ಮುಖ್ಯ ಸುದ್ದಿ
ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಸೆಪ್ಟಂಬರ್ 18ಕ್ಕೆ, ಶೋಭಾಯಾತ್ರೆ ಅಕ್ಟೋಬರ್ 8ಕ್ಕೆ ನಿಗಧಿ | 10 ಅಡಿ ಎತ್ತರದ ಗಣಪ ಪ್ರತಿಷ್ಠಾಪನೆಗೆ ತೀರ್ಮಾನ
ಚಿತ್ರದುರ್ಗ: ವಿಶ್ವಹಿಂದೂ ಪರಿಷತ್-ಬಜರಂಗದಳದಿಂದ ಆಯೋಜಿಸುವ ಹಿಂದೂ ಮಹಾಗಣಪತಿ ಉತ್ಸವ ಈ ವರ್ಷ ಸೆಪ್ಟಂಬರ್ 18 ರಂದು ಗಣಪನ ಪ್ರತಿಷ್ಠಾಪನೆಯಾಗಲಿದ್ದು, ಅಕ್ಟೋಬರ್ 8 ರಂದು ಬೃಹತ್ ಶೋಭಾಯಾತ್ರೆ ನಂತರ ಚಂದ್ರವಳ್ಳಿ ಬಳಿ ವಿಸರ್ಜನೆ ನಡೆಯಲಿದೆ.
2023ನೇ ಸಾಲಿನ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಸಂಘ ಪರಿವಾರದ ಹಿರಿಯ ಮುಖಂಡ ಜಿ.ಎಂ.ಸುರೇಶ್ ಅವರನ್ನು ಆಯ್ಕೆ ಮಾಡಿದ್ದು, ಅವರ ನೇತೃತ್ವದ ಹಲವು ಸಮಿತಿಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.
ಗುರುವಾರ ವಿ.ಪಿ.ಬಡಾವಣೆಯಲ್ಲಿರುವ ವಿಎಚ್‍ಪಿ ಕಚೇರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಲಾಯಿತು.
ಈ ವೇಳೆ ಜಿ.ಎಂ.ಸುರೇಶ್ ಮಾತನಾಡಿ, ಹಿಂದೂ ಮಹಾಗಣಪತಿ ಉತ್ಸವದ ನಿರ್ವಹಣೆಗಾಗಿ 40 ಜನರ ಸಮಿತಿ ರಚನೆ ಮಾಡಲಾಗುತ್ತಿದೆ. ಸೆಪ್ಟಂಬರ್ 3 ರಂದು ಹಿಂದು ಮಹಾಗಣಪತಿಯ ಪೆಂಡಾಲ್ ನಿರ್ಮಾಣಕ್ಕೆ ಧ್ವಜ ಪೂಜೆ ನಡೆಯಲಿದೆ ಎಂದರು.
ಇದನ್ನು ಓದಿ: ಅಡಕೆ ಬೆಳೆಗಾರ ರೈತರೇ ಇಲ್ಲಿ ಗಮನಿಸಿ | ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ ಪಾಲಿಸಿ
ಸೆಪ್ಟಂಬರ್ 18ಕ್ಕೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ
ಸೆಪ್ಟಂಬರ್ 18 ರಂದು ಗಣಪತಿ ಪ್ರತಿಷ್ಠಾಪನೆಯಾಗಲಿದ್ದು, ಇದಕ್ಕೂ ನಾಲ್ಕು ದಿನ ಮೊದಲೇ ಹಿಂದೂ ಮಹಾಗಣಪತಿ ಚಿತ್ರದುರ್ಗ ನಗರಕ್ಕೆ ಆಗಮಿಸಲಿದೆ ಎಂದು ಹೇಳಿದರು.
ಗಣಪತಿ ಪ್ರತಿಷ್ಠಾಪನೆಯ ನಂತರ ಪ್ರತಿ ದಿನ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ವೇದಿಕೆಗೆ ಅಗಲಿದ ವಿಎಚ್‍ಪಿ ಮುಖಂಡರಾದ ಜ.ರಾ.ರಾಮಮೂರ್ತಿ ಅವರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದರು.
ಬಜರಂಗದಳ ಪ್ರಾಂತ ಸಹ ಸಂಯೋಜಕ ಪ್ರಭಂಜನ್ ಮಾತನಾಡಿ, ಪ್ರತಿ ವರ್ಷ ಹಿಂದು ಮಹಾ ಗಣಪತಿ ನಿರ್ಮಾಣ ಅದರ ಕಾರ್ಯಕ್ರಮಗಳ ರೂಪು ರೇಷೆಗಳನ್ನು ನಿರ್ಮಾಣ ಮಾಡಲು ಸಮಿತಿ ರಚನೆ ಮಾಡಲಾಗತ್ತದೆ. ಉತ್ಸವ ಮುಗಿದ ನಂತರ ಲೆಕ್ಕ-ಪತ್ರಗಳನ್ನು ಒಪ್ಪಿಸಿದ ನಂತರ ಈ ಸಮಿತಿ ವಿಸರ್ಜನೆಯಾಗಲಿದೆ. ಹಿಂದು ಮಹಾ ಗಣಪತಿಯ ಕೆಲಸಗಳನ್ನು ಇಂದಿನಿಂದಲೇ ಪ್ರಾರಂಭ ಮಾಡಲಾಗಿದೆ ಉತ್ಸವ ಮುಗಿಯುವವರೆಗೂ ನಿರಂತರವಾಗಿ ಸಮಿತಿ ಕಾರ್ಯಾಚರಣೆ ಮಾಡಲಿದೆ ಎಂದರು.
ಹಿಂದು ಮಹಾಗಣಪತಿ ಉತ್ಸವ ಸಮಿತಿ ಕಾರ್ಯದರ್ಶಿ ಶರಣ್‍ಕುಮಾರ್, ವಿಎಚ್‍ಪಿ-ಬಜರಂಗದಳ ಮುಖಂಡರಾದ ರುದ್ರೇಶ್, ಶ್ರೀನಿವಾಸ್, ಸಂದೀಪ್ ಇದ್ದರು.