ಮುಖ್ಯ ಸುದ್ದಿ
ಶೋಭಾಯಾತ್ರೆಗೆ ಸಿದ್ಧವಾಗಿರುವ ಚಿತ್ರದುರ್ಗದಲ್ಲಿ ಸೆಲ್ಫಿ ಪಾಯಿಂಟ್ ಎಲ್ಲಿವೆ ಗೊತ್ತಾ…

Published on
ಚಿತ್ರದುರ್ಗ ನ್ಯೂಸ್. ಕಾಂ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ಅಂಗವಾಗಿ ಚಿತ್ರದುರ್ಗ ನಗರ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
ಹೊಳಲ್ಕೆರೆ ರಸ್ತೆಯ ಚಂದ್ರವಳ್ಳಿ ಕ್ರಾಸ್ ನಿಂದ ಚಳ್ಳಕೆರೆ ಗೇಟ್ ವರೆಗೆ ಮಾರ್ಗದುದ್ದಕ್ಕೂ ಹಾಕಿರುವ ಬಂಗಾರದ ಬಣ್ಣದ ಲೈಟುಗಳು ಹೊಸ ನೋಟವನ್ನೇ ಕೊಡುತ್ತಿವೆ.

ಮದಕರಿ-ಆದಿಯೋಗಿ
ಇನ್ನೂ ನಗರದ ಗಾಂಧಿ ವೃತ್ತ, ಮದಕರಿ ನಾಯಕರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತ, ಒನಕೆ ಒಬವ್ವ ವೃತ್ತ, ಜೈನ ವೃತ್ತ, ಓಂ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ.

ಸೆಲ್ಫಿ ಪಾಯಿಂಟ್
ಎಲ್ಲ ಕಡೆ ಜನ ಮುಗಿಬಿದ್ದು ಪೋಟೊ, ವಿಡಿಯೋ ತೆಗೆದುಕೊಳ್ಳುತ್ತಿದ್ದಾರೆ. ರಸ್ತೆಯುದ್ದಕ್ಕೂ ವಿಡಿಯೋ ಮಾಡಿಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿವೆ. ಮನೆ ಮಂದಿಯೆಲ್ಲಾ ಬಂದು ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಇದೆಲ್ಲದರ ಜೊತೆಗೆ ಪ್ರವಾಸಿ ಮಂದಿರದ ಮುಂಭಾಗದ ಜೈನ ವೃತ್ತ ಹಾಗೂ ಓಂ ವೃತ್ತದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ವಿಶೇ ವ್ಯವಸ್ಥೆ ಮಾಡಲಾಗಿದೆ.
Continue Reading
Related Topics:bajarangadal, Chitradurga, Decoration, hindu mahaganapathi, Kannada Lates News, RSS, spacial, VHP, ಕನ್ನಡ ಲೇಟೆಸ್ಟ್ನ್ಯೂಸ್, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಡೆಕೋರೇಷನ್, ಬಜರಂಗಳ, ವಿಶ್ವಹಿಂದೂ ಪರಿಷತ್, ಸೆಲ್ಫಿ ಪಾಯಿಂಟ್, ಹಿಂದೂ ಮಹಾಗಣಪತಿ

Click to comment