Connect with us

Traffic: ಚಿತ್ರದುರ್ಗದಲ್ಲಿ ಬಸ್ ಸಂಚಾರ ವ್ಯವಸ್ಥೆ ಬದಲಾವಣೆ | ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಜಿಲ್ಲಾಡಳಿತ ನಿರ್ಧಾರ

Gandhi circle chitradurga

ಮುಖ್ಯ ಸುದ್ದಿ

Traffic: ಚಿತ್ರದುರ್ಗದಲ್ಲಿ ಬಸ್ ಸಂಚಾರ ವ್ಯವಸ್ಥೆ ಬದಲಾವಣೆ | ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಜಿಲ್ಲಾಡಳಿತ ನಿರ್ಧಾರ

CHITRADURGA NEWS | 11 NOVEMBER 2024

ಚಿತ್ರದುರ್ಗ: ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ರಸ್ತೆಗಳು ಕಿರಿದಾಗಿದ್ದು, ಸಾಕಷ್ಟು ಜನದಟ್ಟಣೆ, ವಾಹನ (Traffic) ದಟ್ಟಣೆ ಕಾರಣಕ್ಕೆ ಸಂಚಾರ ಸಮಸ್ಯೆ ತೀವ್ರವಾಗುತ್ತಲೇ ಇದೆ.

ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ ಹಾಗೂ ನಗರಸಭೆ ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಈಗ ನಗರದ ಮುಖ್ಯ ರಸ್ತೆಗಳಲ್ಲಿ ಬಸ್ಸುಗಳ ಸಂಚಾರ ನಿಷೇಧಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ 

ನಗರದ ಬಿ.ಡಿ.ರಸ್ತೆ, ಮೆದೇಹಳ್ಳಿ ರಸ್ತೆ, ಹೊಳಲ್ಕೆರೆ ರಸ್ತೆಗಳ ಮೂಲಕ ksrtc, ಖಾಸಗಿ ಬಸ್ಸುಗಳು ಆಗಮಿಸಿ ಗಾಂಧಿ ವೃತ್ತದ ಮೂಲಕ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗುವುದು, ಬರುವುದು ಸಾಮಾನ್ಯ.

ಇನ್ನು ಮುಂದೆ ಹೆದ್ದಾರಿಯನ್ನು ಬಳಸಿ ನಗರ ಪ್ರವೇಶಿಸಿ, ಹೆದ್ದಾರಿ ಮೂಲಕವೇ ಚಿತ್ರದುರ್ಗ ನಗರದಂದ ಹೊರಗೆ ಹೋಗುವಂತೆ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು.

ಈ ಸಭೆಯಲ್ಲಿ ಜಿಲ್ಲೆಯಲ್ಲಿ ಆಗುತ್ತಿರುವ ಅಪಘಾತ, ಅಸುರಕ್ಷಿತ ರಸ್ತೆಗಳು, ಟ್ರಕ್ ಟರ್ಮಿನಲ್, ಕಾಮಗಾರಿಗಳು, ನಿರ್ವಹಣೆ ಇತ್ಯಾದಿ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.

ಇದನ್ನೂ ಓದಿ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ | ಹಬ್ಬಿದಾ ಮಲೆಮಧ್ಯದೊಳಗೆ

ಇದೇ ವೇಳೆ ಚಿತ್ರದುರ್ಗ ನಗರದಲ್ಲಿನ ಸಂಚಾರ ಸಮಸ್ಯೆ ಕುರಿತ ಚರ್ಚಿಸಿದ್ದು, ನಗರದ ಬಿ.ಡಿ.ರಸ್ತೆಯ ಮೂಲಕ ಬೆಂಗಳೂರು, ಶಿವಮೊಗ್ಗ ಹಾಗೂ ಚಳ್ಳಕೆರೆ ಮಾರ್ಗಗಳಿಗೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ಸುಗಳ ಸಂಚಾರ ಮಾರ್ಗದ ಬದಲಾವಣೆಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರತಿ ದಿನ ಈಗ ನಗರದಲ್ಲಿ 1200 ಕ್ಕೂ ಹೆಚ್ಚು ಬಸ್‍ಗಳ ಸಂಚಾರ ಈ ಮಾರ್ಗಗಳಲ್ಲಿ ಆಗುತ್ತಿದೆ. ಇದರಿಂದಾಗಿ ಗಾಂಧಿ ವೃತ್ತ ಹಾಗೂ ಎಸ್.ಬಿ.ಐ ಬ್ಯಾಂಕ್ ವೃತ್ತದಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಆಗುತ್ತಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ ಗ್ರಂಥ ಓದುವ ಹವ್ಯಾಸ ರೂಢಿಸಿಕೊಳ್ಳಿ | ತರಳಬಾಳು ಶ್ರೀ 

ಇದನ್ನು ತಪ್ಪಿಸಲು ಹಳೆಯ ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಬಳಸಿಕೊಂಡು ಬಸ್ಸುಗಳು ಸಂಚಾರ ನಡೆಸುವಂತೆ ಶೀಘ್ರದಲ್ಲೇ ಜಿಲ್ಲಾಡಳಿತದಿಂದ ಆದೇಶ ಹೊರಡಿಸಲಾಗುತ್ತದೆ. ಈ ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಕೂಡಾ ಈ ಸಲಹೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version