ್ತಿದ್ದ ಮಿನಿ ಗೂಡ್ಸ್ ಟೆಂಪೊ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಳಗ್ಗೆ 7 ಗಂಟೆಗೆ ಹಿರಿಯೂರು ಸಮೀಪದ ಆರ್‍ಕೆ ಪವರ್‍ಜೆನ್ ಬಳಿ ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಅಶೋಕ್ ಲೇಲ್ಯಾಂಡ್ ಮಿನಿ ಗೂಡ್ಸ್ ಟೆಂಪೋ ಡಿಕ್ಕಿಯಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಖಜಾನೆ ಲೂಟಿಯಾಗುತ್ತಿದೆ | ಗೋವಿಂದ ಕಾರಜೋಳ

ಡಿಕ್ಕಿಯ ರಭಸಕ್ಕೆ ಟೆಂಪೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಚಳ್ಳಕೆರೆ ತಾಲೂಕು ಹುಲಿಕುಂಟೆಯ ರಮೇಶ್(50) ಹಾಗೂ ಬೆಳಗೆರೆಯ ಶಿವಲಿಂಗಪ್ಪ(65) ಎಂದು ಗುರುತಿಸಲಾಗಿದೆ.

ಚಳ್ಳಕೆರೆಯಿಂದ ಹಿರಿಯೂರಿಗೆ ಕುರಿ ಮಾರುಕಟ್ಟೆಗೆ ಕುರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಟೆಂಪೋ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯಕ್ಕೆ ದಿನಗಣನೆ | ಮಧ್ಯಾಹ್ನದೊಳಗೆ ಫಲಿತಾಂಶ ಘೋಷಣೆ ಸಾಧ್ಯತೆ

ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಇನ್ಸ್‍ಪೆಕ್ಟರ್ ಕಾಳಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
Exit mobile version