Connect with us

    ಚಿತ್ರದುರ್ಗ ಬಿಜೆಪಿ ಟಿಕೇಟ್ ನಾರಾಯಣಸ್ವಾಮಿಗೆ..! | ಶಿವಮೊಗ್ಗ ಮೋದಿ ಸಮಾವೇಶದಲ್ಲಿ ಸಿಕ್ತಾ ಸೂಚನೆ..?

    ಎ.ನಾರಾಯಣಸ್ವಾಮಿ

    ಲೋಕಸಮರ 2024

    ಚಿತ್ರದುರ್ಗ ಬಿಜೆಪಿ ಟಿಕೇಟ್ ನಾರಾಯಣಸ್ವಾಮಿಗೆ..! | ಶಿವಮೊಗ್ಗ ಮೋದಿ ಸಮಾವೇಶದಲ್ಲಿ ಸಿಕ್ತಾ ಸೂಚನೆ..?

    CHITRADURGA NEWS | 18 MARCH 2024

    ಚಿತ್ರದುರ್ಗ: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ಜಿಲ್ಲೆಯ ಜನರು, ಪಕ್ಷದ ಕಾರ್ಯಕರ್ತರ ಪ್ರಶ್ನೆಯಾಗಿದೆ.

    ಬಿಜೆಪಿ ಬಿಡುಗಡೆ ಮಾಡಿದ ಎರಡೂ ಪಟ್ಟಿಯಲ್ಲಿ ಚಿತ್ರದುರ್ಗದ ಅಭ್ಯರ್ಥಿ ಹೆಸರಿರಲಿಲ್ಲ.
    ಆದರೆ, ಶಿವಮೊಗ್ಗದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಯಾರು ಅಭ್ಯರ್ಥಿ ಆಗಬಹುದು ಎನ್ನುವ ಸಣ್ಣ ಸೂಚನೆ ಸಿಕ್ಕಿದಂತೆ ಕಾಣಿಸುತ್ತಿದೆ.

    ಇದನ್ನೂ ಓದಿ: ಚಿತ್ರದುರ್ಗದ ಮತದಾರರೆ ಇಲ್ಲಿದೆ ನೋಡಿ ನಿಮ್ಮ ಮತದಾನದ ದಿನ

    ಹೌದು ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿವಮೊಗ್ಗದಲ್ಲಿ ಬಿಜೆಪಿ ಆಯೋಜಿಸಿರುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಈ ವೇದಿಕೆಯಲ್ಲಿ ಚಿತ್ರದುರ್ಗದ ಹಾಲಿ ಸಂಸದ ಎ.ನಾರಾಯಣಸ್ವಾಮಿ ಭಾಗವಹಿಸಿರುವುದು ಅಚ್ಚರಿ ಮೂಡಿಸಿದೆ.

    ಈವರೆಗೆ ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಬಿಜೆಪಿ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಮೋದಿ ಭಾಗವಹಿಸಿರುವ ಚುನಾವಣಾ ರ್ಯಾಲಿಯಲ್ಲಿ ಶಿವಮೊಗ್ಗ, ದಾವಣಗೆರೆ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ ಅಭ್ಯರ್ಥಿಗಳ ಜೊತೆಗೆ ಚಿತ್ರದುರ್ಗದ ಎ.ನಾರಾಯಣಸ್ವಾಮಿ ಅವರ ಭಾವಚಿತ್ರವನ್ನು ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗಿದೆ.

    ಇದನ್ನೂ ಓದಿ: https://chitradurganews.com/he-move-of-the-bjp-congress-leaders-raised-curiosity/

    ಹಾಲಿ ಸಂಸದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸ್ಪರ್ಧೆ ಬಗ್ಗೆ ನಿರಾಸಕ್ತಿ ಹೊಂದಿದ್ದರು. ಗೋವಿಂದ ಕಾರಜೋಳ ಅವರಿಗೆ ಟಿಕೇಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದರು ಎನ್ನುವ ಸುದ್ದಿಗಳು ಹರಿದಾಡಿದ್ದವು.

    ಈ ನಡುವೆ ಮಾಜಿ ಸಂಸದ ಜನಾರ್ಧನಸ್ವಾಮಿ, ಯುವ ಮುಖಂಡ ಎಂ.ಸಿ.ರಘುಚಂದನ್ ಕೂಡಾ ಟಿಕೇಟ್‍ಗೆ ತೀವ್ರ ಪೈಪೋಟಿ ನಡೆಸಿದ್ದರು.

    ಇದನ್ನೂ ಓದಿ: ದುರ್ಗದ ಸೊಸೆ ದಾವಣಗೆರೆ ಬಿಜೆಪಿ ಅಭ್ಯರ್ಥಿ

    ನಿವೃತ್ತ ಐಎಎಸ್ ಅಧಿಕಾರಿಗಳಾದ ಲಕ್ಷ್ಮೀನಾರಾಯಣ, ಎಂ.ಕೆ.ಶ್ರೀರಂಗಯ್ಯ ಅವರ ಹೆಸರುಗಳು ಕೂಡಾ ಕೇಳಿ ಬಂದಿದ್ದವು.

    ಆದರೆ, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿರುವ ಚುನಾವಣಾ ಪ್ರಚಾರದ ಸಭೆಯಲ್ಲಿ ಮೋದಿ ಅವರ ಪಕ್ಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪಕ್ಕದಲ್ಲೇ ಎ.ನಾರಾಯಣಸ್ವಾಮಿ ಕುಳಿತಿರುವುದು ವಿಶೇಷವಾಗಿದೆ. ಈ ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ವೇದಿಕೆಯಲ್ಲಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಲೋಕಸಮರ 2024

    To Top