ಮುಖ್ಯ ಸುದ್ದಿ
ಚಿತ್ರದುರ್ಗ ಆಕಾಶವಾಣಿಗೆ 35 ವಸಂತ | ದಿನವಿಡೀ ವಿಶೇಷ ಕಾರ್ಯಕ್ರಮ


CHITRADURGA NEWS | 02 MAY 2025
ಚಿತ್ರದುರ್ಗ: 1991 ಮೇ 3 ರಂದು ಆರಂಭವಾದ ಚಿತ್ರದುರ್ಗ ಆಕಾಶವಾಣಿ ಕೇಂದ್ರ ಶನಿವಾರ 34 ವರ್ಷ ಪೂರೈಸಿ 35ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಕೆಳಗೋಟೆಯ ಆಕಾಶವಾಣಿ ಕೇಂದ್ರಕ್ಕೆ ಶನಿವಾರ ಯೋಜನಾ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಲೋಕಸಭಾ ಸದಸ್ಯ ಗೋವಿಂದ ಎಮ್. ಕಾರಜೋಳ ಭೇಟಿ ನೀಡಿ ಶುಭ ಹಾರೈಸಲಿದ್ದಾರೆ.
Also Read: SSLC | ಹಿರಿಯೂರಿನ ಪಿಗ್ಮಿ ಕಲೆಕ್ಟರ್ ಪುತ್ರ, ಸರ್ಕಾರಿ ಶಾಲೆ ಶಿಕ್ಷಕರ ಪುತ್ರಿ ರಾಜ್ಯಕ್ಕೆ ಟಾಪರ್ಸ್
ಸರ್ವೇ ಜನಃ ಸುಖಿನೋ ಭವಂತು, ಎಂಬ ಧ್ಯೇಯ ಮಂತ್ರದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಚಿತ್ರದುರ್ಗ ಆಕಾಶವಾಣಿ ಕೇಂದ್ರ ತನ್ನದೇ ಆದ ಅಪಾರ ಶೋತೃ ಬಳಗ ಹೊಂದಿದೆ.
34 ವರ್ಷದಿಂದ ಮಾಹಿತಿ, ಶಿಕ್ಷಣ, ಮನರಂಜನೆಯ ಪ್ರಸಾರ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಸದ್ಯ ನೆಟ್‌ವರ್ಕ್ ಲೈವ್ ಸ್ಟ್ರಿಮ್, ನ್ಯೂಸ್ ಆನ್ ಏರ್ ಆಪ್ ಹಾಗೂ ಡಿಟಿಹೆಚ್ ಸೇವೆಗಳ ಮೂಲಕ ವಿಶ್ವವ್ಯಾಪಿ ಜಾಲವನ್ನು ವಿಸ್ತರಿಸಿಕೊಂಡಿದೆ.
ಶನಿವಾರ ಮುಂಜಾನೆ 8:30 ರಿಂದ ಸಂಜೆ 7:30 ವರೆಗೆ ಚಿತ್ರದುರ್ಗ ಆಕಾಶವಾಣಿ ವಿಶೇಷ ಕಾರ್ಯಕ್ರಮಗಳು ಬಿತ್ತರವಾಗಲಿವೆ.
ಮುಂಜಾನೆ 8:30 ರಿಂದ 9 ಗಂಟೆಯವರೆಗೆ ಚಿತ್ರನಟಿ ಅದಿತಿ ಪ್ರಭುದೇವ ಅವರೊಂದಿಗೆ ನೇರ ಸಂದರ್ಶನ, 9 ರಿಂದ 10 ಗಂಟೆಯವರೆಗೆ ಕೇಳುಗರೊಂದಿಗೆ ನೇರ ಫೊನ್ ಇನ್ ಕಾರ್ಯಕ್ರಮ, 10 ರಿಂದ 11 ಗಂಟೆಯವರೆಗೆ ಸಾಧಕರ ಪರಿಚಯಾತ್ಮಕ ಸರಣಿ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ಶಿಷ್ಯ ಪಿ.ಹೆಚ್.ವಿಶ್ವನಾಥ್ ಭಾಗವಹಿಸುವರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
11 ರಿಂದ 12 ಗಂಟೆಯ ವರೆಗೆ ಹೆಸರಾಂತ ಹಾಡುಗಾರ ತೋಟಪ್ಪ ಉತ್ತಂಗಿ ಅವರಿಂದ ಗಾನಸುಧೆ ಕಾರ್ಯಕ್ರಮ, ನಂತರ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ತಮ್ಮ ಸವಿ ನೆನಪು ಹಂಚಿಕೊಳ್ಳಲಿದ್ದಾರೆ.
ಮಧ್ಯಾಹ್ನ 2:40 ರಿಂದ 3:40 ವರೆಗೆ ಕಾದಂಬರಿಕಾರ ಹಾಗೂ ಚಲಚಿತ್ರ ಸಾಹಿತಿ ಡಾ.ಬಿ.ಎಲ್.ವೇಣು ನೇರ ಮಾತು ಕತೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 5 ರಿಂದ 5:30 ವರೆಗೆ ಕವಿ ಹಾಗೂ ಸಾಹಿತಿಗಳ ಶುಭನುಡಿ ಕಾರ್ಯಕ್ರಮ ಪ್ರಸಾರವಾಗಲಿದೆ. ಸಂಜೆ 5:30 ಕ್ಕೆ ಚಿತ್ರದುರ್ಗ ಆಕಾಶವಾಣಿ ಕುರಿತು ಉದಯೋನ್ಮುಖ ಕವಿಗಳು ಬರೆದ ಕಾವ್ಯಗಳ ಪ್ರಸ್ತುತಿ ಪ್ರಸಾರವಾಗಲಿದೆ.
ಸಂಜೆ 6:50ಕ್ಕೆ ಕೃಷಿ, ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಅಭಿಪ್ರಾಯಗಳನ್ನಾಧರಿಸಿದ ಕಾರ್ಯಕ್ರಮ ಹಾಗೂ ಸಂಜೆ 7:30ಕ್ಕೆ ರೈತ ಕೇಳುಗರ ಅಭಿಪ್ರಾಯ ಆಧರಿಸಿದ ಕಾರ್ಯಕ್ರಮ ಬಿತ್ತರವಾಗುವುದು.
Also Read: SSLC RESULT | ಚಿತ್ರದುರ್ಗ ಜಿಲ್ಲೆ 23ನೇ ಸ್ಥಾನಕ್ಕೆ ತೃಪ್ತಿ | ಇಬ್ಬರು ವಿದ್ಯಾರ್ಥಿಗಳು ಸ್ಟೇಟ್ ಟಾಪರ್ಸ್
ಕೇಳುಗರು ಸದಾ ಕಾಲ ಚಿತ್ರದುರ್ಗ ಆಕಾಶವಾಣಿ ಕೇಂದ್ರಕ್ಕೆ ತಮ್ಮ ಪ್ರೋತ್ಸಾಹ ನೀಡುವಂತೆ ನಿಲಯದ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್.ಭಟ್, ನಿಲಯದ ತಾಂತ್ರಿಕ ಮುಖ್ಯಸ್ಥಾ ಕೆ.ಕೆ. ಮಣಿ ಹಾಗೂ ಪ್ರಸಾರ ಕಾರ್ಯ ಮುಖ್ಯಸ್ಥ ಶಿವಪ್ರಕಾಶ ಡಿ.ಆರ್. ಕೋರಿದ್ದಾರೆ.
