Connect with us

    ಏ.12 ರಿಂದ 28ರವರೆಗೆ ಸಾಣೇಹಳ್ಳಿಯಲ್ಲಿ ಮಕ್ಕಳ ಹಬ್ಬ | ವಿವಿಧ ಸ್ಪರ್ಧೆ ಆಯೋಜನೆ

    ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

    ಹೊಸದುರ್ಗ

    ಏ.12 ರಿಂದ 28ರವರೆಗೆ ಸಾಣೇಹಳ್ಳಿಯಲ್ಲಿ ಮಕ್ಕಳ ಹಬ್ಬ | ವಿವಿಧ ಸ್ಪರ್ಧೆ ಆಯೋಜನೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 13 MARCH 2025

    ಹೊಸದುರ್ಗ: ಶ್ರೀ ಶಿವಕುಮಾರ ಕಲಾಸಂಘ, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಾಗೂ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಏ.12 ರಿಂದ 28ರವರೆಗೆ ಸಾಣೇಹಳ್ಳಿಯಲ್ಲಿ ಮಕ್ಕಳ ಹಬ್ಬ (ಬೇಸಿಗೆ ಶಿಬಿರ) ವನ್ನು ಆಯೋಜಿಸಲಾಗಿದೆ.

    Also Read: ಭಕ್ತ ಸಾಗರದ ನಡುವೆ ಸಾಗಿದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ | ಆಗಸದಲ್ಲಿ ಗರುಢ ಪ್ರದಕ್ಷಿಣೆ

    ಮಕ್ಕಳ ಹಬ್ಬದಲ್ಲಿ ಕೋಲಾಟ, ಚಿತ್ರಕಲೆ, ಮಣ್ಣಾಟ, ವೀರಗಾಸೆ, ಯೋಗಾಸನ, ರಂಗಾಟಗಳು, ದಿನಕ್ಕೊಂದು ಪದ್ಯ ರಚನೆ, ಮುಖವಾಡ ತಯಾರಿ, ಒಂದು ದಿನದ ಪ್ರವಾಸ, ಕಥೆ ಹೇಳುವ ಮತ್ತು ಕಥೆ ಕಟ್ಟುವ ತರಗತಿ, ಮಕ್ಕಳ ಸಿನಿಮಾ ವೀಕ್ಷಣೆ, ಮಕ್ಕಳ ತೇರು, ಪರಿಸರದ ಮೇಲಿನ ಉಪನ್ಯಾಸ, ನೃತ್ಯರೂಪಕಗಳು, 3 ಅಥವಾ 4 ನಾಟಕಗಳ ತಯಾರಿ ಹಾಗೂ ಪ್ರದರ್ಶನ ಸೇರಿದಂತೆ ಮುಂತಾದ ಚಟುವಟಿಕೆಗಳು ಇರುತ್ತವೆ.

    ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಸಾಣೇಹಳ್ಳಿ ಮಠದಲ್ಲಿ ಇರಬೇಕು, ಅವರಿಗೆ ಊಟ, ವಸತಿಯ ಸೌಲಭ್ಯ ಕಲ್ಪಿಸಲಾಗುವುದು.

    10 ರಿಂದ 14 ವರ್ಷದ ವಯಸ್ಸಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದು.

    Also Read: ಹೊಸದುರ್ಗ-ಹೊಳಲ್ಕೆರೆ ಹೆದ್ದಾರಿಯನ್ನು ಆನಗೋಡು ವರೆಗೆ ವಿಸ್ತರಿಸಿ | ನಿತಿನ್ ಗಡ್ಕರಿಗೆ ಮನವಿ

    ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8861043553, 9972007015 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    More in ಹೊಸದುರ್ಗ

    To Top