ಮುಖ್ಯ ಸುದ್ದಿ
Chitradurga: ಸಿಟಿ (city Institute) ಕ್ಲಬ್ ಚುನಾವಣೆ | ವೆಂಕಟೇಶ್ ರೆಡ್ಡಿ ಕಾರ್ಯದರ್ಶಿ | ಜಯ್ಯಣ್ಣ ಉಪಾಧ್ಯಕ್ಷ | ಅಜಿತ್‍ಕುಮಾರ್ ಜೈನ್ ಖಜಾಂಚಿ
CHITRADURGA NEWS | 30 NOVEMBER 2024
ಚಿತ್ರದುರ್ಗ: ಜಿದ್ದಾಜಿದ್ದಿನಿಂದ ಕೂಡಿದ್ದ ನಗರದ ಪ್ರತಿಷ್ಠಿತ (Chitradurga) ಸಿಟಿ ಇನ್ಸ್‍ಟಿಟ್ಯೂಟ್(ಸಿಟಿ ಕ್ಲಬ್) ಕಾರ್ಯದರ್ಶಿಯಾಗಿ ಎಲ್.ಎನ್.ವೆಂಕಟೇಶ ರೆಡ್ಡಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಟಿ.ಎಸ್.ಎನ್.ಜಯಣ್ಣ ಹಾಗೂ ಖಜಾಂಜಿಯಾಗಿ ಅಜಿತ್‍ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಹರಿಯುವ ಮಾರ್ಗದಲ್ಲಿದ್ದ ಸೇತುವೆ ಕುಸಿತ |ವಿವಿ ಸಾಗರಕ್ಕೆ ಹರಿಯುವ ನೀರು ಸ್ಥಗಿತ
ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ವೆಂಕಟೇಶರೆಡ್ಡಿ 296 ಮತ ಪಡೆದರೆ, ಪ್ರತಿಸ್ಪರ್ಧಿಯಾಗಿ ಮಾಜಿ ಕಾರ್ಯದರ್ಶಿ ಬಿ.ಚಿತ್ರಲಿಂಗಪ್ಪ 270 ಮತ ಪಡೆದರು. ವೆಂಕಟೇಶ ರೆಡ್ಡಿ 26 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮತದಾನದಿಂದ ಹಲವು ಸದಸ್ಯರು ವಂಚಿತರಾಗಿದ್ದರು. ಅನೇಕರು ಹೈಕೋರ್ಟ್ ಮೊರೆ ಹೋಗಿ ಮತದಾನದ ಹಕ್ಕು ಪಡೆದುಕೊಂಡಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಬಾರಿಯ ಕ್ಲಬ್ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿತ್ತು.
ಇದನ್ನೂ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜು | ಬೋಧಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಕ್ಲಬ್‍ನ ಹತ್ತು ಪದಾಧಿಕಾರಿಗಳ ಹುದ್ದೆಗಳಿಗೆ 22 ಮಂದಿ ಸ್ಪರ್ಧೆ ಮಾಡಿದ್ದರು. ಒಟ್ಟು 666 ಮಂದಿ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯದರ್ಶಿ, ಉಪಾಧ್ಯಕ್ಷರ ಸ್ಥಾನಕ್ಕೆ ತಲಾ ಇಬ್ಬರು ಹಾಗೂ ಖಜಾಂಚಿ ಸ್ಥಾನಕ್ಕೆ ಮೂರು ಮಂದಿ ಸ್ಪರ್ಧೆ ಮಾಡಿದ್ದರು. 7 ನಿರ್ದೇಶಕರ ಸ್ಥಾನಗಳಿಗೆ 15 ಮಂದಿ ನಾಮಪತ್ರ ಸಲ್ಲಿಸಿದ್ದರು.
ಇದನ್ನೂ ಓದಿ: ಭೀಮಸಮುದ್ರದಲ್ಲಿ ಜಿ.ಮಲ್ಲಿಕಾರ್ಜುನಪ್ಪ, ಶ್ರೀಮತಿ ಹಾಲಮ್ಮ ಪುಣ್ಯತಿಥಿ
ಶನಿವಾರ ಬೆಳಿಗ್ಗೆ 9 ಗಂಟೆಗೆ ಮತದಾನ ಪ್ರಾರಂಭವಾಯಿತು. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರುವ ಸದಸ್ಯರು ಆಗಮಿಸಿ ಮತದಾನ ಮಾಡಿದರು. ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು.